
ಭಾವಿ ಸಮಿರರಾದ ವಾದಿರಾಜ ಗುರುಸಾರ್ವಭೌಮ ಮಹಿಮೆ ಅಪಾರ
ಗಂಗಾವತಿ, 22- ಭಾವಿ ಸಮಿರರಾದ ವಾದಿರಾಜ ಗುರುಸಾರ್ವಭೌಮರ ಮಹಿಮೆ ಅಪಾರ ವಾಗಿದೆ ಎಂದು ಸೋಂದಾ ವಾದಿರಾಜ ಮಠದ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತಿರ್ಥರು ಹೇಳಿದರು.
ಅವರು ನಗರದ ವಕೀಲ ಹನುಮೇಶ ಅಯೋಧ್ಯಾ ರವರ ಮನೆಯಲ್ಲಿ ಸಂಸ್ಥಾನ ಪೂಜೆ ನೇರವೆರಿಸಿ ಮಾತನಾಡಿ ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥ ಬರೆದ ಮಧ್ವಾಚಾರ್ಯರ ನಂತರ ಲಕ್ಷ್ಮಿಸಾರ ತಾತ್ಪರ್ಯ ನಿರ್ಣಯ ಗ್ರಂಥವನ್ನು ಬರೆದವರು ವಾದಿರಾಜ ಗುರುಸಾರ್ವಭೌಮರು.
ಲಕ್ಷ್ಮಿ ಶೋಭಾನ ಗ್ರಂಥದ ಮೂಲಕ ಮಹಿಮೆಯನ್ನೆ ತೋರಿಸಿದರು.
ಅನೇಕ ಗ್ರಂಥಗಳ ಮೂಲಕ ಮಹಾನ ಕಾರ್ಯಮಾಡಿದ್ದಾರೆ.
ಪ್ರತಿಯೋಬ್ಬರು ವಾದಿರಾಜ ಗುರುಸಾರ್ವಭೌಮರ ನಿರಂತರ ಸ್ಮರಣೆ ಮಾಡಿರಿ ಎಂದರು.
ಈ ಸಂದರ್ಭದಲ್ಲಿ ಹನುಮೇಶ ಅಯೋಧ್ಯಾ ವಕೀಲ, ವಿಜಯ ಡಣಾಪೂರ, ನವಲಿ ಪ್ರಲ್ಹಾದರಾವ ವಕೀಲ, ಹಾವೇರಿ ನಾಗರಾಜ, ನರಸಿಂಹ ಮೂರ್ತಿ ಅಯೋಧ್ಯಾ, ವಿದ್ಯಾಪಿಠದ ಪ್ರಾಚಾರ್ಯ ವಾದಿರಾಜ ಕಲ್ಮಂಗಿ, ಯರಡೋಣ ರಾಮಕೃಷ್ಣ, ಮೋಹಿತ ಅಯೋಧ್ಯಾ, ನವಲಿ ಸುದಿಂದ್ರ ಮುಂತಾದವರು ಉಪಸ್ಥಿತರಿದ್ದರು.