
ಕುಂದುಕೊರತೆ ನಿವಾರಣಾ ಸಮಿತಿ : ಅಧ್ಯಕ್ಷರು, ಸದಸ್ಯರÀ ನೇಮಕ : ಅರ್ಜಿ ಆಹ್ವಾನ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 3 ಸಿರುಗುಪ್ಪ ನಗರಸಭೆ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳ ಕುಂದು ಕೊರತೆ ನಿವಾರಣಾ ಸಮಿತಿಗೆ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ಅರೆಕಾಲಿಕ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿದ್ದು, ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರ ಸ್ಥಾನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತಿಯುಳ್ಳವರು ಅ.೧೯ ರೊಳಗಾಗಿ ಅರ್ಜಿ ಸಲ್ಲಿಸಬಹುದು.
ಅಧ್ಯಕ್ಷರ ಹುದ್ದೆಯ ಅರ್ಹತೆ : ನಿವೃತ್ತ ಸಿವಿಲ್ ನ್ಯಾಯಾಧೀಶರು (ಖeಣiಡಿeಜ ಅiviಟ ಎuಜge) ಆಗಿರಬೇಕು, ವಯೋಮಿತಿ ೬೫ ವರ್ಷದೊಳಗಿರಬೇಕು.
ಸದಸ್ಯರುಗಳು ಸ್ಥಾನಗಳ ಅರ್ಹತೆ : ಒಂದು ಸದಸ್ಯ ಸ್ಥಾನಕ್ಕೆ ಸ್ಥಳೀಯ ಪ್ರದೇಶದ ಕಳಂಕರಹಿತ ಸೇವಾ ದಾಖಲೆಯುಳ್ಳ ರಾಜ್ಯ ಸರ್ಕಾರದ ನಿವೃತ್ತ ‘ಎ’ ದರ್ಜೆಯ ಅಧಿಕಾರಿಯಾಗಿರಬೇಕು. ಇನ್ನೊಂದು ಸದಸ್ಯ ಸ್ಥಾನಕ್ಕೆ ಸ್ಥಳೀಯ ಪ್ರದೇಶದಲ್ಲಿ ಬೀದಿ ಬದಿ ವ್ಯಾಪಾರವನ್ನು ಒಳಗೊಂಡ ಅನೌಪಚಾರಿಕ ಆರ್ಥಿಕ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಪ್ರಖ್ಯಾತ ಸಾಮಾಜಿಕ ಕಾರ್ಯಕರ್ತರಾಗಿರಬೇಕು. ವಯೋಮಿತಿ ೬೫ ವರ್ಷದೊಳಗಿರಬೇಕು.
ಸಂಭಾವನೆ : ಸಮಿತಿಯ ಅಧ್ಯಕ್ಷರಿಗೆ ಪ್ರತಿಬಾರಿಯ ಉಪವೇಶನಕ್ಕೆ ೨೫೦೦ ರೂ.ಗಳ ಗೌರವಧನವನ್ನು ಸರ್ಕಾರದಿಂದ ನಿಗಧಿಪಡಿಸಲಾಗಿರುತ್ತದೆ. ಸಮಿತಿಯ ಸದಸ್ಯರುಗಳಿಗೆ ಪ್ರತಿಬಾರಿಯ ಉಪವೇಶನಕ್ಕೆ ೧೦೦೦ ರೂ.ಗಳ ಗೌರವಧನವನ್ನು ಸರ್ಕಾರದಿಂದ ನಿಗಧಿಪಡಿಸಲಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಿರುಗುಪ್ಪ ನಗರಸಭೆಯ ಡೇ-ನಲ್ಮ್ ಶಾಖೆಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಸಿರುಗುಪ್ಪ ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.