
ಗುರುವಂದನಾ ಕಾರ್ಯಕ್ರಮ, ಮಸೀದಿ ಮಂದಿರಗಳಲ್ಲಿ ಅಂದಿನ ಶಾಲೆಗಳು : ಎರ್ರಿಬಸಪ್ಪ
ಕರುನಾಡ ಬೆಳಗು ಸುದ್ದಿ
ಕಂಪ್ಲಿ, 20- ತಾಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾವಿನಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
1971ರಲ್ಲಿ ಮಾವಿನಹಳ್ಳಿಯಲ್ಲಿ ಶಾಲೆಯನ್ನು ಪ್ರಾರಂಭವಾಗುತ್ತದೆ. ಅಂದಿನ ದಿನಗಳಲ್ಲಿ ಸರ್ಕಾರದ ಕಟ್ಟಡಗಳು ಇಲ್ಲದೆ ಮಸೀದಿ ಗುಡಿಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುತ್ತಾರೆ. 1971ರಲ್ಲಿ ಶಾಲೆಗೆ 20 ವಿದ್ಯಾರ್ಥಿಗಳು ಪ್ರವೇಶಾತಿಯನ್ನು ಪಡೆದುಕೊಂಡಿದ್ದರು.
ಆ ಮಕ್ಕಳಿಗೆ ದಿನ ನಿತ್ಯ ಶಾಲಾ ಚಟುವಟಿಕೆಗಳು ಮತ್ತು ಪಾಠ ಬೋಧನೆ ನಡೆಸುತ್ತಾ ಮಾವಿನಹಳ್ಳಿ ಗ್ರಾಮದಲ್ಲಿ ಅಂದಿನ ಎಂಎಲ್ಎ ಎರ್ರಿಬಸಪ್ಪ ಎಂಬುವರು ಮತ ಕೇಳಲು ಬಂದಾಗ ತರಗತಿಯನ್ನು ನಡೆಸಲು ಕೊಠಡಿಗಳನ್ನು ಕಟ್ಟಿಕೊಡಲು ಮನವಿ ಮಾಡಿ ಆ ಕೆಲಸವನ್ನು ಅಂದಿನ ಎಂಎಲ್ಎ ಎರ್ರಿಬಸಪ್ಪ ನಡೆಸಿಕೊಡುತ್ತಾರೆ ಎಂದು ಇಂದಿನ ಗುರುವಂದನಾ ಕಾರ್ಯಕ್ರಮದ ರೂವಾರಿಯಾದ ಶ್ರೀ ರುದ್ರೇಶ ಸ್ವಾಮಿ ಗುರುಗಳು ಅಂದಿನ ನೆನಪುಗಳು ಬಗ್ಗೆ ಪ್ರಸ್ತಾಪಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಯ ಬಗ್ಗೆ ಹಿಂದಿನ ಕಾಲದಲ್ಲಿ ಬಹಳಷ್ಟು ಕಡಿಮೆ ವಿದ್ಯಾಭ್ಯಾಸ ಕಾಣುತ್ತಿತ್ತು. ಮಕ್ಕಳಿಗೆ ಶಿಕ್ಷಣ ಕೊಡದೇ ಜೀತ ಕಾರ್ಮಿಕರಾಗಿ ಮಾಡುತ್ತಿದ್ದರು ಎಂದು ಎಂ.ಪ್ರವೀಣ ಕುಮಾರ ಹೇಳಿದರು.
ಮಾವಿನಹಳ್ಳಿ ಗ್ರಾಮೀಣ ಜನತೆಗೆ ಮಕ್ಕಳ ಶಿಕ್ಷಣ ಬಗ್ಗೆ ಇತ್ತೀಚೆಗೆ ಬಹಳಷ್ಟು ವಿಚಾರಣೆಯಿಂದ ಶಿಕ್ಷಣವನ್ನು ನಿರಂತರವಾಗಿ ಕೊಡುತ್ತಾ ಮಕ್ಕಳಿಗೆ ಶಿಕ್ಷಣ ಬಗ್ಗೆ ಅರಿವು ಮೂಡಿಸುವ ಕೆಲಸ ಸತತವಾಗಿ ನಡೆಸುತ್ತಿದ್ದಾರೆ ಎಂದು ಶಿಕ್ಷಕರು ನಾಗೇನಹಳ್ಳಿ ಶ್ರೀ ನಾಗರಾಜ್ ಹೇಳಿದರು.
ಇಂದಿನ ಮಕ್ಕಳಿಗೆ ನಾವು ಎಲ್ಲಾ ವಿಷಯಗಳನ್ನು ಕಲಿಯುವುದಕ್ಕೆ ಸರಕಾರ ಸಹಕರಿಸುತ್ತದೆ. ಮಕ್ಕಳಿಗೆ ಇಂಗ್ಲೀಷ್, ಕನ್ನಡ, ಹಿಂದಿ ಮಕ್ಕಳು ಭಯ ಇಲ್ಲದೆ ಶಿಕ್ಷಣ ಎಲ್ಲಾರಿಗೂ ಎಲ್ಲೆಡೆ ಎಂಬಂತೆ ನಡೆಯುತ್ತದೆ ಮಕ್ಕಳಿಗೆ ದಿನ ನಿತ್ಯ ಸಮಯ ಪಾಲನೆ, ವಿಶೇಷ ಬೌದ್ದಿಕ ಮಟ್ಟದ ಶಿಕ್ಷಣ ತಲುಷಿಸಲು ನಾವು ಮುಂದಾಗುತ್ತಿದ್ದೇವೆ.ಅದರಂತೆ ಮಾವಿನಹಳ್ಳಿಯ ಎಲ್ಲಾ ಪೋಷಕರು ಸಹಕಾರ ಸದಾ ನಮ್ಮ ಶಾಲೆಯ ಮೇಲಿದೆ ಎಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಗುರುಗಳಾದ ಶ್ರೀ ಕೆ ನಾಗರಾಜ ಹೇಳಿದರು.
ಶ್ರೀ ಗುರುವಂದನಾ ಕಾರ್ಯಕ್ರಮದಲ್ಲಿ ಶ್ರೀ ರುದ್ರೇಶ ಸ್ವಾಮಿ ಶಾಲೆ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಮತ್ತು ಶಾಲೆಗೆ ರೂ. 20000 ಇಪ್ಪತ್ತು ಸಾವಿರ ರೂಪಾಯಿಗಳನ್ನು ದೇಣಿಗೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ:-ಶ್ರೀ ಮತಿ ಸೌಭಾಗ್ಯ ಲಕ್ಷ್ಮಿ,ಶ್ರೀ ಜೆ ಬಸವರಾಜ ಶಿಕ್ಷಕರು, ಶ್ರೀ ಕುಮಾರಿ ಶ್ವೇತಾ ಶಿಕ್ಷಕಿ,ಎಸ್ ಡಿ ಎಂ ಸಿ ಅಧ್ಯಕ್ಷ ಬಿ.ಕೆ ನಾಗಪ್ಪ ಮತ್ತು ಸರ್ವಸದಸ್ಯರು, ಶ್ರೀ ಎಸ್ ಬಸವರಾಜ, ಶ್ರೀ ಬಿ ಕೆ ಸಿದ್ದಪ್ಪ ಧರ್ಮಪ್ಪ ಬಯಲಾಟ ಕಲಾವಿದರು,ಶ್ರೀ ಸಿ ಸಿದ್ದಬಸಪ್ಪ,ಶ್ರೀ ವಿರುಪಣ್ಣ,ಶ್ರೀ ವಿಠಲಾಪುರ ಸಿದ್ದಪ್ಪ,ಶ್ರೀ ಚಂದ್ರಪ್ಪ ಶಿಕ್ಷಕರು ದೇವಲಾಪುರ,ಎಂ ಪ್ರವೀಣ ಕುಮಾರ್, ಶ್ರೀ ನಾಗರಾಜ್,ಶ್ರೀ ಎಸ್ ಕರಿಬಸಪ್ಪ, ಶ್ರೀ ರಮೇಶ ವಿಠಲಾಪುರ ಎಲ್ಲಾ ವಿದ್ಯಾರ್ಥಿಗಳು ಮತ್ತು ಮಾವಿನಹಳ್ಳಿಯ ರೈತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.