
ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಹೆಚ್.ರಾಮಾಂಜಿನಿ ನೇಮಕ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 26- ತಾಲೂಕಿನ ರೂಪನಗುಡಿ ಗ್ರಾಮದ ಎಚ್.ರಾಮಾಂಜನಿ ಇವರನ್ನು ಇತ್ತೀಚೆಗೆ ಕೆಪಿಸಿಸಿ ಕಚೇರಿಯಲ್ಲಿ ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾದ ರಾಜ್ಯ ಮಟ್ಟದ ರಾಜ್ಯ ಸಮಿತಿ ಸಭೆಯಲ್ಲಿ ಬಳ್ಳಾರಿ ಜಿಲ್ಲೆ ಮತ್ತು ತಾಲೂಕಿನ ರೂಪನಗುಡಿ ಗ್ರಾಮದ ಎಚ್ ರಾಮಾಂಜನಿ ಇವರನ್ನು ಬಳ್ಳಾರಿ ಜಿಲ್ಲಾ ಅಧಕ್ಷರನ್ನಾಗಿ ನೇಮಕ ಮಾಡಿ ಆದೇಶಿಸಲಾಯಿತು.
ಹೆಚ್.ರಾಮಾಂಜಿನಿ (ರೂಪನಗುಡಿ) ಇವರನ್ನು ಕೆಪಿಸಿಸಿಯ ರಾಜ್ಯ ನಾಯಕರು ರಾಜ್ಯ ಸಭಾ ಸದಸ್ಯರಾದ ಜೆಸಿ.ಚಂದ್ರಶೇಖರ್, ವಿಧಾನ ಪರಿಷತ್ ಸದಸ್ಯರಾದ ವಸಂತ ಕುಮಾರ್ ಹಾಗೂ ಹಿರಿಯ ರಾಜ್ಯಾಧ್ಯಕ್ಷರಾದ ಲಕ್ಷ್ಮಿ ವೆಂಕಟೇಶ್ ಮತ್ತು ಯುವ ರಾಜ್ಯಾಧ್ಯಕ್ಷರಾದ ಟಿ ವೈ.ಕುಮಾರ್ ರಾಜ್ಯ ನಾಯಕರ ಸಮ್ಮುಖದಲ್ಲಿ ನೇಮಕ ಮಾಡಿ ಆದೇಶ ಪತ್ರವನ್ನು ನೀಡಲಾಯಿತು.
ಈ ಸಭೆಯಲ್ಲಿ ರಾಜ್ಯದ ನಾಯಕರು ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲೆಯಿಂದ ಕಾಂಗ್ರೆಸ್‌ನ ಕಟ್ಟಾಳುಗಳು ಆಗಮಿಸಿದ್ದೀರಿ ಈಗ ನಡೆಯುವ ಮೂರು ವಿಧಾನ ಸಭಾ ಉಪಚುನಾವಣೆಯಲ್ಲಿ ಮತ್ತು ಮುಂದೆ ಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿ ಗೆಲ್ಲಿಸುವ ಪ್ರಯತ್ನ ಮಾಡಬೇಕು, ಜಿಲ್ಲೆಯಲ್ಲಿರುವ ಪ್ರತಿ ತಾಲೂಕುಗಳಲ್ಲಿ ಗ್ರಾಮ ಪಂಚಾಯಿತಿ ಮತ್ತು ವಾರ್ಡ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೇರು ಮಟ್ಟದಿಂದ ಗಟ್ಟಿಗೊಳಿಸಬೇಕು ಎಂದು ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯ ನಾಯಕ ವಸಂತ್ ಕುಮಾರ್ ತಿಳಿಸಿದರು.
ನೂತನ ಜಿಲ್ಲಾಧ್ಯಕ್ಷ ಹೆಚ್.ರಾಮಾಂಜಿನಿ (ರೂಪನಗುಡಿ) ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಇಂಡಿಯನ್ ನ್ಯಾಶನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ಪಕ್ಷದ ವತಿಯಿಂದ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರನ್ನು ಬೇಟಿ ಮಾಡಿ, ವಿವಿಧ ಘಟಕದ ಸಂಘಟನೆಯನ್ನು ಮಾಡುವ ಮೂಲಕ ಸಾರ್ವಜನಿಕರ ಸಮಸ್ಯೆಗಳ ಕಡೆ ಮತ್ತು ವಿದ್ಯಾರ್ಥಿಗಳು ಸಮಸ್ಯೆ ಇರುವ ಕಡೆ ಮತ್ತು ಕಾರ್ಮಿಕರ ಪರವಾಗಿ ಹೋರಾಟದ ಕೆಲಸ ಮಾಡಲು ನಮ್ಮ ಕಾರ್ಯಕರ್ತರ ಬಳಗದ ಮೂಲಕ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ನನ್ನನ್ನು ಯೂತ್ ಇಂಟೆಟ್ ಕಾಂಗ್ರೆಸ್ ನಲ್ಲಿ ಬಳ್ಳಾರಿ ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಲು ಕಾರಣಕರ್ತರಾದ ಮಾಜಿ ಸಚಿವರು ಹಾಗೂ ಗ್ರಾಮೀಣ ಶಾಸಕರಾದ ಬಿ.ನಾಗೇಂದ್ರ , ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ , ರಾಜ್ಯಸಭಾ ಸದಸ್ಯರಾದ ನಾಸೀರ್ ಹುಸೇನ್ , ಲೋಕಸಭಾ ಸಂಸದರಾದ ಈ.ತುಕಾರಾಮ್, ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ , ಕಂಪ್ಲಿ ಶಾಸಕ ಗಣೇಶ ಸಿರುಗುಪ್ಪ ಶಾಸಕ ಬಿ.ಎಂ ನಾಗರಾಜ್ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಲ್ಲಂ ಪ್ರಶಾಂತ್ , ಲಿಡ್ಕಾರ್ ನಿಗಮದ ಅಧ್ಯಕ್ಷ ಮುಂಡ್ರಿಗಿ ನಾಗರಾಜ್ , ಮಾಜಿ ಜಿಲ್ಲಾ ಪಂಚಾಯತಿ ಎ.ಮಾನಯ್ಯ ಮತ್ತು ಕಾಂಗ್ರೆಸ್ ಪಕ್ಷದ ಮುಂಚೂಣಿ ಘಟಕದ ಅಧ್ಯಕ್ಷರುಗಳಿಗೆ ಮತ್ತು ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರಿಗೆ ಕಾರ್ಯಕರ್ತರಿಗೆ ಮತ್ತು ಎಲ್ಲಾ ಸ್ನೇಹ ಬಳಗದವರಿಗೆ ಪತ್ರಿಕೆ ಮಾಧ್ಯಮದ ಮೂಲಕ ಅಭಿನಂದನೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ತಾಯಪ್ಪ, ಕಾಂಗ್ರೆಸ್ ಯುವ ಮುಖಂಡ ಎಸ್.ಜೆ.ಕೋಟೆ ಉಮೇಶಗೌಡ, ಕಮ್ಮರಚೆಡ್ ಅಕ್ಕಿಶಿವ, ಕುಂಟನಹಾಳ್ ಹೊನ್ನೂರ್ ಸ್ವಾಮಿ, ಅಸುಂಡಿ ಹನುಮೇಶ್, ಚೆಳ್ಳಗುರ್ಕಿ ಉಮೇಶ್, ರೂಪನಗುಡಿ ಆಂಜನೇಯ, ಯಾಲ್ಪಿ ಹೇಮರಾಜ್, ಪಾಲಕ್ಷಿ, ರಫೀಕ್, ಶ್ರೀನಿವಾಸ್, ನಾಗರಾಜ್, ಕಮ್ಮರಚೆಡ್ ಗಿರಿ, ಸುಂಕಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.