WhatsApp Image 2024-08-13 at 3.08.05 PM

ಮಹನೀಯರ ಜಯಂತಿ ಗಳ ಸಿದ್ಧತೆಗೆ ಸೂಚನೆ  : ಹೆಚ್.ವಿಶ್ವನಾಥ್

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 13– ತಾಲೂಕು ಆಡಳಿತದಿಂದ ನುಲಿಯ ಚಂದಯ್ಯ ಡಿ ದೇವರಾಜ ಅರಸು ನಾರಾಯಣ ಗುರು ಶ್ರೀ ಕೃಷ್ಣ ಮಹನೀಯರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಅಧ್ಯಕ್ಷರು ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಗಳು ತಹಸಿಲ್ದಾರ್ ಎಚ್ ವಿಶ್ವನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕ ಕಚೇರಿ ಆಡಳಿತ ಭವನ್ ಸಭಾಂಗಣದಲ್ಲಿ ಆಗಸ್ಟ್ 19ರಂದು ಕಾಯಕಯೋಗಿ ಶಿವಶರಣ ನುಲಿಯ ಚಂದಯ್ಯ ನವರ ಜಯಂತಿ ಯನ್ನು ತಾಲೂಕ ಪಂಚಾಯತ್ ಸಭಾ ಭವನದಲ್ಲಿ ಜರುಗಿಸಲಾಗುವುದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಿಂದುಳಿದ ವರ್ಗಗಳ ಅಭಿವೃದ್ಧಿ ಹರಿಕಾರ ಡಿ ದೇವರಾಜ್ ಅರಸ್ ಅವರ ಆಗಸ್ಟ್ 20ರಂದು ಜಯಂತಿಯನ್ನು ಶ್ರೀ ಅಭಯ ಆಂಜನೇಯ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಆಚರಿಸಲಾಗುವುದು ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಅವರ ಜಯಂತಿ ಆಗಸ್ಟ್ 20ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಸಭಾಭವನದಲ್ಲಿ ಆಚರಿಸಲಾಗುತ್ತದೆ ಆಗಸ್ಟ್ 26ರಂದು ಶ್ರೀ ಕೃಷ್ಣ ಜಯಂತಿ ಈ ಎಲ್ಲಾ ಮಹನೀಯರ ಜಯಂತಿಗಳನ್ನು ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಜಯಂತಿಗಳನ್ನು ಅಚ್ಚುಕಟ್ಟಾಗಿ ಮಾಡಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಹಸಿಲ್ದಾರರು ಸೂಚಿಸಿದರು.

ಎಲ್ಲಾ ಸಮುದಾಯಗಳ ಸಂಘ ಸಂಸ್ಥೆಗಳ ಮುಖಂಡರು ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು ಅ‌ಹ್ವಾನ ಪತ್ರಿಕೆ ಮುದ್ರಿಸಿ ಗಣ್ಯರಿಗೆ ಆಹ್ವಾನಿಸಬೇಕು ವೇದಿಕೆ ಕಾರ್ಯಕ್ರಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸ್ವಚ್ಛತೆ ಲಘು ಉಪಹಾರ ವ್ಯವಸ್ಥೆ ಕೈಗೊಳ್ಳಬೇಕು ಮಹನೀಯರ ಕುರಿತು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ನೀಡಬೇಕು ಎಂದು ವಿವರಿಸಿ ಹೇಳಿದರು ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಏ ಗಾದಿಲಿಂಗಪ್ಪ ಸಹಾಯಕ ಕೃಷಿ ನಿರ್ದೇಶಕ ಎಚ್ ಬಿ ಪಾಟೀಲ್ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಬಾಷಾ ತಾಲೂಕ ವೈದ್ಯಾಧಿಕಾರಿ ಡಾ ಬಿ ಈರಣ್ಣ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ರಾಘವೇಂದ್ರ ವರ್ಮಾ ತಾಲೂಕ ಪಂಚಾಯತ್ ವ್ಯವಸ್ಥಾಪಕಿ ಸುಜಾತ ಕೋರಿ ರಾಷ್ಟ್ರೀಯ ಸಾಕ್ಷರತಾ ಸದಸ್ಯ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಈಡಿಗರ ಸಂಘದ ತಾಲೂಕ ಅಧ್ಯಕ್ಷ ಹೆಚ್ ಸಿ ರಾಮಾಂಜನೇಯ ಉಪಾಧ್ಯಕ್ಷ ಎಚ್ ಹುಲಿಯಪ್ಪ ಮಂಜುನಾಥ ಡಿ ಮಹೇಶ್ ಕೊರಚ‌ ಕೊರಮ ಸಮಾಜದ ಮುಖ್ಯಸ್ಥ ಕುರುವಳ್ಳಿ ತಿಮ್ಮಯ್ಯ ಅಧ್ಯಕ್ಷರಾದ ಕೆ ಗೋಪಾಲಪ್ಪ ಉಪಾಧ್ಯಕ್ಷ ಡಿ ವೆಂಕಟೇಶ ಬಾಗೇವಾಡಿ ನಾಗರಾಜ ಅಂಜಿನಪ್ಪ ಕೆ ನಾಗರಾಜ ವಿಜಯಕುಮಾರ ಕೆ ವೆಂಕಟೇಶ ಕೆ ಸರ್ದಾರ ತಾಲೂಕ ಕಚೇರಿಯ ಶಿರಸ್ತೆದಾರ ಸಿದ್ದಾರ್ಥ ಕಾರಂಜಿ ರಾಘವೇಂದ್ರ ಮಹಾಂತೇಶ ಶೇಖರ್ ಶಿಕ್ಷಣ ಇಲಾಖೆ ಬಿಇಓ ಗುರಪ್ಪ ಸಮನ್ವಯಾಧಿಕಾರಿ ತಮ್ಮನ ಗೌಡ ಪಾಟೀಲ್ ಸಿಡಿಪಿ ಓ ಜಿ ಪ್ರದೀಪ್ ಕುಮಾರ್ ನಗರಸಭಾ ಪೌರಾಯುಕ್ತ ಹೆಚ್ ಎನ್ ಗುರುಪ್ರಸಾದ್ ವಿವಿಧ ಇಲಾಖೆಗಳ ಎಲ್ಲಾ ಅಧಿಕಾರಿಗಳು ಸಮುದಾಯಗಳ ಮುಖಂಡರು ಪಾಲ್ಗೊಂಡು ಅನಿಸಿಕೆ ವಿಷಯ ಚರ್ಚಿಸಿ ಸಲಹೆ ಸೂಚನೆ ನೀಡಿದರು.

ಎಲ್ಲಾ ಜಯಂತಿಗಳನ್ನು ಬೆಳಿಗ್ಗೆ 11 ಗಂಟೆಗೆ ಏರ್ಪಡಿಸಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!