WhatsApp Image 2024-07-31 at 2.28.43 PM

ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದ ಬ್ರಷ್ಟ ಸರಕಾರ : ಹಾಲಪ್ಪ ಆಚಾರ್ 

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 31- ರಾಜ್ಯದ ಕಾಂಗ್ರೆಸ್ ಸರಕಾರ ಜನರಿಗೆ ಒಳ್ಳೆಯ ಆಡಳಿತ ನೀಡಲು ವಿಫಲವಾಗಿದೆ.ಮುಡಾ ಹಗರಣ ಮತ್ತು ಇನ್ನೂ ಅನೇಕ ಬ್ರಷ್ಟಾಚಾರದಿಂದ ಕೂಡಿದೆ ಮತ್ತು ಅನೇಕ ತೆರಿಗೆ ಹೆಚ್ಚಳ ಮಾಡಿ ಜನಸಾಮಾನ್ಯರಿಗೆ ಕತ್ತರಿ ಹಾಕಿದ ಮತ್ತು ರೈತ ವಿರೋಧಿ, ರಾಜ್ಯದ ಬ್ರಷ್ಟಾಚಾರ ಕಾಂಗ್ರೆಸ್ ಕಮಿಷನ, ಸರಕಾರವಾಗಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.

ಪಟ್ಟಣದ ಬಿಜೆಪಿ ಪಕ್ಷದ ಮಂಡಲದ ಕಛೇರಿಯಲ್ಲಿ ಪಕ್ಷದ ಕಾರ್ಯಕರ್ತರ. ಕಾರ್ಯಕಾರಣಿ ಸಭೆಯ ಕಾರ್ಯಕ್ರಮವನ್ನು ಜೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 1ವಷ೯ ವಾದರೂ ಒಂದೇ ಒಂದು ಅಭಿವೃದ್ಧಿಯಾಗಿಲ್ಲ ಕೇವಲ ಅಭಿವೃದ್ಧಿ ಮರಿಚೀಕೆಯಾಗಿದೆ ಜನಸಾಮಾನ್ಯರಿಗೆ ಸುಳ್ಳು ಭರವಸೆ ಹೇಳಿ ವಂಚನೆ ಮಾಡಿದ್ದಾರೆ ಇವರ ಗ್ಯಾರಂಟಿ ಯೋಜನೆಗಳು ಸರಿಯಾಗಿ ಜನರಿಗೆ ತಲುಪುವಲ್ಲಿ ವಿಫಲವಾಗಿದೆ ಇವರು ಅಧಿಕಾರ ಅವಧಿಯಲ್ಲಿ ಅತಿಹೆಚ್ಚು ಬ್ರಷ್ಟಾಚಾರ.ಮುಡಾ ಹಗರಣ ಇವರು ಹಗಲು ದರೋಡೆ ಮಾಡುವದರಲ್ಲಿ ನಿಸ್ಸಿಮರು ಇವರಿಗೆ ನಾಚಿಕೆಯಾಗಬೇಕು ಸಾರ್ವಜನಿಕರ, ರೈತರ ಬಗ್ಗೆ ಕಾಳಜಿ ವಹಿಸಿದೆ ಸರಕಾರ ಸಬ್ ರಿಜಿಸ್ಟ್ರಾರ್ ಅಬಕಾರಿ, ಬಾಂಡ್, ಪೆಟ್ರೋಲ್, ಡೀಸಲ್,  ಹಾಲು, ವಿದ್ಯುತ್ ಇನ್ನೂ ಅನೇಕ ದರಗಳನ್ನು ಹೆಚ್ಚು ಮಾಡಿ ಬಡವರ ಹೂಟ್ಟೆಯ ಮೇಲೆ ಬರಿ ಹಾಕಿದ ಸರಕಾರವ ಎಂದರು.

ಸಚಿವರು ರಾಜ್ಯದಲ್ಲಿ ಈ ಹಿಂದೆ ಅಧಿಕಾರ ನಡೆಸಿದ್ದ ನಮ್ಮ ಬಿಜೆಪಿ ಸರ್ಕಾರವು ರೈತರಿಗೆ ಅನುಕೂಲಕ್ಕಾಗಿ ಹತ್ತು ಹಲವಾರು ಜನಪರ ಯೋಜನೆಗಳನು, ಜಾರಿಗೆ ತಂದು ಜನಪರ ಸರಕಾರ ವಾಗಿತ್ತು ಆದರೆ ರಾಜ್ಯದ ಜನತೆಗೆ ಕಾಂಗ್ರೆಸ್ ನವರು ಸುಳ್ಳು ಭರವಸೆ. ನೀಡಿ ಅಧಿಕಾರಕ್ಕೆ ಬಂದು ರೈತರ ಪರ ಗಮನ ಕೊಡದೇ ಕಾಂಗ್ರೆಸ್‌ ಸರ್ಕಾರ ನಿರ್ಲಕ್ಷ ವಹಿಸುತ್ತಿದೆ. ಗ್ಯಾರ೦ಟಿ ಗುಂಗಿನಲ್ಲಿಯೇ ಅಧಿಕಾರ ನಡೆಸುತ್ತಿರುವ ಸರ್ಕಾರ ರೈತರ ಪರ ಕೆಲಸ ಮಾಡುತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಸುಮಾರು ರೈತರು ಆತ್ಮಹತ್ಯೆ ಪ್ರಕರಣಗಳ ವರದಿಯಾಗಿರುವುದು ನಿಜಕ್ಕೂ ಅತ್ಯಂತ ನಾಚಿಕೆಯ ಸಂಗತಿಯಾಗಿದೆ ಎಂದರು.

ರೈತರ ವರ್ಗಕ್ಕೆ ಧೈರ್ಯ ತುಂಬುವ ಮತ್ತು ಅವರನ್ನು ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡುವ ಕಾರ್ಯಕ್ರಮಕ್ಕೆ ಸರ್ಕಾರ ಮುಂದಾಗುತ್ತಿಲ್ಲ. ನಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಒಂದು ವಷ೯ ವಾದರು ಯಾವುದೇ ಅಭಿವೃದ್ಧಿ ಒಂದೇ ಒಂದು ಯಾಗಿಲ್ಲ ರಾಯರಡ್ಡಿ 30ವಷ೯ ಅಧಿಕಾರದಲ್ಲಿ ಇದ್ದರು ಇವರಿಗೆ ರೈತರು ಬಗ್ಗೆ ಕಾಳಜಿ ವಹಿಸಲಿಲ್ಲ ಈಗ ಜ್ಞಾನೋದಯವಾಗಿದೆ ತಾಲೂಕಿನ ಎಲ್ಲಾ ಕೆರಗಳನ್ನು ತುಂಬಿಸುವ ಕೆಲಸ ಮಾಡದೇ ಕಾಲಹರಣ ಮಾಡಿ ಸತ್ಯಹರಿಚಂದ್ರ ಬಂದರು ಕೃಷ್ಣ ಯ ನೀರು ತರುವದಕ್ಕೆ ಆಗುವದಿಲ್ಲ ಎಂದವರು ಈ ಹಿಂದೆ ನಾನು ಶಾಸಕ ಸಚಿವ ಆದ ಮೇಲೆ ರೈತರು ಬಗ್ಗೆ ಕಾಳಜಿ ವಹಿಸಿ ಕೃಷ್ಣಯ ನೀರು ತಂದು ಯಲಬುರ್ಗಾ ಭೂ ತಾಯಿ ಮಡಿಲಿಗೆ ಹಾಕಿದ್ದಾನೆ ಕೆಲವೊಂದು ಕೆರಗಳಿಗೆ ನೀರು ತುಂಬಿಸಿದ್ದೇನೆ ಒಂದು ವರ್ಷವಾದರು ಯಾವುದೇ ಅಭಿವೃದ್ಧಿ ಮಾಡದೆ ರೋಡಿಗೆ ಒಂದು ಪುಟ್ಟಿ ಮಣ್ಣು ಹಾಕದವರು ಈಗ ರೈತರ ಬಗ್ಗೆ ಜ್ಞಾನೋದಯವಾಗಿದೆ ಇನ್ನೂ ಮುಂದಾದರು ತಾಲೂಕಿನ ಕೆರೆಗಳ ತುಂಬಿಸಲು ಮುಂದಾಗಬೇಕು.ನಾವು ಇಷ್ಟು ದಿವಸ ಸುಮ್ಮನೆ ಕುಳಿತುಕೊಂಡಿರುವದು ನಿಮ್ಮ ಸುಳ್ಳು ಭರವಸೆ ದುರಹಂಕಾರದಿಂದ ಕೂಡಿದ ಆಡಳಿತ ವಾಗಿದೆ. ರೈತರ ಹಿತಕಾಪಾಡಬೇಕು ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ರೋಡಿಗೆ ಬಂದು ಉಗ್ರ ಹೋರಾಟ. ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.

ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಕೃಷ್ಣಯ ನೀರು ತಂದು ಭೂ ತಾಯಿಯ ಮಡಿಲು ತುಂಬಿಸಿ ಐದು ಕೆರಿ ತುಂಬಿಸುವ ಕಾರ್ಯ ಮಾಡಿದೆ ಇದರಿಂದ ರೈತರ ಹೊಲಗಳಿಗೆ ಅಂತರ ಜಲಮಟ್ಟ ಹೆಚ್ಚಾಗುತ್ತದೆ ರಾಯರೆಡ್ಡಿಯವರೇ ಯಲಬುರ್ಗಾ ಕ್ಷೇತ್ರದಲ್ಲಿ ಸತ್ಯಹರಿಚಂದ್ರ ಬಂದರು ನೀರು ತರುವದಕ್ಕೆ ಆಗುವದಿಲ್ಲವೆಂದು ಅಂತಾ ಹೇಳಿದ್ದೀರಿ ಈ ಹಿಂದೆ ನಮ್ಮ ಬಿಜೆಪಿ ಸರಕಾರದ ಶಾಸಕ ಮತ್ತು ಸಚಿವನಾಗಿ ನನ್ನ ಅಧಿಕಾರ ಅವಧಿಯಲ್ಲಿ ಕೃಷ್ಣಯ ನೀರನ್ನು ತಂದು ಯಲಬುರ್ಗಾ ಭೂ ತಾಯಿಯ ಮಡಿಲಿಗೆ ಹಾಕಿದ್ದೇನೆ. ನಿಮ್ಮ ಹಣೆಬರಹಕ್ಕೆ ತಾಲೂಕಿನ ಸಂಕನೂರ ಬಂಡಿಹಾಳ, ತೂಂಡಿಹಾಳ, ಕರಮುಡಿ, ಬ್ರೀಜ್ ಕಮ್ ಬ್ಯಾರೇಜ್ ಮಾಡುವದಕ್ಕೆ ಆಗದಿರುವದು ಕೆಟ್ಟ ಸಂಗತಿ. ಆ ಹಳ್ಳದಲ್ಲಿ ಈ ಹಿಂದೆ ಸಾಕಷ್ಟು ಜನ ಮಹಿಳೆಯರು, ಪುರುಷರು ಕೊಚ್ಚಿಕೊಂಡು ಮೃತಪಟ್ಟಿದ್ದಾರೆ ಜನಪ್ರತಿನಿಧಿಗಳಾದ ರೈತರ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು ಎಂದರು.

ಮತ್ತು ರಾಜ್ಯದಲ್ಲಿ ನಿಮ್ಮ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆಬಂದರು ಯಾವುದೇ ಹೂಸ ಅಭಿವೃದ್ಧಿ ಕೆಲಸಗಳಿಲ್ಲ ರಾಜ್ಯದ ರೈತರ ಬಗ್ಗೆ ಕಾಳಜಿ ವಹಿಸದೇ ನೀರಾವರಿ ಯೋಜನೆ. ಮತ್ತು ಕೆರಿ ತುಂಬಿಸುವ ಕೆಲಸವಾಗುತ್ತಿಲ್ಲ ಬರೀ ಬಾಯಿ ಮಾತಿನಲ್ಲಿ ಕೆರಿ ತುಂಬುವದಿಲ್ಲ ಅದಕ್ಕೆ ಪರಿಶ್ರಮ ಬಹಳ ಮುಖ್ಯ ಯಾವುದೇ ರೀತಿಯಲ್ಲಿ ನಮ್ಮ ಕ್ಷೇತ್ರದಲ್ಲಿ ರೈತರಿಗೆ ಅನ್ಯಾಯ ವಾದರೇ ನಾನು ಕೈಕಟ್ಟಿ ಕುಳಿತ್ತು ಕೂಳ್ಳವದಿಲ್ಲ ಇನ್ನೂ 3.4 ತಿಂಗಳುಗಳಲ್ಲಿ ಕ್ಷೇತ್ರದಲ್ಲಿ ಎಲ್ಲಾ ಕೆರಿ ತುಂಬಿಸುವ ಯೋಜನೆಯ ಜಾರಿಗೆ ತಂದು ಕ್ಷೇತ್ರದಲ್ಲಿ ರುವ ಎಲ್ಲಾ ಕೆರಿ ತುಂಬಿಸುವ ಕಾರ್ಯ ಮಾಡಬೇಕು.ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು. ರೈತರ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಸ್ಪಂದಿಸುವದು ಬಿಟ್ಟು ಉದಾಸೀನ ಮಾಡುವದು ಸರಿಯಲ್ಲ ಎಂದರು ಮತ್ತು ದೇಶದಲ್ಲಿ 3ನೇಯ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಿಯಾಗಿರುವದು ದೇಶಕ್ಕೆ ಹೆಮ್ಮೆಯ ವಿಷಯ ನಮ್ಮ ದೇಶದ ಘನತೆ .ಗೌರವ . ಹೆಚ್ಚಿಸಿದ ಕಿತಿ೯ ನರೇಂದ್ರ ಮೋದಿಯವರಿಗೆ ಸಲುತ್ತದೆ ಹೀಗಾಗಿ ವಿಶ್ವದ ನಂ1 ಪ್ರಧಾನಿ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.

ನಂತರ ತಾಲೂಕಿನ ಬೇವೋರ ಗ್ರಾಮದ ಸ್ವಾಮಿ ವಿವೇಕಾನಂದ ಕೋಚಿಂಗ್ ಕ್ಲಾಸ್ ನ ಸಂಸ್ಥಾಪಕ ಹಾಗೂ ಶಿಕ್ಷಕರಾದ ಭೀಮಣ್ಣ ಕುರಿ ಅವರು ನಿನ್ನೆ ದಿನ ಅಕಾಲಿಕ ಮರಣದಿಂದ ಆ ಶಿಕ್ಷಣ ಸಂಸ್ಥೆಗೆ ತುಂಬಲಾರದ ನಷ್ಟವಾಗಿದೆ. ಭೀಮಣ್ಣ ಕುರಿ ಅವರು ಒಳ್ಳೆಯ ಶ್ರಮಜೀವಿ. ತಮ್ಮದೇ ಯಾದ ಶಾಲೆಯನ್ನು ಕಟ್ಟಿ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು. ಕೋಚಿಂಗ್ ಕ್ಲಾಸ್ ಬಹಳ ಕಷ್ಟ ಪಟ್ಟು ಶ್ರಮವಹಿಸಿ ನಿಮಿ೯ಸಿ ಇನ್ನೊಬ್ಬರಿಗೆ ಮಾದರಿಯ ವ್ಯಕ್ತಿಯಾಗಿದ್ದಾರೆ ಇವರ ಮರಣದಿಂದ ಇವರ ಕುಟುಂಬಕ್ಕೆ ದುಖ ಸಹಿಸಿ ಕೊಳ್ಳುವ ಶಕ್ತಿ ಆ ದೇವರು ಕೂಡಲಿ ಎಂದು ದೇವರಲ್ಲಿ ಪ್ರಾರ್ಥನೆ ಎಂದು ಹೇಳಿದರು.

ನಂತರ ಬಿಜೆಪಿ ಹಿರಿಯ ಮುಖಂಡ ಬಸಲಿಂಗಪ್ಪ ಭೋತೆ ಮಾತನಾಡಿ ಕಾಂಗ್ರೆಸ್ ಸರಕಾರದ ಬ್ರಷ್ಟಾಚಾರದಲ್ಲಿ ಮುಳ್ಳುಗಿದೆ ಮುಡಾ ಹಗರಣ ಹಾಗೂ ಇನ್ನಿತರ ತೆರಿಗೆ ಹೆಚ್ಚಳ. ಜನಸಾಮನ್ಯರಿಗೆ ತುಂಬಾ ತೊಂದರೆಯಾಗಿದೆ ರಾಜ್ಯ ಕಾಂಗ್ರೆಸ್ ಸರಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಕಾಂಗ್ರೆಸ್ ಸರಕಾರದ ವೈಫಲತ್ಯ ಕುರಿತು ನವೀನಕುಮಾರ ಗುಳ್ಳಗಣ್ಣನವರು.ಬಸಲಿಂಗಪ್ಪ ಭೋತೆ.ಶಿವಶಂಕರರಾವ ದೇಸಾಯಿ. ಕಾಂಗ್ರೆಸ್ ಕಮಿಷನ್ ಸರಕಾರವಾಗಿದೆ ಎಲ್ಲದರಲ್ಲೂ ತೆರಿಗೆ ಹೆಚ್ಚಳ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದ ಸರಕಾರ. ಕಾಲಹರಣ ಮಾಡಿ ಬಿಟ್ಟಿ ಯೋಜನೆಗಳ ಗುಂಗನಲ್ಲಿರುವ ಸರಕಾರ ಎಂದು ಸರ್ಕಾರದ ವೈಫಲತ್ಯಕುರಿತು ಮಾತನಾಡಿದರು .

ಈಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳ್ಳಗಣ್ಣನವರು, ಮುಖಂಡರಾದ ಬಸಲಿಂಗಪ್ಪ ಭೋತೆ, ಶಿವಶಂಕರರಾವ ದೇಸಾಯಿ, ವಿಶ್ವನಾಥ ಮರಿಬಸಪ್ಪನವರು, ರತ್ನನ್ ದೇಸಾಯಿ, ಆರ್.ಡಿಸಿಸ. ನಿದರ್ಶಕ ಬಸವರಾಜ ಗೌರಾ, ಶರಣಪ್ಪ ಈಳಗೇರ, ಅಮರೇಶ ಹುಬ್ಬಳ್ಳಿ, ಮಾರುತಿ ಗೌವರಾಳ, ಕಳಕಪ್ಪ ತಳವಾರ, ಶಿವಕುಮಾರ ನಾಗಲಾಪೂರಮಠ, ವಸಂತಕುಮಾರ ಭಾವಿಮನಿ, ಶಿದ್ರಾಮೇಶ ಬೇಲೇರಿ, ಶಂಕ್ರಪ್ಪ ಸುರಪುರ, ಅಯ್ಯನಗೌಡ ಕೆಂಚಮ್ಮನವರು, ಶರಣಪ್ಪ ಬಣ್ಣದಬಾವಿ, ಬಸಲಿಂಗಪ್ಪ ಕೂತ್ತಲ್, ವೀರಣ್ಣ ಹುಬ್ಬಳ್ಳಿ, ಶಂಕುತಲಾದೇವಿ ಮಾಲಿಪಾಟೀಲ, ಶಿವಲೀಲಾ ದಳವಾಯಿ, ಮೀರಾಭಾಯಿ ಹೊಸಪೇಟೆ, ಸಂತೋಷ ಮ್ಮಾಮತ್ತು, ಪಕ್ಷದ ಕಾರ್ಯಕರ್ತರು ಹಾಗೂ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!