
ವರ್ಷಾಂತ್ಯದಲ್ಲಿ ಮನೆಗಳ ಹಸ್ತಾಂತರ : ಶಾಸಕ ನಾರಾ ಭರತ್ ರೆಡ್ಡಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 3- ಬಳ್ಳಾರಿ ನಗರದ ಮುಂಡ್ರಿಗಿಯ ಬಹು ನಿರೀಕ್ಷಿತ ಮಹಾತ್ಮ ಗಾಂಧಿ ಟೌನ್’ಶಿಪ್ ಯೋಜನೆ ಅಡಿ ಈಗಾಗಲೇ ಪೂರ್ಣಗೊಂಡಿರುವ ೮೨೦ ಮನೆಗಳನ್ನು ಫಲಾನುಭವಿಗಳಿಗೆ ವಿತರಣೆಗೆ ಮುಂದಾಗಬೇಕೆಂದು ಸಚಿವ ಜಮೀರ್ ಅಹ್ಮದ್ ಅವರು ಅಧಿಕಾರಿಗಳು ಹಾಗೂ ಮನೆ ನಿರ್ಮಾಣ ಸಂಸ್ಥೆಯವರಿಗೆ ಸೂಚಿಸಿದ್ದಾರೆ ಎಂದು ಶಾಸಕ ನಾರಾ ಭರತ್ ತಿಳಿಸಿದ್ದಾರೆ. ಗುರುವಾರ ಈ ಕುರಿತು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಬೆಂಗಳೂರಿನ ವಿಕಾಸಸೌಧದ ವಸತಿ ಸಚಿವರ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಜಿಪಂ ಸಿಇಓ ರಾಹುಲ್ ಸಂಕನೂರ, ಮಹಾನಗರ ಪಾಲಿಕೆಯ ಆಯುಕ್ತ ಖಲೀಲಸಾಬ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.
ಬಾಕಿ ಉಳಿದಿರುವ ಕೆಲಸಗಳನ್ನು ಶೀಘ್ರ ಮುಗಿಸಬೇಕು. ಈ ವರ್ಷಾಂತ್ಯದಲ್ಲಿ ಶತಾಯಗತಾಯ ಮನೆಗಳ ಹಸ್ತಾಂತರ ಆಗಬೇಕು ಎಂದು ಸಚಿವರು ಅಧಿಕಾರಿಗಳಿಗೆ ಹಾಗೂ ನಿರ್ಮಾಣ ಸಂಸ್ಥೆಯವರಿಗೆ ಖಡಕ್ ಸೂಚನೆ ನೀಡಿದ್ದಾರೆ ಎಂದು ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದ್ದಾರೆ.