
ಹನುಮನಹಳ್ಳಿ ವ್ಯಕ್ತಿ ಸಾವು : ವಾರಸುದಾರರ ಪತ್ತೆಗೆ ಮನವಿ
ಕರುನಾಡ ಬೆಳಗು ಸುದ್ದಿ
ವಿಜಯನಗರ, 26- ಹೊಸಪೇಟೆ ತಾಲೂಕಿನ ಹನುಮನಹಳ್ಳಿ ಗ್ರಾಮದ ಹತ್ತಿರ (ಎನ್‌ಹೆಚ್-50) ತಾರ್ ರಸ್ತೆ ಅಂಡರ್ ಪಾಸ್‌ನಲ್ಲಿ ಅಸ್ವಸ್ಥಗೊಂಡು ಬಿದ್ದಿದ್ದ ಅಂದಾಜು 45 ವಯಸ್ಸಿನ ಅನಾಮಧೇಯ ವ್ಯಕ್ತಿಯು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಬಗ್ಗೆ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯ ಯುಡಿಆರ್ ನಂ: 16/2024 ಕಲಂ: 194 ಬಿಎನ್‌ಎಸ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ವ್ಯಕ್ತಿಯು ತೀವ್ರ ಅನಾರೋಗ್ಯದಿಂದ ಬಳಲಿ ಬಿದ್ದಿದ್ದು ಆತನಿಗೆ ಆಂಬುಲೆನ್ಸ್ ಮುಖಾಂತರ ಹೊಸಪೇಟೆಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಲಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತನಾಗಿರುತ್ತಾನೆ. ಮೃತನ ದೇಹವನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಯ ಶವಗಾರ ಕೋಣೆಯಲ್ಲಿನ ಕೋಲ್ಡ್ ಸ್ಟೋರೆಜ್‌ನಲ್ಲಿರಿಸಿ ಮೃತನ ವಾರಸುದಾರರ ಪತ್ತೇಗಾಗಿ ಪ್ರಯತ್ನಿಸಿದ್ದು ಇಲ್ಲಿಯವರೆಗೆ ಮೃತನ ವಾರಸುದಾರರರು ಪತ್ತೆಯಾಗಿರುವುದಿಲ್ಲ.
ಚಹರೆ : ತೆಳ್ಳನೆಯ ಮೈಕಟ್ಟು ಹೊಂದಿದ್ದು, ಕೋಲುಮುಖ ಕಪ್ಪು ಮೈಬಣ್ಣ, 165 ಚ.ಸೆಂ ಎತ್ತರ ಇರುತ್ತಾನೆ. ನೀಲಿ ಬಣ್ಣದ ನೈಟ್ ಪ್ಯಾಂಟ್ ಹಾಗೂ ಕಪ್ಪು ಬಿಳಿ ಗೀರಿಗಳುಳ್ಳ ಚೆಕ್ಸ್ ಶರ್ಟ ಧರಿಸಿರುತ್ತಾನೆ.
ಈ ಮೃತ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯ ಪಿಎಸ್ ದೂ.ಸಂ: 08394-244030, ಎಸ್‌ಡಿಪಿಒ ದೂ.ಸಂ: 08397-238477, ಡಿಪಿಒ ದೂ.ಸಂ: 08391-220333 ಗೆ ತಿಳಿಸಿ ಎಂದು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯ ತನಿಖಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.