
ಪೋಲಿಸ್ ಠಾಣೆಗೆ ನೂತನ ಪಿಎಸೈ ಆಗಿ ಹನುಮಂತಪ್ಪ ತಳವಾರ ಅಧಿಕಾರ ಸ್ವೀಕಾರ
ಕುಷ್ಟಗಿ: ಸರಕಾರಿ ಆಡಳಿತಾತ್ಮಕ ವ್ಯವಸ್ಥೆಗೆ ಅನುಗುಣವಾಗಿ ಕುಷ್ಟಗಿ ಠಾಣೆಗೆ ವರ್ಗಾವಣೆಯಾಗಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಹನಂತಪ್ಪ ತಳವಾರ ಅವರು ಜು.೨೦ ರಂದು ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ಇಲ್ಲಿ ಸೇವೆ ಸಲ್ಲಿಸಿದ ಪಿಎಸ್ಐ ಮುದ್ದುರಂಗಸ್ವಾಮಿ ವರ್ಗಾವಣೆ ಯಾದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಕಮಲಾಪೂರ ಠಾಣೆಯಿಂದ ಕುಷ್ಟಗಿ ಠಾಣೆಗೆ ವರ್ಗಾವಣೆ ಯಾದ ಪಿಎಸೈ ಹನುಮಂತಪ್ಪ ತಳವಾರ ಅವರು ಆಗಮಿಸಿ ಅಧಿಕಾರ ವಹಿಸಿಕೊಂಡರು.
ಇವರಿಗೆ ನಿವೃತ್ತ ಯೋಧರು ಆಗಮಿಸಿ ಸನ್ಮಾನಿಸಿ ಗೌರವಿಸಿದರು.
ನಂತರ ನಿವೃತ್ತ ಯೋಧ ಶರಣಯ್ಯ ಹಿರೇಮಠ ಮಾತನಾಡಿ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಮತ್ತು ಕಳ್ಳತನ ಪ್ರಕರಣಗಳು ಮತ್ತು ಅನಗತ್ಯವಾಗಿ ಬೈಕ್ ರೈಡ್ ಮಾಡುವ ಅಪ್ರಾಪ್ತ ಮಕ್ಕಳಿಗೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.
ಅದಕ್ಕೆ ಸ್ಪಂದಿಸಿದ ನೂತನ ಪಿಎಸೈ ಹನುಮಂತಪ್ಪ ತಳವಾರ ಕಾನೂನು ಉಲ್ಲಂಘನೆ ಮಾಡುವ ಯಾವುದೇ ಘಟನೆ ಗಳಿರಲಿ ಕ್ರಮ ಕೈಗೊಳ್ಳುತ್ತೇನೆ. ನಮ್ಮ ಸೇವೆ ಸಾರ್ವಜನಿಕರಿಗೆ ಸದಾ ಇರುತ್ತದೆ. ಕಾನೂನು ಸುವ್ಯವಸ್ಥೆಗಾಗಿ ಎಲ್ಲರ ಸಹಕಾರ ಇರಲಿ ಎಂದು ಹೇಳಿದರು.
ಈ ಸಂಧರ್ಬದಲ್ಲಿ ನಿವೃತ್ತ ಯೋಧರಾದ ಸುಭಾಸ ಮಡಿವಾಳರ,ಹಂಪನಗೌಡಾ ಬಳೋಟಗಿ, ಶಂಕ್ರಪ್ಪ ಕವಡಿಕಾಯಿ,ಸಂಗಮೇಶ ಎಮ್,ಬೀಮಣ್ಣ ಮ್ಯಾಗೇರಿ,ಹನಂತಪ್ಪ ಬಿ.ವೀರೇಶ ಹುನಗುಂದ. ಸೇರಿದಂತೆ ಅನೇಕರು ಉಪಸ್ಥಿತರಿದ್ದು ನೂತನ ಪಿಎಸೈ ಅವರಿಗೆ ಸ್ವಾಗತಿಸಿದರು.