
ಹಯಗ್ರೀವ ಹುಟ್ಟುಹಬ್ಬ ಧ್ರುವ ಸರ್ಜಾ ಅಭಿಮಾನಿಯಿಂದ ಊಟ ವಿತರಣೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 19- ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಪುತ್ರ ಹಯಗ್ರೀವ ಸರ್ಜಾ ಅವರ ಮೊದಲನೇ ಹುಟ್ಟು ಹಬ್ಬದ ಅಂಗವಾಗಿ ಜೈ ಹನುಮಾನ್ ಸರ್ಜಾ ಅಭಿಮಾನಿಗಳ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ಎಂ.ಜಿ ಕನಕ ಸಂಘದ ಪದಾಧಿಕಾರಿಗಳೊಂದಿಗೆ ಬಳ್ಳಾರಿ ನಗರದ ಮೀನಾಕ್ಷಿ ವೃತ್ತ, ರಾಯಲ್ ವೃತ್ತ, ಕನಕ ದುರ್ಗಮ್ಮ ದೇವಸ್ಥಾನ ಹತ್ತಿರ, ಮೋತಿ ವೃತ್ತ ಸೇರಿದಂತೆ ವಿವಿಧ ಕಡೆ ಇರುವ ನಿರ್ಗತಿಕರಿಗೆ ಆಹಾರದ ಪೊಟ್ಟಣಗಳನ್ನು ಹಾಗೂ ನೀರಿನ ಬಾಟಲ್ ಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಧ್ರುವ ಸರ್ಜಾ ಅವರ ಅಭಿಮಾನಿ ಎಂ.ಜಿ ಕನಕ ಅವರು ಮಾತನಾಡಿ, ಹಯಗ್ರೀವ ಸರ್ಜಾ ಹಾಗೂ ಸರ್ಜಾ ಕುಟುಂಬದವರಿಗೆ ಸುಖ, ಶಾಂತಿ, ನೆಮ್ಮದಿ, ಆರೋಗ್ಯ ಮತ್ತು ಸಮೃದ್ಧಿ ನೀಡಲೆಂದು ಬಳ್ಳಾರಿ ನಗರದ ಆದಿ ದೇವತೆ ಶ್ರೀ ಕನಕ ದುರ್ಗಮ್ಮ ದೇವಿಯಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ನಗರಾಧ್ಯಕ್ಷರಾದ ಉಮಾರ್ ಫಾರೂಕ್, ಪದಾಧಿಕಾರಿಗಳಾದ ವೈ.ಅರುಣ್ ಕುಮಾರ್, ಸಿ.ತಿಪ್ಪೆರುದ್ರ, ನಾಗರಾಜ್ ಹುಬ್ಬಳ್ಳಿ, ಮೋಕ ಷಾಷ, ಕೆ.ಗಣೇಶ್ ಬೆಳಗಲ್, ಡಿ.ಕೆ ಗಾದಿಲಿಂಗಪ್ಪ ಸೇರಿದಂತೆ ಧ್ರುವ ಸರ್ಜಾ ಅವರು ಅಭಿಮಾನಿಗಳು ಉಪಸ್ಥಿತರಿದ್ದರು.