ತಾವರಗೇರಾ : ಮಕ್ಕಳ ಮೇಲೆ ಹೆಜ್ಜೇನು ದಾಳಿ
ಕರುನಾಡ ಬೆಳಗು ಸುದ್ದಿ
ತಾವರಗೇರಾ, 31- ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ಬಾಲಕೀಯರ ವಸತಿ ಶಾಲೆಯಲ್ಲಿ ನಡೆದ ಪಂಚಾಯತ ಮಟ್ಟದ ಕ್ರೀಡಾಕೂಟದ ಆವರಣದಲ್ಲಿ ಮಧ್ಯಾನ ಮಕ್ಕಳ ಮೇಲೆ ಹೆಜ್ಜೇನು ದಾಳಿ ಮಾಡಿದ ಘಟನೆ ನಡೆದಿದೆ.
ಶಾಲೆ ಆವರಣದಲ್ಲಿ ಎಲ್ಲಾ ಶಾಲೆಯ ವಿಧ್ಯರ್ಥಿಗಳ ವಿವಿಧ ಸ್ಪರ್ಧೆಗಳು ನಡೆದಿದ್ದವು, ಮಧ್ಯಾನ 3 ಗಂಟೆ ಸಮಯಕ್ಕೆ ಆವರಣದ ಒಳಗೆ ಬೇವಿನ ಮರದಲ್ಲಿ ಇದ್ದ ಹೆಜ್ಜೇನು ಧೀಡಿರ ದಾಳಿ ಮಾಡಿವೆ, ಸ್ಥಳದಲ್ಲಿ ಇದ್ದ 40 ಕ್ಕೂ ಹೆಚ್ಚು ಮಕ್ಕಳು, ಪ್ರೇಕ್ಷಕರ ಮೇಲೆ ದಾಳಿ ಮಾಡಿದ ಕಾರಣ 7 ರಿಂದ 8 ಮಕ್ಕಳು ಅಸ್ವಸ್ಥಗೊಂಡಿದ್ದಾರೆ, ಇವರನ್ನ ಅಂಬುಲನ್ಸ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಈ ಕುರಿತು ಸಮೂದಾಯ ಆರೋಗ್ಯ ಕೇಂದ್ರದ ವೈದ್ಯ ಡಾ.ಸಂತೋಷಕುಮಾರ ಮಾತನಡಿ ಘಟನೆಯಲ್ಲಿ 7 ರಿಂದ 8 ಮಕ್ಕಳು ಗಾಯಗೊಂಡಿದ್ದು ಕನಾಟಕ ಪಬ್ಲಿಕ್ ಶಾಲೆಯ ೬ನೇ ತರಗತಿ ವಿಧ್ಯಾರ್ಥಿಗಳಾದ ಅಮರೇಶ ಮತ್ತು ಪ್ರಶಾಂತ ವಿಠಲಾಪೂರ, ಕರಿಸಿದ್ದೇಶರ ಶಾಲೆಯ ಅಕ್ಷಯ, ಎಸ್‌ಎಸ್‌ವಿ ಶಾಲೆಯ ಮಂಜುನಾಥ ಹಾಗೂ ಇನ್ನುಳದ ವಿಧ್ಯರ್ಥಿಗಳು, ಜೆಸ್ಕಾಂ ಸಿಬ್ಬಂದಿ ನವಿನ ಎಂಬುವವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ ಸದ್ಯ ಅತಂಕ ಪಡುವ ಅಗತ್ಯವಿಲ್ಲ ಎಂದು ಢಾ.ಸಂತೋಷಕುಮಾರ ತಿಳಿಸಿದ್ದಾರೆ.