ಕನಸು ಕಿಶೋರಿ ಸಂಘಟನೆ ಸದಸ್ಯರ ಬೇಡಿಕೆ ಮೇರೆಗೆ ಬಸ ಸೌಲಭ್ಯ
ಕರುನಾಡ ಬೆಳಗು ಸುದ್ದಿ
ಕುಕನೂರು, 31- ತಾಲ್ಲೂಕಿನ ಕವಳಕೇರಿ ಗ್ರಾಮಕ್ಕೆ ಬಸ್ ಸೌಲಭ್ಯ ಇಲ್ಲದರಿಂದ ಮಕ್ಕಳು ತೊಂದರೆ ಅನುಭವಿಸುವಂತಾಗಿತ್ತು ಬಹಳಷ್ಟು ಮಕ್ಕಳು ಶಾಲೆಯನ್ನು ಬಿಟ್ಟಿದ್ದರು.
ಮಂಗಳೂರು ಕುಕನೂರು ಕೊಪ್ಪಳ ಶಾಲೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಇದರ ಬಗ್ಗೆ ಕಿಶೋರಿ ಸಂಘಟನೆ ಸದಸ್ಯರು ಊರಿನ ಮುಖಂಡರೊಂದಿಗೆ ಚರ್ಚಿಸಿ ಕುಕನೂರು ಡಿಪೋ ಮ್ಯಾನೇಜರ್ ಅವರಿಗೆ ಮನವಿ ಸಲ್ಲಿಸುವ ಮೂಲಕ ಬಸ ಸೌಲಭ್ಯಕ್ಕಾಗಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.
ಇವರ ಬೇಡಿಕೆಯಿಂದ ಗ್ರಾಮಕ್ಕೆ ಬಸ ಸೌಲಭ್ಯವನ್ನು ಇಲಾಖೆ ಒದಗಿಸಿದೆ ಇದಕ್ಕೆ ಕಿಶೋರಿ ಸಂಘಟನೆ ಸದಸ್ಯರು ಊರಿನ ಗುರು ಹಿರಿಯರು ಸಂತೋಷವನ್ನು ವ್ಯಕ್ತಪಡಿಸಿದರು.
ವಿಸ್ತಾರ್ ಸಂಸ್ಥೆಯು ಬಹಳ ದಿನಗಳಿಂದ ನಮ್ಮ ಗ್ರಾಮದಲ್ಲಿ ಅನೇಕ ಜನಪರ ಕಾಳಜಿಯನ್ನೂ ಮಾಡುತ್ತಿದ್ದು ಇಲಾಖೆ ಮತ್ತು ಸಂಸ್ಥೆಗೆ ಧನ್ಯವಾದಗಳನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಕಿಶೋರಿ ನ್ಯಾಯ ಸಮಿತಿ ಸದಸ್ಯರು, ಪಾರ್ಲಿಮೆಂಟ್ ಸದಸ್ಯರು, ಮಕ್ಕಳು ತಾಯಿಂದರು ಹಾಗೂ ವಿಸ್ತಾರ್ ಸಂಸ್ಥೆಯ ಸಿಬ್ಬಂದಿಗಳು ಇದ್ದರು.