ಒಳ ಮೀಸಲಾತಿ ವರದಿಯನ್ನು ತರಾ ತುರಿಯಲ್ಲಿ ಹೇಗೆ ತಯಾರಿಸುತ್ತಿರಿ : ಸುರೇಶ
ಕರುನಾಡ ಬೆಳಗು ಸುದ್ದಿ
ಕುಕನೂರು, 30- ಒಳ ಮೀಸಲಾತಿ ವರದಿ ೩ತಿಂಗಳ ತರ ತುರಿಯಲ್ಲಿ ಹೇಗೆ ತಯಾರಿಸುತ್ತಿರಿ ಎಂದು ಸುರೇಶ ಬಳೊಟಗಿ ಗೋರಸೇನಾ ರಾಜ್ಯಾಧ್ಯಕ್ಷ ಹೇಳಿದರು.
ಪಟ್ಟಣದ ಐಬಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾದ ಒಳ ಮೀಸಲಾತಿ ವರದಿ ತಯಾರಿಸುವ ಬಗ್ಗೆ ಚರ್ಚಿಸಿದಾಗ ಸಿಎಂ ಸಿದ್ದರಾಮಯ್ಯ ಮೂರು ತಿಂಗಳಲ್ಲಿ ಒಳ ಮೀಸಲಾತಿ ವರದಿ ತಯಾರಿಸುವ ಬಗ್ಗೆ ತೆಗೆದುಕೊಂಡಿರುವ ನಿರ್ಧಾರ ಸರಿಯಲ್ಲ ಈ ಹಿಂದೆ ಇಂದ ಬಿಜೆಪಿ ಬಸವರಾಜ ಬೊಮ್ಮಾಯಿ ಸರ್ಕಾರ ಕೂಡ ಒಳ ಮೀಸಲಾತಿ ಜಾರಿ ಮಾಡುವ ನಿರ್ಧಾರವನ್ನು ಲೋಕಸಭೆ ಚುನಾವಣೆ ಒಂದು ತಿಂಗಳು ಬಾಕಿ ಇರುವ ಮುನ್ನ ತೆಗೆದುಕೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.
ಅದರ ಪರಿಣಾಮವಾಗಿ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪರಿಶಿಷ್ಟ ಜಾತಿ ಪಂಗಡದ ಜನ ಅವರಿಗೆ ತಕ್ಕ ಪಾಠ ಕಲಿಸಿ ಮೂಲಿ ಗುಂಪು ಮಾಡಿದ ನಿದರ್ಶನವಿದೆ. ಆದರೆ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಸರಕಾರವನ್ನು ನಂಬಿಕೊAಡು ನಮ್ಮ ಕರ್ನಾಟಕದ ೧೦೯ ಪರಿಶಿಷ್ಟ ಜಾತಿ ಪಂಗಡದ ಜನ ಕಾಂಗ್ರೆಸ್ ಸುಭದ್ರ ಸರ್ಕಾರ ರಚನೆಯಾಗುವುದಕ್ಕೆ ೧೩೦ ಸೀಟು ಗೆಲ್ಲುವುದಕ್ಕೆ ಕಾರಣಿಭೂತರಾಗಿದ್ದಾರೆ ಎಂಬ ನಿರ್ದೇಶನವೇ ಇದೆ ಅದಕ್ಕಾಗಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿಗೆ ತರುವ ವರದಿಯನ್ನು ಇಲ್ಲಿಗೆ ಕೈ ಬಿಡಬೇಕು ಒಂದು ವೇಳೆ ಮುಂದುವರಿಸಿದ್ದಲ್ಲಿ ಅದರ ಪರಿಣಾಮ ಹಿಂದೆ ಇದ್ದ ಬಿಜೆಪಿ ಬಸವರಾಜ ಬೊಮ್ಮಾಯಿ ಸರಕಾರಕ್ಕೆ ಚುನಾವಣೆಯಲ್ಲಿ ಕಲಿಸಿದ ತಕ್ಕ ಪಾಠವನ್ನು ಈಗಿರುವ ಸರ್ಕಾರಕ್ಕೂ ತಕ್ಕ ಪಾಠ ಕಲಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಈ ಸಂದರ್ಭದಲ್ಲಿ ಕುಮಾರ ಬಳಗೇರಿ ಗೋರಸೇನಾ ಮುಖಂಡ, ವಿಶ್ವನಾಥ್ ಕುಣಿಕೇರಿ, ಪ್ರಕಾಶ್ ಬಳಗೇರಿ ಇದ್ದರು.