
ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಕಾರ್ಯವಾಗಲಿ : ಹುಲಿಗೆಮ್ಮ ತಳವಾರ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 18- ಗ್ರಾಮೀಣ ಭಾಗದ ಮಕ್ಕಳಲ್ಲಿ ತಮ್ಮದೇಯಾದ ಪ್ರತಿಭೆ ಅಡಗಿರುತ್ತದೆ ಅಂತಹ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹುಲಿಗೆಮ್ಮ ಬಸವರಾಜ್ ತಳವಾರ ಹೇಳಿದರು.
ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಭೂತ ಭುಜಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ೨೦೨೪-೨೫ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳಲ್ಲಿನ ಪ್ರತಿಭೆ ಅನಾವರಣಗೊಳಿಸಲು ಸೂಕ್ತ ವೇದಿಕೆ ನಿರ್ಮಾಣವಾಗಬೇಕಿದೆ ಕೇವಲ ಪಠ್ಯದ ಜತಗೆ ಪ್ರತಿಭಾ ಕಲೋತ್ಸವ, ಕ್ರೀಡೆಗಳಂತ ಸ್ಪರ್ಧೆಯಲ್ಲಿ ತೊಡಗಬೇಕು ಪ್ರತಿ ಮಗುವಿನಲ್ಲಿ ಪ್ರತಿಭೆ ಹೊರ ಹಾಕುವ ಕೆಲಸವಾಗಬೇಕು ಎಂದು ತಿಳಿಸಿದರು.
ಸಿಆರ್‌ಪಿ ಮಾನಪ್ಪ ಪತ್ತಾರ್ ಮಾತನಾಡಿ, ಶಿಕ್ಷಣ ಇಲಾಖೆ ಕ್ಲಸ್ಟರ್ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ನಡೆಸುವ ಕಾರ್ಯಕ್ರಮ ಸ್ಪೂರ್ತಿ ದಾಯಕವಾಗಿದ್ದು, ಪ್ರತಿಭೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಭಾಗಿ ಆಗಬೇಕು ಎಂದು ಕರೆ ನೀಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ, ರುದ್ರಯ್ಯಶಾಸ್ತಿç ಹಿರೇಮಠ, ಹೋಬಳಿ ನೋಡಲ್ ಅಧಿಕಾರಿ ಕನಕಪ್ಪ ಕಂಬಳಿ, ತಾಳಕೇರಿ ಸಿಆರ್‌ಸಿ ದೊಡ್ಡನಗೌಡ ಪಾಟೀಲ್, ಗ್ರಾ.ಪಂ ಮಾಜಿ ಅಧ್ಯಕ್ಷ ಗಾಳೆಪ್ಪ ಓಜನಹಳ್ಳಿ, ಗ್ರಾ.ಪಂ.ಸದಸ್ಯ ಆನಂದ ಈಳಿಗೇರ್, ಗ್ರಾ.ಪಂ. ಮಾಜಿ ಸದಸ್ಯ ಅಶೋಕ ಹರ್ಲಾಪೂರ, ಸಂಸ್ಥೆಯ ಕಾರ್ಯದರ್ಶಿ ಆರ್.ಎಂ. ಚಂದ್ರಶೇಖರಯ್ಯ ಹಿರೇಮಠ, ಮುಖ್ಯ ಶಿಕ್ಷಕ ಶರಣಬಸಪ್ಪ ಬಂಗಾರಿ, ಸರಕಾರಿ ಪದವಿ ಪೂರ್ವ ಕಾಲೇಜಿ ಉಪ ಪ್ರಾಚಾರ್ಯ ಬಾಬುಸಾಬ್ ಲೈನ್‌ದಾರ್, ಬಿಆರ್‌ಪಿ ಸಂಗಮೇಶ ತೋಟದ್, ಶಿಕ್ಷಕರಾದ ಸಂಗಯ್ಯ ಹಿರೇಮಠ, ಸುಭಾಸ ಕೋಳೂರು, ದೇವಿಂದ್ರಪ್ಪ ಗಾಣದಾಳ್, ಈಶಪ್ಪ ತಾಳಕನಕಾಪೂರ, ಕಾವ್ಯ ಪಿ, ಆಂಜನೇಯ ಈಳಿಗೇರ್ ಮತ್ತು ಕ್ಲಸ್ಟರ್ ಮಟ್ಟದ ವ್ಯಾಪ್ತಿಗೆ ಬರುವ ಸರಕಾರಿ ಹಾಗೂ ಖಾಸಗಿ ವಸತಿ ಶಾಲೆಯ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ಮತ್ತಿತರರು ಪಾಲ್ಗೊಂಡಿದ್ದರು.