
ನಾವು ಆರೋಗ್ಯವಾಗಿದ್ದೇವೆ ಎಂದರೆ ಪೌರಕಾರ್ಮಿಕರೇ ಕಾರಣ : ಹುಸೇನ್ ಬಾಷಾ
ಕರುನಾಡ ಬೆಳಗು ಸುದ್ದಿ
ಮರಿಯಮ್ಮನಹಳ್ಳಿ, 23- ಕರ್ನಾಟಕ ಸರ್ಕಾರದ, ಕರ್ನಾಟಕ ರಾಜ್ಯ ಪೌರ ನೌಕರರ ಸಂಘ, ಪಟ್ಟಣ ಪಂಚಾಯಿತಿ ಕಾರ್ಯಾಲಯ ಮರಿಯಮ್ಮನಹಳ್ಳಿ ವತಿಯಿಂದ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ೧೪ನೇ ವರ್ಷದ ಪೌರ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು.
ಪಂಚಾಯಿತಿಯ ನೂತನ ಅಧ್ಯಕ್ಷ ಹುಸೇನ್ ಬಾಷಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಪೌರಕಾರ್ಮಿಕರಿಗೆ ದಿನಾಚರಣೆಯ ಶುಭಾಶಯ ಕೋರಿ ಮಾತನಾಡಿ ಇಂದು ಪ್ರತಿಯೊಂದು ಊರು ಸ್ವಚ್ಛವಾಗಿರಬೇಕು, ಪ್ರತಿಯೊಬ್ಬ ಮನುಷ್ಯರು ಸ್ವಚ್ಛವಾಗಿರಬೇಕು, ಮತ್ತು ನಮಗೆ ಯಾವುದೇ ರೋಗ ರುಜಿನಗಳು ಬಾರದಂತೆ ಮಾತ್ರೆಗಳನ್ನು ತಿನ್ನದೇ ಆರೋಗ್ಯವಾಗಿದ್ದೇವೆ ಎಂದರೆ ಅದಕ್ಕೆ ಪೌರ ಕಾರ್ಮಿಕರೇ ಕಾರಣ. ಈ ವೇದಿಕೆ ಮೇಲೆ ಪೌರ ಕಾರ್ಮಿಕರನ್ನು ಕುರಿಸಬೇಕಾಗಿತ್ತು ಅನಿವಾರ್ಯ ಕಾರಣವಾಗಿ ನಾವುಗಳು ಇಲ್ಲಿ ಕೂತಿದ್ದೇವೆ. ತಮಗೆ ಇದೇ ವೇದಿಕೆ ಮೇಲೆ ಯಾವ ರೀತಿಯ ಗೌರವ ಸಲ್ಲಿಸಬೇಕೊ ಅದನ್ನು ನಾವೆಲ್ಲಾ ಸದಸ್ಯರು ಸೇರಿ ಸಲ್ಲಿಸುತ್ತೇವೆ. ನಮ್ಮ ವಾರ್ಡ್ ಗಳಲ್ಲಿ ಜನರು ನಾವು ಸದಸ್ಯರೆಂದು ಗುರುತಿಸಲು, ಗೌರವಿಸಲು ಮತ್ತು ನಮ್ಮ ಮರ್ಯಾದೆಯನ್ನು ಉಳಿಸಲು ಪೌರ ಕಾರ್ಮಿಕರೇ ಕಾರಣ. ಯಾಕೆಂದ್ರೆ ವಿದ್ಯುತ್ ಲೈಟ್ ಗಳು, ಚರಂಡಿ ಸ್ವಚ್ಛಗೊಳಿಸುವುದು, ಮತ್ತೆ ಪ್ರತಿಯೊಂದು ಮನೆ ಮನೆಗೂ ನೀರು ಬಿಡುವುದು ಹೀಗೆ ಹಲವಾರು ಕೆಲಸಗಳನ್ನು ಮಾಡುತ್ತಿರುವುದೇ ಪೌರ ಕಾರ್ಮಿಕರು. ಪಂಚಾಯಿತಿ ಸರಿಯಾಗಿ ಕಾರ್ಯನಿರ್ವಹಿಸುತ್ತದೆ ಎನ್ನುವುದಾದರೆ ಅದು ನಿಮ್ಮಿಂದಲೇ ಆಗಿದೆ. ಇಲ್ಲಿಯವರೆಗೂ ಒಳ್ಳೆಯ ರೀತಿಯಲ್ಲಿ ಸಾಕಾರ ಕೊಟ್ಟಿದ್ದೀರಿ ಇನ್ನು ಮುಂದೆಯೂ ಸಹ ಸಹಕಾರ ಕೊಡ್ತೀರ ಎಂದು ನಂಬಿದ್ದೇವೆ ಎಂದು ಪೌರಕಾರ್ಮಿಕರ ಕಾರ್ಯವನ್ನು ಶ್ಲಾಘನೆ ಮಾಡಿದರು. ಇನ್ನು ಕಾರ್ಮಿಕರು ೧೫ ತಿಂಗಳು ಕೆಲಸದ ಅವಧಿ ಮಾಡಿಕೊಡಬೇಕೆಂದು ತಮ್ಮ ಸಮಸ್ಯೆಯನ್ನು ಹೇಳಿದ್ದೀರಿ ಮೊದಲ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ಚರ್ಚಿಸಿ ಅದನ್ನು ಅನುಮೋದಿಸಿದ್ದಾರೆ ಆದಷ್ಟು ಬೇಗ ಅದನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದರು.
ವೇದಿಕೆಮೇಲೆ ಪೌರ ಕಾರ್ಮಿಕರ ಕುರಿತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತ ಮಂಜಮ್ಮ ಜೋಗತಿ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಖಾಜಾ ಮೈನುದ್ದೀನ್, ಸದಸ್ಯರಾದ ರಮೇಶ್ ಶುಭಕೋರಿ ಮಾತನಾಡಿದರು.
ಈ ಸಂದರ್ಭದಲ್ಲಿ ಪೌರ ಕಾರ್ಮಿಕರಾದ ಚಿದಾನಂದ, ಅನಿಲಕುಮಾರ್, ಹನುಮಂತಪ್ಪ, ಗುಜ್ಜಲ್ ಹನುಮಂತ, ಹರಿಜನ ಮೈಲಪ್ಪ, ಓಬಳೇಶ, ಪಂಪಾಪತಿ, ಭೀಮಪ್ಪ ಗೌರಿಪುರದ ಹನುಮಂತ,ಅನಿಲ್ ಕುಮಾರ್, ಮಂಜುನಾಥ ನಾಯ್ಕ್, ಸಮಾದೆಪ್ಪ, ನಾಗವೇಣಿ, ಕೊಟ್ರೇಶ, ಪದ್ಮಾವತಿ, ವರಲಕ್ಷ್ಮಿ, ಭಾರತಿ ಪೂಜಾರ್, ಗೋಣೆಪ್ಪ, ಸೋಮಕ್ಕ, ಹುಲುಗಮ್ಮ, ಪ್ರಕಾಶ, ಗಂಗಾಧರ, ಪರಶುರಾಮ, ಅಭಿಲಾಶ್, ಕೊಟ್ರೇಶ, ವೆಂಕಟೇಶ, ಮೈಲಾರಿ ಇವರನ್ನು ವೇದಿಕೆ ಮೇಲೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಉಪಾಧ್ಯಕ್ಷರಾದ ಲಕ್ಷ್ಮಿ, ಆರ್, ಸಿಬ್ಬಂದಿಗಳಾದ ಬಸವರಾಜ, ಹುಸೇನ್ ಭಾಷ, ನವೀನ್ ಕುಮಾರ, ಹೊನ್ನೂರ್ ಭಾಷಾ, ನಾಗರಾಜ, ಭರಮಪ್ಪ, ಶರಣೇಶ, ಮೀರಮ್ಮ, ಫಾತಿಮಾ, ಸದಸ್ಯರಾದ ಎಲ್.ವಸಂತಕುಮಾರ್, ಎಲ್.ಪರಶುರಾಮ, ಬಿ.ಜ್ಯೋತಿ, ಬಿ.ಎಂ.ಎಸ್.ರಾಜೀವ್, ಕೊರವರ ಮಂಜುನಾಥ, ರೇಣುಕಮ್ಮ ಮರಡಿ, ಪೂಜಾರ್ ಅಶ್ವಿನಿ ನಾಗರಾಜ್, ಎಲ್.ಹುಲಗಿಬಾಯಿ ಸಿ.ಸುಮಂಗಳ ಮಂಜುನಾಥ್, ಭಾಷ. ಕೆ, ಎಸ್.ಮಹಮದ್, ಕುಸುಮ ಬಿ.ರಮೇಶ, ಮರಡಿ ಸುರೇಶ, ಲಕ್ಷ್ಮೀಬಾಯಿ, ವಿಜಯಬಾಯಿ, ಲಕ್ಷ್ಮೀಬಾಯಿ ಧರ್ಮ ನಾಯ್ಕ್ ಊರಿನ ನಾಗರಿಕರು ಇದ್ದರು.