5

ರಾಜ್ಯಪಾಲರು ಪ್ರಸಿಕ್ಯೂಶೇನ್ ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ

ಕರುನಾಡ ಬೆಳಗು ಸುದ್ದಿ

ವಿಜಯನಗರ, 23- ನಗರದಲ್ಲಿ ತಾಲೂಕು ಅಹಿಂದ ಯುವ ವೇದಿಕೆಯ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಸಿಕ್ಯೂಶೇನ್ ಅನುಮತಿ ನೀಡಿರುವುದನ್ನು ವಾಪಸ್ಸು ಪಡೆಯಲು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರ ಪತಿಗೆ ಮನವಿ ಸಲ್ಲಿಸಲು ಸಾಯಿಬಾಬಾ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಛೇರಿಗೆ ಅಹಿಂದ ಯುವ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಅಹಿಂದ ಯುವ ವೇದಿಕೆ ಜಿಲ್ಲಾಧ್ಯಕ್ಷ ಬುಡ್ಡಿ ಬಸವರಾಜ ಮಾತನಾಡಿ, ರಾಜ್ಯದಲ್ಲಿ ಪಾರದರ್ಶಕ ಆಡಳಿತ ನೀಡುತ್ತಿರುವುದನ್ನು ಸಹಿಸದ ಬಿಜೆಪಿಯವರು ಅಹಿಂದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ರಾಜಕೀಯ ಜೀವನವನ್ನು ನಿರ್ನಾಮ ಮಾಡಬೇಕು ಮತ್ತು ಅಹಿಂದ ವರ್ಗವನ್ನು ಮೂಲೆಗೆ ತಳ್ಳಬೇಕು ಎನ್ನುವ ನಿಟ್ಟಿನಲ್ಲಿ ಹೊರಟಿದ್ದಾರೆ. ಹಾಗಾಗಿ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯನವರನ್ನು ಮುಂದುವರೆಯಲು ಅವಕಾಶ ಮಾಡಿಕೊಡಬೇಕು ಇಲ್ಲದಿದ್ದಲ್ಲಿ ಸಂಘಟನೆಯಿಂದ ತೀರ್ವತರವಾದ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದರು.

ವೇದಿಕೆಯ ತಾಲೂಕು ಅಧ್ಯಕ್ಷ ಕುಬೇರ ದಲ್ಲಾಳಿ ಮಾತಾನಾಡಿ ಸಿಎಂ ಸಿದ್ದರಾಮಯ್ಯನವರು ಬಡವರ ಅಭಿವೃದ್ಧಿಗಾಗಿ ಗ್ಯಾರಂಟಿಗಳನ್ನು ತಂದಿದ್ದಾರೆ. ಜನಪರ ಕಾಳಜಿ ಇರುವ ಮುಖ್ಯಮಂತ್ರಿಯನ್ನು
ತೇಜೋವಧೆ ಮಾಡಲು ಹೊರಟಿರುವ ಜೆಡಿಎಸ್ ಮತ್ತು ಬಿಜೆಪಿ ನಾಯಕರು ರೂಪಿಸಿರುವ ಕುತಂತ್ರವನ್ನು ಕೂಡಲೇ ನಿಲ್ಲಿಸಬೇಕೆಂದು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.

ರಾಜ್ಯಪಾಲರು ಪ್ರಸಿಕ್ಯೂಶೇನ್ ಅನುಮತಿ ನೀಡಿರುವುದನ್ನು ಖಂಡಿಸಿ ಅದನ್ನು ವಾಪಸ್ಸು ಪಡೆಯಲು ಒತ್ತಾಯಿಸಿ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇಮಾಮ್ ನಿಯಾಜಿ,ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ವೆಂಕಟರಮಣ ಮಾತನಾಡಿದರು.

ಮನವಿಯಲ್ಲಿ : ಒಬ್ಬ ಮಾಜಿ ಮುಖ್ಯಮಂತ್ರಿ ಸೇರಿ ಮೂವರು ಮಾಜಿ ಸಚಿವರ ವಿರುದ್ಧ ವರ್ಷಗಳಿಂದ ಲೋಕಾಯುಕ್ತ ಮತ್ತು ಪೋಲೀಸ್ ತನಿಖಾಧಿಕಾರಿಗಳು ಪ್ರಾಸಿಕ್ಯೂಶನ್ ಗೆ ಅನುಮತಿ ಕೇಳಿರುವ ಫೈಲ್ ಗಳನ್ನು ಹಿಂದಿಟ್ಟು, ಕೆಲವು ಸಾಮಾಜಿಕ ಕಾರ್ಯಕರ್ತರ ದೂರಿನ ಮೇರೆಗೆ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ವಿರುದ್ಧ ತಿಂಗಳೊಳಗಾಗಿ ಪ್ರಾಸಿಕ್ಯೂಶನ್ ಗೆ ತುರ್ತಾಗಿ ನೀಡಿರುವ ಅನುಮತಿಯು ಅನುಮಾನಕ್ಕೆ ಕಾರಣವಾಗಿದ್ದು ಯಾವುದೇ ಆಗೋಚರ ಶಕ್ತಿಯ ಕೈಗೊಂಬೆಯಾಗಿ ರಾಜ್ಯಪಾಲರು ಕೆಲಸ ಮಾಡುತ್ತಿದ್ದಾರೆ ಎನ್ನುವ ಗುಮಾನಿ ಕರ್ನಾಟಕದ ಜನರನ್ನು ಕಾಡುತ್ತಿದೆ.

ಸಿದ್ದರಾಮಯ್ಯನವರು ಕರ್ನಾಟಕದ ಶೋಷಿತ ವರ್ಗಗಳ ಜನರ ದನಿಯಾಗಿದ್ದು, ದೀನ ದಲಿತರು ಮತ್ತು ಬಡವರ ಪರ ಅನೇಕ ಜನಪ್ರಿಯ ಯೋಜನೆ ಜಾರಿಗೆ ತಂದು ಅಹಿಂದ ವರ್ಗಗಳ ಆಶಾಕಿರಣವಾಗಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಯಾಗಿ ಅವರ ಜನಪ್ರಿಯತೆ ಸಹಿಸದೇ ಕೇಂದ್ರದ ಬಿಜೆಪಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟವು ಕರ್ನಾಟಕದ ರಾಜ್ಯಪಾಲರ ಅಂಗಳವನ್ನು ಬಿಜೆಪಿ ಕಛೇರಿ ಮಾಡಿಕೊಂಡು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರನ್ನು ಸುಳ್ಳು ಅಪಪ್ರಚಾರ ಮತ್ತು ಬೊಟ್ಟಿ ದೂರುಗಳನ್ನು ನೀಡುವ ಮೂಲಕ ಅಧೀಕಾರದಿಂದ ಕೆಳಗಿಳಿಸಿ ಹಿಂಬಾಗಿಲಿನಿಂದ ಸರ್ಕಾರ ರಚಿಸುವ ಪ್ರಯತ್ನ ಮಾಡುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ.

ಆದ್ದರಿಂದ ಈ ಕೂಡಲೇ ತಾವುಗಳು ಅಹಿಂದ ವರ್ಗದ ಪ್ರಶ್ನಾತೀತ ನಾಯಕರೂ, ಘನ ಸರ್ಕಾರದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಶನ್ ಗೆ ನೀಡಿರುವ ಅನುಮತಿ ವಾಪಸ್ಸು ಪಡೆಯಲು ವಿಜಯನಗರ ಜಿಲ್ಲಾ ಅಹಿಂದ ವೇದಿಕೆ ಒತ್ತಾಯಿಸುತ್ತದೆ. ಒಂದು ವೇಳೆ ಅನುಮತಿ ನೀಡಿರುವುದನ್ನು ವಾಪಸ್ ಪಡೆಯದಿದ್ದರೆ ಹಂತಹಂತವಾಗಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಕೆ.ಬೆಟ್ಟದೀಶ,ಅಹಿಂದ ಯುವ ವೇದಿಕೆ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ದಿಲ್ ಶಾದ್, ಉಪಾಧ್ಯಕ್ಷೆ ಲಕ್ಷ್ಮೀದೇವಿ, ದೇವರಾಜ್, ಮಂಜುನಾಥ, ಗಂಟೆ ಉಮೇಶ್, ಮಾಳಗಿ ಉದಯ, ಲಕ್ಷ್ಮಿಪತಿ, ಕೆ ಪಂಪಾಪತಿ, ವಿ ಗಾಳೆಪ್ಪ, ಭಾಷಾ,ಡ್ಯಾಮ್ ಗಣೇಶ,ಅಂಕಲೇ ಶಾ,ವಿರೂಪಾಕ್ಷಿ,ರಾಮಾ,ಶ್ರೀನಿವಾಸ,ರಾಘವೇಂದ್ರ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!