
ಒಳ ಮೀಸಲಾತಿ ಜಾರಿಗೊಳಿಸಲು ವಿಳಂಬವಾದರೆ : ಉಗ್ರ ಹೋರಾಟ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 15- ಹಲವಾರು ದಿನಗಳಿಂದ ನೆನೆಗುದುಗೆ ಬಿದ್ದಿದ, ಒಳ ಮೀಸಲಾತಿ ಜಾರಿದ ಬಗ್ಗೆ ಸರ್ಕಾರ ಕೂಡಲೇ ಕ್ರಮ ವಹಿಸದಿದ್ದರೆ ಉಗ್ರ ಹೋರಾಟ ಕೈಗೆತ್ತಿಕೊಳ್ಳುವುದಾಗಿ ದಲಿತ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.
ನಗರದ ಒಂದು ಖಾಸಗಿ ಹೋಟೆಲ್ ನಲ್ಲಿ ಸಮಿತಿಯ ಮುಖಂಡ ಎಚ್ ಹನುಮಂತಪ್ಪ ಸುದ್ದಿಗೋಷ್ಠಿ ನಡೆಸಿ ಈಗಾಗಲೇ ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಜಾರಿಯ ಬಗ್ಗೆ ತೀರ್ಪು ನೀಡಿದೆ ಕೆಲವು ರಾಜ್ಯ ಸರ್ಕಾರಗಳು ಈಗಾಗಲೇ ಅಳಮಿ ಸಲಾತಿ ಜಾರಿ ಮಾಡಿಲಾಗಿದೆ ಎಂದು, ಆದರೆ ಕರ್ನಾಟಕ ಸರ್ಕಾರ ಆದೇಶವನ್ನು ಜಾರಿಗೊಳಿಸಲು ಮೀನಾ ಮೇಷ ಲೆಕ್ಕಿಸುತ್ತಿದೆ ಎಂದು ಅಭಿಪ್ರಾಯ ಪಟ್ಟರು. ತೀರ್ಪು ಬಂದು ಎರಡು ತಿಂಗಳು ಕಾಲದರೂ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಈ ದಿಶೆಯಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತ ಮಾಡಿದರು.
೨೬ ಸಾವಿರಕ್ಕೂ ಹೆಚ್ಚು ಬ್ಯಾಕ್ಲಾಗ್ ಹುದ್ದೆಗಳು ತುಂಬಲು ಸಿಎಂ ಸಿದ್ದರಾಮಯ್ಯನವರು ಸೂಚನೆ ನೀಡಬೇಕೆಂದು ಒತ್ತಾಯಿಸಿದರು.
ಅಕ್ಟೋಬರ್ ತಿಂಗಳಾ0ತ್ಯದಲ್ಲಿ ಒಳ್ಳೆ ಮೀಸಲಾತಿ ಜಾರಿಯಾಗದೆ ಇದ್ದಲ್ಲಿ ಉಗ್ರ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿಗೋಷ್ಠಿಯಲ್ಲಿ ಈಶ್ವರಪ್ಪ, ರಮೇಶ್, ಹೆಚ್.ಹುಸೇನಪ್ಪ, ದಾನಪ್ಪ, ಈರಪ್ಪ, ಸೋಮಶೇಖರ್, ಅರುಣಾಚಲಂ, ರಾಮಣ್ಣ ಉಪಸ್ಥಿತರಿದ್ದರು.