ದುಶ್ಚಟದಿಂದ ದೂರವಿದ್ದರೆ ನೆಮ್ಮದಿ : ಬಸವಭೂಷಣ ಸ್ವಾಮೀಜಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 30- ಕುಡಿತದಿಂದ ಮುಕ್ತರಾಗಿ ಸುಖ ಜೀವನ ನಡೆಸಬೇಕು ದುಶ್ಚಟಗಳಿಂದ ದೂರವಾದಾಗ ಮಾತ್ರ ಕುಟುಂಬ ಸಮಾಜದಲ್ಲಿ ನೆಮ್ಮದಿಯಿಂದ ಇರಲು ಸಾಧ್ಯ ಎಂದು ಬಸವ ಮಠ ಬಸವಭೂಷಣ ಸ್ವಾಮೀಜಿ ಹೇಳಿದರು.
ನಗರದ ಹಳೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಮತ್ತು ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಆಯೋಜಿಸಿದ ಮಧ್ಯವರ್ಜನ ಶಿಬಿರದ ಸಮರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಕೊಪ್ಪಳ ಜನ ಜಾಗೃತಿ ವೇದಿಕೆಯ ಯೋಜನಾಧಿಕಾರಿ ವೈ.ನಾಗೇಶ್, ಶಿಬಿರದ ಅಧಿಕಾರಿ ದೇವಿ ಪ್ರಸಾದ್ ಮಾತನಾಡಿದರು.
ಮಧ್ಯವರ್ಜನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕಿರಣ್ ಜೈನ, ನಗರಸಭೆ ಅಧ್ಯಕ್ಷೆ ಬಿ.ರೇಣುಕಮ್ಮ, ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಶಿವ ಶಂಕರ ರೆಡ್ಡಿ, ಶಿಬಿರಾಧಿಕಾರಿ ಪ್ರಭು ಹಿರೇಮಠ, ಸಮಾಜ ಸೇವಕ ಧರಪ್ಪನಾಯಕ, ಶ್ರೀನಿವಾಸರಾವ್, ಬುಟ್ಟ ಶ್ರೀರಾಮುಲು, ಪ್ರಭು ಹಿರೇಮಠ ಇದ್ದರು.