
ಇಫ್ಕೋ ನ್ಯಾನೊ ರಸಗೊಬ್ಬರಗಳ ವಿಚಾರ ಸಂಕಿರಣ ಮತ್ತು ಡ್ರೋನ್ ಪ್ರಾತ್ಯಕ್ಷಿಕೆ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 26- ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಇಂದು ಇಫ್ಕೋ ನ್ಯಾನೊ ರಸಗೊಬ್ಬರಗಳ ವಿಚಾರ ಸಂಕಿರಣ ಮತ್ತು ಡ್ರೋನ್ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು IFFCO Ltd ಕೊಪ್ಪಳ ಹಾಗೂ ಕೃಷಿ ಇಲಾಖೆ ಕೊಪ್ಪಳ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಕಿನ್ನಾಳ ಇವರ ಸಹಯೋಗದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ರುದ್ರೇಶಪ್ಪ್ T.S ಜಂಟಿ ಕೃಷಿ ನಿರ್ದೇಶಕರು ಕೊಪ್ಪಳ ಇವರು ಮಾತನಾಡಿ, ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನದ ನ್ಯಾನೋ ಗೊಬ್ಬರಗಳಾದ ನ್ಯಾನೋ ಯೂರಿಯ ಮತ್ತು ನ್ಯಾನೋ ಡಿ ಎ ಪಿ ಎನ್ನು ಬಳಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಸಹದೇವ ಯಾರಗುಪ್ಪಿ ಕೃಷಿಯಲ್ಲಿ ನ್ಯಾನೋ ಗೊಬ್ಬರಗಳ ಮಹತ್ವವನ್ನು ರೈತರಿಗೆ ತಿಳಿಸಿದರು ಹಾಗೂ Dr.ರಾಘವೇಂದ್ರ ಎಲಿಗಾರ್, ಕೃಷಿ ವಿಜ್ಞಾನಿ, KVK ಗಂಗಾವತಿ ಇವರು ಮಾತನಾಡಿ, ಯತೇಚ್ಛವಾಗಿ ಶಿಫಾರಸು ಗಿಂತ ಎಚ್ಚಿನ ಪ್ರಮಾಣ ಗೊಬ್ಬರ ಬಳಕೆ ಯಿಂದ ಮಣ್ಣಿನ ಪಲವತ್ತತೆ ಹಾಳಾಗುತ್ತಿದೆ ಅದೆ ರೀತಿ ಗಾಳಿ, ನೀರು ಕಾಲುಸಿತವಾಗುತ್ತಿದ್ದು ಇದಕ್ಕೆ ಪರಿಹಾರ ಎಂದರೆ ಹೆಚ್ಚಿನ ಪ್ರಮಾಣದಲ್ಲಿ ನ್ಯಾನೋ ಯೂರಿಯ ಮತ್ತು ನ್ಯಾನೋ ಡಿ ಎ ಪಿ ಎನ್ನು ಬಳಸುವಂತೆ ಹೇಳಿದರು.
ರಾಘವೇಂದ್ರ .N.ಕೊಪ್ಪಳ ಜಿಲ್ಲಾ ಕ್ಷೇತ್ರಧಿಕಾರಿಗಳು ಇವರು ಮಾತನಾಡಿ, ನ್ಯಾನೋ ಗೊಬ್ಬರ ಮತ್ತು IFFCO KISAN ಡ್ರೋನ್ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ರೈತರಿಗೆ ಮನವರಿಕೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಈ ಕಾರ್ಯಕ್ರಮದಲ್ಲಿ ರುದ್ರೆಶಪ್ಪ T S , ಜಂಟಿ ಕೃಷಿ ನಿರ್ದೇಶಕರು ಕೊಪ್ಪಳ, ಸಹದೇವ ಯರಗುಪ್ಪಿ ಉಪ ನಿರ್ದೇಶಕರು ಕೊಪ್ಪಳ , ಕೃಷಿ ವಿಜ್ಞಾನಿಗಳಾದ Dr.ರಾಘವೇಂದ್ರ ಎಲಿಗರ್ KVK ಗಂಗಾವತಿ , ಅಮರೇಶ್ ಉಪಲಾಪುರ RGB member , ಇಪ್ಪ್ಕೋ ಲೀ ಹಾಗೂ ಗ್ರಾಮದ ಪ್ರಗತಿಪರ ರೈತರು, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು ಸಿಬ್ಬಂದಿ ವರ್ಗ ಮತ್ತು ರೈತರು ಉಪಸ್ಥಿತರಿದ್ದರು.