
ಸಿದ್ದರಾಮಯ್ಯ ಸರ್ಕಾರದಲ್ಲಿ ರೈತರ ಬದುಕು ಬೀದಿಗೆ ಬರುತ್ತದೆ : ಸಚಿವ ಜೋಶಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 8- ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರ ಬದುಕನ್ನು ಬೀದಿಗೆ ತರುವಂತ ಕೆಲಸ ಮಾಡುತ್ತಿದೆ ಎಂದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ ಕಾರಿದರು.
ಸಂಡೂರು ಉಪಚುನಾವಣೆ ಅಂಗವಾಗಿ ಶುಕ್ರವಾರ ತೋರಣಗಲ್ ನಲ್ಲಿ ಮಾಧ್ಯಮ ಗೋಷ್ಠಿಯನ್ನು ನಡೆಸಿ ಮಾತನಾಡಿ, ಸಾವಿರಾರು ವರ್ಷಗಳ ಹಿಂದಿನ ಮಠಮಾನ್ಯಗಳ ಮತ್ತು ರೈತರ ಉಳಿಮೆ ಮಾಡುತ್ತಿರುವ ಜಮೀನುಗಳನ್ನು ವಖ್ಫ್ ಹೆಸರಿಗೆ ಮಾಡಿ ಮುಸ್ಲಿಂ ಸಮುದಾಯದ ಒಲೈಕೆ ಮಾಡುತ್ತಿದೆ, ಇದರಿಂದಾಗಿ ರೈತರ ಬದುಕನ್ನು ಬೀದಿಗೆ ತರುವುದು ಅಂತ ಪರಿಸ್ಥಿತಿ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದರು.
ಜಾಖðಡ್ ಮತ್ತು ಮಹಾರಾಷ್ಟ್ರ ವಿಧಾನಸಭೆಯ ಸಾರ್ವತ್ರಿಕ ಹಾಗೂ ೪೮ ವಿವಿಧ ಕ್ಷೇತ್ರಗಳಲ್ಲಿ ಉಪಚುನಾವಣಾ ನಡೀತಾ ಇದೆ ಎಂದು ಕರ್ನಾಟಕದಲ್ಲಿ ಮೂರು ಕಡೆ ಉಪಚುನಾವಣೆ ನಡೆಯುತ್ತದೆ, ಈಗಾಗಲೇ ಶಿಗ್ಗಾವಿನಲ್ಲಿ ಪ್ರಚಾರ ನಡೆಸಿದ್ದಾಗಿ, ಸಂಡೂರಿನಲ್ಲಿ ಪ್ರಚಾರ ಕಾರ್ಯಕ್ರಮ ಕೈಗೆತ್ತುಕೊಂಡಿರುವದಾಗಿ ತಿಳಿಸಿದರು. ಈ ಉಪಚುನಾವಣೆಯಲ್ಲಿ ಮೂರು ಕಡೆ ಎನ್‌ಡಿಎಗೆ ವಿಜಯ ಸಿಗಲಿದೆ ಎರಡು ರಾಜ್ಯದಲ್ಲಿಯೂ ಬಿಜೆಪಿ ಗೆಲ್ಲಲಿದೆ ಹಿಂದೆ ಸಚಿವನಾಗಿ ಜಾರ್ಖಂಡ್ ಜೊತೆ ನಿಕಟ ಸಂಪರ್ಕವಿದೆ ಎಂದು ಒಂದು ಮಹಾರಾಷ್ಟ್ರ ಜಾರ್ಖಂಡ್ ಎರಡು ಕಡೆ ಅಭೂತಪೂರ್ವ ಜಯ ತಮಗೆ ಸಿಗಲಿದೆ ಎಂದರು.
ಕಾAಗ್ರೆಸ್ ಒಂದು ರೀತಿಯಲ್ಲಿ ಅಲ್ಪಸಂಖ್ಯಾತರ ತುಷ್ಟಿ ಕರ್ಣಮಾಡುತ್ತದೆ ಪಿಎಫ್‌ಐ, ಏನ್‌ಡಿಪಿಎಫ್ ಸೆಮಿ ಮೂಮೆಂಟ್‌ನ ಪೂರ್ವ ಅವತಾರಗಳು ಶಮಿ ನಿರ್ಬಂಧ ಬಳಿಕವೂ ಕೋರ್ಟಿಗೂ ಹೋಗಿದ್ದರು, ಕೋರ್ಟ್ ಎತ್ತಿ ಹಿಡಿದಿದೆ ಇತ್ತೀಚೆಗೆ ಮಂದಿರಗಳ ಮೇಲೆ ದಾಳಿ ಮಾಡುತ್ತಿದ್ದಾರೆ, ಹುಬ್ಬಳ್ಳಿಯಲ್ಲಿ ಆಗಿರುವ ಘಟನೆ ಅತ್ಯಂತ ಸೂಕ್ಷ್ಮ ನಾನು ಅವತ್ತು ವಿಜಯನಗರದಲ್ಲಿದ್ದೆ ನೇರವಾಗಿ ಹುಬ್ಬಳ್ಳಿಗೆ ಹೋದೆ ಸ್ವಲ್ಪ ಯಾಮಾರಿದ್ದರೆ ನೂರಾರು ಪೊಲೀಸರು ಜೀವ ಕಳೆದುಕೊಳ್ಳುತ್ತಿದ್ದರು ಕಾಂಗ್ರೆಸ್ ದಲಿತ ಶಾಸಕನ ಮನೆ ಸುಟ್ಟು ಹಾಕುತ್ತಿದ್ದರು ಈಗ ರಾಜ್ಯದಲ್ಲಿ ವಾಕ್ಹು ಜಿಹದ್ ನಡೆದಿದೆ. ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ನವರು ಏನು ಅನ್ಕೊಂಡಿದ್ದಾರೆ ಏನೋ? ನಾನು ಅವರನ್ನು ಹುಂಬರು ಎನ್ನಲಾರೆ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ವಖ್ಫ್ ಆಸ್ತಿಯನ್ನು ರಕ್ಷಣೆ ಮಾಡ್ತೀವಿ ಅಂತ ಭರವಸೆ ಕೊಟ್ಟಿದ್ದರು ಈಗ ಅದನ್ನು ಮಾಡಲು ಹೊರಟಿದ್ದಾರೆ ಎಂದರು.
ಪುರಾತನ ಕಾಲದ ದೇವಸ್ಥಾನಗಳನ್ನು, ಪೂರ್ಣ ವಖ್ಫ್ ಪರ ಮಾಡಿದ್ದಾರೆ. ಸಿಎಂ ವಿರುದ್ಧ ರಾಜ್ಯಪಾಲರು ವಿವೇಚನಾಧಿಕಾರ ಬಳಸಿ ರಾಶಿ ಕುಶನ್‌ಗೆ ಅನುಮತಿ ಕೊಟ್ಟರು ಸಿಎಂ ಕೋರ್ಟಿಗೆ ಹೋದರು ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಎರಡು ಪ್ರಶ್ನೆ ಕೇಳಿದ್ದೇನೆ, ಇದುವರೆಗೂ ಉತ್ತರ ನೀಡಿಲ್ಲ ಎಂದರು.
ನಿಮ್ಮ ಸಚಿವರ ಪಿಎಗಳ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜೋಶಿ ನೋಡಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಡಾ.ಅಶ್ವತ್ ನಾರಾಯಣ, ಎನ್.ರವಿ ಕುಮಾರ್, ಪ್ರತಾಪ್ ಸಿಂಹ ಉಪಸ್ಥಿತರಿದ್ದರು.