
24 ರಂದು ಶಿವಶಕ್ತಿ ಸಾಂಸ್ಕೃತಿಕ ಭವನ ಉದ್ಘಾಟನೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 19- ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹತ್ತಿರ ಇಲಾಖೆದಲ್ಲಿ ನಿರ್ಮಾಣವಾಗಿರುವ ನೂತನ ಶ್ರೀಶೈಲ ಪೀಠದ ಶಿವಶಕ್ತಿ ಸಾಂಸ್ಕೃತಿಕ ಭವನ ಉದ್ಘಾಟನೆ ಮತ್ತು ಉಚಿತ ಸಾಮೂಹಿಕ ವಿವಾಹ ಸಮಾರಂಭಗಳ ಆಮಂತ್ರಣ ಪತ್ರಿಕೆಯನ್ನು ಶ್ರೀಶೈಲ ಪೀಠ ಶ್ರೀ ೧೦೦೮ ಜಗದ್ಗುರು ಡಾ.ಚನ್ನಸಿದ್ದರಾಮಯ್ಯ ಪಂಡಿತಾರಾಧ್ಯ ಶಿವಾಚಾರ್ಯರು ಬಿಡುಗಡೆಗೊಳಿಸಿದರು.
ನಗರಕ್ಕೆ ಆಗಮಿಸಿದ ಅವರು ಅಕ್ಟೋಬರ್ ೨೪ರಂದು ಉದ್ಘಾಟನೆಗೊಳ್ಳಲಿರುವ ಶಿವಶಕ್ತಿ ಸಾಂಸ್ಕೃತಿಕ ಭವನದ ಸಿದ್ಧತೆಯನ್ನು ಪರಿಶೀಲನೆ ನಡೆಸಿ ನಂತರ ವಿವಿಧ ಕಾರ್ಯಕ್ರಮ ಪೂರ್ವಭಾವಿ ಸಭೆ ಹಾಗೂ ಪತ್ರಿಕಾಗೋಷ್ಠಿ ನಡೆಸಿದರು.
ಸರಕಾರದಿಂದ ಹಾಗೂ ದಾನಿಗಳಿಂದ ಸಂಗ್ರಹವಾದ ಏಳು ಕೋಟಿಯಷ್ಟು ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಭವನದ ಉದ್ಘಾಟನೆ ಸಾಂಕೇತಿಕವಾಗಿರದೆ ಬಡವರಿಗಾಗಿ ಸಮಾಜಕ್ಕೆ ಸದುಪಯೋಗ ಆಗಲಿ ಎಂಬ ಉದ್ದೇಶದಿಂದ ಅಯ್ಯಾಚಾರ ಮತ್ತು ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಮಾಡುವ ಮೂಲಕ ಈ ಭವನ ಲೋಕಾರ್ಪಣೆ ಮಾಡುತ್ತಿದ್ದೇವೆ ಎಂದರು.
ಕAಬಾಳಿ ಮಠದ ಶ್ರೀ ವೀರಭದ್ರ ಶಿವಾಚಾರ್ಯ, ಗುರುಬಸವ ಮಠದ ಶ್ರೀ ಬಸವ ಭೂಷಣ, ಶ್ರೀ ದೊಡ್ಡ ಅಂತಪುರದ ಶ್ರೀಶೈಲ ಶಾಕ ಮಠದ ಕುಮಾರ ಪಂಡಿತರಾಧ್ಯ, ಮಾಜಿ ಶಾಸಕ ಟಿ.ಎಂ.ಚ0ದ್ರಶೇಖರಯ್ಯ ಸ್ವಾಮಿ, ಸಹಕಾರಿ ಧುರೀಣ ಚೊಕ್ಕ ಬಸವನಗೌಡ, ವಕೀಲ ಹೆಚ್.ಕೆ. ಮಲ್ಲಿಕಾರ್ಜುನ ಸ್ವಾಮಿ, ದೊಡ್ಡ ವೀರನಗೌಡ, ಜಡೆ ಸ್ವಾಮಿ ಗಾಣದಾಳ್ ಇನ್ನಿತರರು ಇದ್ದರು.