WhatsApp Image 2024-08-28 at 4.27.39 PM

ಪಪಂ ನೂತನ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಪದಗ್ರಹಣ

ಕರುನಾಡ ಬೆಳಗು ಸುದ್ದಿ

ಕುಕನೂರು, 28- ಪ.ಪಂ. ಸರ್ವ ಸದಸ್ಯರು ಪಟ್ಟಣ ಹಾಗೂ ನಗರದ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಕೆಲಸ ಮಾಡಬೇಕು ಎಂದು ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ್ ಉಳ್ಳಾಗಡ್ಡಿ ಹೇಳಿದರು.

ಪಪಂ ಆವರ್ಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ. ಪಪಂ ನೂತನ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನು ಉದ್ದೇಶಿಸಿ ಯಲಬುರ್ಗಾ ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಅವರು ಮಾತನಾಡಿ, ಯಲಬುರ್ಗಾ ಕ್ಷೇತ್ರದಲ್ಲಿ ಕುಕನೂರು ಪಟ್ಟಣವು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪಟ್ಟಣ, ಹಾಗಾಗಿ ಪಪಂ ಹಾಗೂ ನಗರ ಅಭಿವೃದ್ಧಿಯಾಗಬೇಕಾದರೆ ಪಪಂ 19 ಸದಸ್ಯರ ಸಹಕಾರ ಬಹಳ ಮುಖ್ಯ, ಪಟ್ಟಣದಲ್ಲಿ ನಾಗರಿಕರ ಕುಡಿಯುವ ನೀರು, ಸ್ವಚ್ಛತೆ, ಶೌಚಾಲಯ, ಚರಂಡಿ, ವಿದ್ಯುತ್ ನಾನಾ ಸಮಸ್ಯೆಗಳ ಬಗ್ಗೆ ಎಲ್ಲಾ ಸದಸ್ಯರು ಪಕ್ಷಾತೀತವಾಗಿ ಚಿಂತನೆ ಮಾಡಿ, ನಾಗರಿಕರ ಸಮಸ್ಯೆಗಳನ್ನು ಸರಿಪಡಿಸುವ ಜವಾಬ್ದಾರಿ ನಿಮ್ಮ ಮೇಲೆ ನೀಡಿದೆ ಪಪಂ ಹಾಗೂ ನಗರಗಳ ಅಭಿವೃದ್ಧಿ ಕೆಲಸಗಳನ್ನು ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಅವರೊಂದಿಗೆ ತೆಗೆದುಕೊಂಡು ಪಕ್ಷಾತೀತವಾಗಿ ಅಭಿವೃದ್ಧಿ ಪಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಟ್ಟಣ ಪಪಂ ಸರ್ವ ಸದಸ್ಯರು, ಹನುಮಂತ ಗೌಡ ಚಂಡೂರ್, ಸತ್ಯ ನಾರಾಯಣಪ್ಪ ಹರಪನಹಳ್ಳಿ, ಕಾಸಿಂ ಸಾಬ್ ತಳಕಲ್, ಸಿದ್ದಯ್ಯ ಕಳ್ಳಿಮಠ, ರೆಹೆಮಾನಸಾಬ್ ಮಕ್ಕಪ್ಪನವರ್, ಮಂಜುನಾಥ್ ಕಡೆಮನಿ, ರಾಮಣ್ಣ ಭಜಂತ್ರಿ, ಸಂಗಮೇಶ್ ಗುತ್ತಿ, ವೀರಯ್ಯ ದಳಪತಿ, ರಶೀದ್ ಸಾಬ್ ಉಮಚಗಿ, ಮಲ್ಲಿಯಪ್ಪ ಅಣ್ಣಿಗೇರಿ, ಶ್ರೀನಿವಾಸ್ ದೇಸಾಯಿ, ವೀರಪ್ಪ ಗುತ್ತಿ, ಜಂಬಣ್ಣ ಅಂಗಡಿ, ಮೇಘರಾಜ್ ಜಿಡಿಗಿ,ಪಪಂ ಮುಖ್ಯ ಅಧಿಕಾರಿ ರವೀಂದ್ರ ಬಾಗಲಕೋಟ ಕಾರ್ಯಕ್ರಮ ನಿರೂಪಿಸಿದರು. ಪಪಂ ಸರ್ವ ಸಿಬ್ಬಂದಿಗಳು ಇದ್ದರು. ಕಾರ್ಯಕ್ರಮ ವಂದನಾರ್ಪಣೆ ಶರಣಪ್ಪ ಯತ್ನಳ್ಳಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!