9

ಭಾರತೀಯ ಸಂಸ್ಕೃತಿ ಉತ್ಸವ ಆಧ್ಯಾತ್ಮ ಬದುಕಿನ ಸರಳ ಸತ್ಯ ಮಾರ್ಗದ ಶ್ರೇಷ್ಠ ಬುನಾದಿ : ಸ್ವಾಮಿ ನಿರ್ಭಯಾನಂದ ಸರಸ್ವತಿ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 21- ಮನುಷ್ಯನು ತನ್ನ ಬದುಕು ಸಾರ್ಥಕ ಗೊಳಿಸಿಕೊಳ್ಳಲು ಸರಳ ಮಾರ್ಗ ಆಧ್ಯಾತ್ಮದ ಸತ್ಯವನ್ನು ಅರಿಯಲು ಯಶಸ್ಸಿನ ಬುನಾದಿಯಾಗಿದೆ ಎಂದು ಮೈಸೂರು ರಾಮಕೃಷ್ಣ ಪರಮಹಂಸರ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು ಹೇಳಿದರು.

ಸಿರುಗುಪ್ಪ ನಗರದ ಅಮೃತೇಶ್ವರ ದೇವಾಲಯದಲ್ಲಿ ಕಲ್ಯಾಣ ಕರ್ನಾಟಕ ವಿಕಾಸ ಅಕಾಡೆಮಿ ಅಮೃತೇಶ್ವರ ದೇವಸ್ಥಾನ ಟ್ರಸ್ಟ್ ಸಹಭಾಗಿತ್ವದಲ್ಲಿ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ನಡೆದ ವಿವೇಕ ಮಂಟಪ ಉಪನ್ಯಾಸಕ ಮಾಲಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ ಜಗತ್ತು ಎಂದರೇನು? ನಾವು ಯಾರು? ದೇವರು ಎಂದರೆ ಯಾರು? ಎಂಬುದನ್ನು ವಿಚಾರ ಮಾಡಿ ಹೆಜ್ಜೆ ಹಾಕಿದವರು ಶ್ರೇಷ್ಠ ಬದುಕು ಸಾಗಿಸುತ್ತಾರೆ ಮೊದಲು ತನ್ನನ್ನು ತಾನು ಅರಿಯಬೇಕು ಸಮಾಜ ಏನು? ಎಂಬುದು ಸುಲಭವಾಗಿ ತಿಳಿಯುತ್ತದೆ ತನ್ನ ತಾನು ಅರಿಯದವರಿಗೆ ಯಾವತ್ತೂ ಶಾಂತಿ ಸಿಗುವುದಿಲ್ಲ ಜೀವನವು ಸುಂದರವಾಗಿದೆ ಸಾರ್ಥಕ ಮಾಡಿಕೊಳ್ಳುವುದು ನಮ್ಮ ಕೈಯಲ್ಲಿ ಇದೆ ನಿತ್ಯ ಸತ್ಯ ಎಂಬುದನ್ನು ಅರಿಯಬೇಕು ಎಂದರು.

ಗುರುಬಸವ ಮಠದ ಬಸವಭೂಷಣ ಸ್ವಾಮೀಜಿ ಡಾ.ಮಧುಸೂಧನ್, ಕಾರಿಗನೂರು ಸುಬ್ಬಯ್ಯ ಶೆಟ್ಟಿ, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಕೌತಾಳ ಆರ್ ಸದಾಶಿವ, ಸದಸ್ಯರಾದ ಎಂ.ವೆAಕಟೇಶ, ತಿರುಮಲ, ರಾಜಶೇಖರ, ಶಾಲಾ ಮಕ್ಕಳು ಸಾರ್ವಜನಿಕರು ಇದ್ದರು.

Leave a Reply

Your email address will not be published. Required fields are marked *

error: Content is protected !!