
ವಿನೂತನ ಕಟ್ಟಡ ಸಾಮಗ್ರಿಗಳು, ಕಟ್ಟಡ ನಿರ್ಮಿಸಲು ಬೇಕಾದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ-2024
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 11- ಮೂರು ದಿನಗಳ ಕಾಲ ಅಂದರೆ ಸೆಪ್ಟಂಬರ್ 11,12 ಮತ್ತು 13 ರಂದು ನಗರದ ಹಳೆ ಕೋರ್ಟ್ ರಸ್ತೆಯಲ್ಲಿರುವ ಕಮ್ಮ ಭವನದಲ್ಲಿ ನಿರ್ಮಾಣ 2024 ಪುದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷರು ತಿಳಿಸಿದ್ದಾರೆ.
ಅವರಿಂದು ನಗರದ ಖಾಸಗಿ ಹೋಟೆಲ್ ನಲ್ಲಿ ಈ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ನಗರದ ಕೋರ್ಟ್ ರಸ್ತೆಯ ಕಮ್ಮಾ ಭವನದಲ್ಲಿ ಏರ್ಪಡಿಸಿರುವ ನಿರ್ಮಾಣ್-2024 ಇದು ವಿನೂತನ ಬಗೆಯ ಕಟ್ಟಡ ಸಾಮಗ್ರಿಗಳು, ಕಟ್ಟಡ ನಿರ್ಮಿಸಲು ಬೇಕಾದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವಾಗಿದೆ. ಬಳ್ಳಾರಿ ನಗರದ ಮನೆ ಕಟ್ಟುವ ಜನರಿಗೆ ಇದು ಅನುಕೂಲಕಾರಿಯಾಗಿದೆ. ಹೊಸ ಸಾಮಗ್ರಿಗಳನ್ನು ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ ಗ್ರಾಹಕರಿಗೆ ಮತ್ತು ಪನಿಗಳಿಗೆ, ಮಾರಾಟಗಾರರಿಗೆ ಕೊಂಡಿಯಾಗಿ ಅಸೋಸಿಯೇಷನ್ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಒಂದೇ ಸೂರಿನಡಿ ಕಟ್ಟಡ ಸಾಮಗ್ರಿಗಳ ಪರಿಚಯ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ವಿವಿಧ ಕಟ್ಟಡ ಸಾಮಗ್ರಿ ಕಂಪನಿಗಳು ಮತ್ತು ಮಾರಾಟಗಾರರು ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರ, ಮನೆ ನಿರ್ಮಾಣಕ್ಕೆ ಬೇಕಾಗುವ ಎಲ್ಲಾ ವಸ್ತುಗಳನ್ನು ಒಂದೇ ಸೂರಿನಡಿಯಲ್ಲಿ ಪರಿಚಯಿಸುವ ಕೆಲಸವನ್ನು ನಿರ್ಮಾಣ್ -2024 ಮೂಲಕ ಅಸೋಸಿಯೇಷನ್ ಆಫ್ ಕನ್ಸಲಿಂಗ್ ಸಿವಿಲ್ ಎಂಜಿನಿಯರ್ಸ್ ಆಂಡ್ ಆರ್ಕಿಟೆಕ್ಸ್ ಮಾಡುತ್ತೀದ್ದು ಇದು ಬಳ್ಳಾರಿಯ ಜನತೆಗೆ ಉಪಯುಕ್ತವಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಕನಸಿನ ಮನೆಯ ಸಾಕಾರ ಕಟ್ಟಡ ಸಾಮಗ್ರಿಗಳು, ಕಟ್ಟಡ ನಿರ್ಮಿಸಲು ಬೇಕಾದ ವಸ್ತುಗಳ ಪ್ರದರ್ಶನ ಮತ್ತು ಮಾರಾಟಮೇಳದಲ್ಲಿ ಮನೆಗಳ ಇಂಟೀರಿಯರ್ ವಸ್ತುಗಳು ಲಭ್ಯವಾಗಲಿದೆ. ಮನೆ ಕಟ್ಟುತ್ತಿರುವವರು ಮತ್ತು ಮನೆ ಕಟ್ಟಲು ಬಯಸುವವರಿಗೆ ಒಂದು ಹೊಸ ಅನುಭವ ಮತ್ತು ಮನೆಯ ನಿರ್ಮಾಣಕ್ಕೆ ಬೇಕಾಗುವ ಮಾರ್ಗದರ್ಶನವು ಸಿಗಲಿದೆ ನಗರದ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ನಿರ್ಮಿಸುತ್ತಿರುವ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಇಲ್ಲಿ ಒಮ್ಮೆ ಭೇಟಿ ಕೊಟ್ಟರೆ ತಮ್ಮ ಕನಸಿನ ಮನೆ ಸಾಕಾರಗೊಳ್ಳಲು ಬೇಕಾಗುವ ಸಾಮಗ್ರಿಗಳ ಮತ್ತು ಅವುಗಳ ಮಾಹಿತಿ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ಎಂ ಜಿನಿಯರ್ಸ್ ಆಂಡ್ ಆರ್ಕಿಟೆಕ್ಟ್ ವತಿಯಿಂದ ಕಟ್ಟುವುದಕ್ಕೆ ಅನುಕೂಲವಾಗುವ ವಸ್ತುಗಳು ಮಾರುಕಟ್ಟೆಗೆ ಬರುತ್ತಿವೆ, ಇದು ಸಾರ್ಜನಿಕರಿಗೆ ಕಳೆದ ವರ್ಷವೂ ಈ ಪದರ್ಶನ ಮತ್ತು ಮೇಳವನ್ನು ಹಮ್ಮಿಕೊಳ್ಳಲಾಗಿತ್ತು.
ಅದೇ ರೀತಿಯಾಗಿ ಈ ವರ್ಷವೂ ಸಹ ನಮ್ಮ ಅಸೋಸಿಯೇಷನ್ ವತಿಯಿಂದ ಪ್ರದರ್ಶನ ಮತ್ತು ಮಾರಾಟವನ್ನು ಗ್ರಾಹಕರಿಗೆ ಅನುಕೂಲ ವಾಗುವಂತೆ ಆಯೋಜಿಸುತ್ತಿದ್ದೇವೆ ಎಂದು ಅಧ್ಯಕ್ಷ ಹೊಸೂರು ಈಶ್ವರಗೌಡ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಷನ್ ಉಪಾಧ್ಯಕ್ಷರಾದ ಸಿ.ಮಲ್ಲಿಕಾರ್ಜುನ, ಕಾರ್ಯಾದರ್ಶಿಯಾದ ಪಿ.ಪ್ರಕಾಶ್, ಜಂಟಿ ಕಾರ್ಯದರ್ಶಿಗಳಾದ ರಾಜೀವ್.ಟಿ.ಆರ್, ರಾಕೇಶ್, ಬಿ.ಟಿ, ಖಜಾಂಚಿಯಾದ, ಕೆ.ಎಲ್.ರೆಡ್ಡಿ, ಹಾಗೂ ಸದಸ್ಯರು ಇದ್ದರು.