
ಶಾಸಕ ಗವಿಯಪ್ಪರಿಂದ ಕಾಮಗಾರಿಗಳ ಗುಣಮಟ್ಟ ವೀಕ್ಷಣೆ
ಕರುನಾಡ ಬೆಳಗು ಸುದ್ದಿ
ವಿಜಯನಗರ, 20- ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿದ್ದು ಕಾಮಗಾರಿಗಳ ಪ್ರಗತಿಯನ್ನು ಶಾಸಕ ಗವಿಯಪ್ಪ ಖುದ್ದಾಗಿ ವೀಕ್ಷಿಸಿ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿದರು.
ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಜನತೆ ಬಯಸುತ್ತದೆ. ಗುತ್ತಿಗೆ ಪಡೆದವರು ಜನರ ನೀರಿಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು ಎಂದು ಗುತ್ತಿಗೆ ದಾರರಿಗೆ ಸೂಚಿಸಿ, ಕಾಮಗಾರಿ ತೃಪ್ತಿದಾಯಕವಾಗಿಲ್ಲ ಎಂದು ಅಸಮಾದಾನಗೊಂಡರು.
ಸಾಯಿಬಾಬಾ ವೃತ್ತದಿಂದ ನಾಗಪ್ಪ ಕಟ್ಟೆಯವರೆಗೆ ಚಲಿಸುತ್ತ ಕಾಮಗಾರಿ ಪರಿಶೀಲಿಸಿದರು.
ವೀಕ್ಷಣೆಯ ವೇಳೆ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರೊಂದಿಗೆ ಕಾಮಗಾರಿ ಬಗ್ಗೆ ಚರ್ಚೆ ನಡೆಸಿದರು.
ತೃಪ್ತಿದಾಯಕ ಮಟ್ಟದಲ್ಲಿ ಕಾಮಗಾರಿ ನಡೆಯದಿರುವುದರಿಂದ, ಶಾಸಕ ಗವಿಯಪ್ಪ ಅವರು ಗುತ್ತಿಗೆದಾರರು ಮತ್ತು ಇಲಾಖೆ ಅಧಿಕಾರಿಗಳಿಗೆ ಗುಣಮಟ್ಟವನ್ನು ಉತ್ತಮಪಡಿಸುವ ಕುರಿತು ಕಟ್ಟುನಿಟ್ಟಾದ ಸೂಚನೆ ನೀಡಿದರು.
ಉತ್ತಮ ಗುಣಮಟ್ಟದ ಕಾಮಗಾರಿ ಮಾತ್ರ ಜನತೆಯ ಅಗತ್ಯಗಳನ್ನು ತಲುಪಲು ಸಾಧ್ಯವೆಂದು ಅವರು ಸ್ಪಷ್ಟಪಡಿಸಿದರು.