1

ದಾಖಲೆಯ ಪ್ರಮಾಣದಲ್ಲಿ ಬಿಜೆಪಿ ಸದಸ್ಯತ ಅಭಿಯಾನ : ಜನಾರ್ಧನ ರೆಡ್ಡಿ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 10 ದಾಖಲೆಯ ಪ್ರಮಾಣದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಮಾಡಲಾಗುತ್ತಿದೆ ಎಂದು ಶಾಸಕ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.

ನಗರದ ೨೭,೨೮,೨೯ನೇ ವಾರ್ಡಿನ ನೀಲಕಂಠೇಶ್ವರ ಕ್ಯಾಂಪ್, ವಿವೇಕಾನಂದ ನಗರ, ಹಾಗೂ ಬಸ್ ಸ್ಟಾಂಡ್ ಹಿಂಭಾಗ ಮನೆ ಮನೆಗಳಿಗೆ ತೆರಳಿ ಸದಸ್ಯತ ಅಭಿಯಾನದ ಬಿತ್ತಿ ಚಿತ್ರವನ್ನು ಅಂಟಿಸಿ, ಕುಟುಂಬ ಸದಸ್ಯರ ಸದಸ್ಯತ್ವ ನವೀಕರಿಸಿ ಮಾತನಾಡಿ, ಸೆ, ೨ರಂದು ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ಅವರಿಂದ ಪ್ರಾರಂಭವಾಗಿರುವ ಸದಸ್ಯತ ಅಭಿಯಾನವು ದೇಶದೆಲ್ಲೆಡೆ ಅಭೂತಪೂರ್ವ ಬೆಂಬಲದೊ0ದಿಗೆ ಸಂಚಲನವನ್ನು ಸೃಷ್ಟಿಸಿದೆ, ಈವರೆಗೂ ೮ ಕೋಟಿಗೂ ಅಧಿಕ ಬಿಜೆಪಿ ಸದಸ್ಯರಾಗಿ ದೇಶದ ಅಭಿವೃದ್ಧಿ ಪಯಣಕ್ಕೆ ಜೊತೆಯಾಗಿದ್ದಾರೆ. ಈ ಮೂಲಕ ವಿಶ್ವದಲ್ಲಿಯೇ ಬಲಿಷ್ಠ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

೨ನೇ ಹಂತದ ಬಿಜೆಪಿ ಸದಸ್ಯತ ಅಭಿಯಾನ ಅಕ್ಟೋಬರ್ ೧ ರಿಂದ ಆರಂಭವಾಗಿದ್ದು ಸಮರ್ಥ ಹಾಗೂ ಸದೃಢ ಆಡಳಿತ ನೀಡುತ್ತಿರುವ ಬಿಜೆಪಿ ಪಕ್ಷದ ಸದಸ್ಯತ್ವ ಸ್ವೀಕರಿಸಿ, ವಿಕಸಿತ ಭಾರತ ಸಂಕಲ್ಪದೊ0ದಿಗೆ ಬಲಿಷ್ಠ ಭಾರತ ರೂಪಿಸುವಲ್ಲಿ ಮುಂದಾಗೋಣ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಶಿವರಾಮೇಗೌಡ್ರು, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ವಿರುಪಾಕ್ಷಪ್ಪ ಸಿಂಘನಾಳ, ನಗರಸಭೆ ಅಧ್ಯಕ್ಷ ಮೌಲಾಸಾಬ್, ನಗರಸಭೆ ಸದಸ್ಯರಾದ ವೆಂಕಟರಮಣ, ನವೀನ್ ಮಾಲಿ ಪಾಟೀಲ್, ರಮೇಶ್ ಚೌಡ್ಕಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವು ಅರಿಕೇರಿ, ನಗರಮಂಡಲ ಅಧ್ಯಕ್ಷ ಕಾಶಿನಾಥ್ ಚಿತ್ರಗಾರ, ಸಂಡೂರು ಮುಖಂಡರುಗಳಾದ ಕೆ.ಎಸ್.ದಿವಾಕರ್, ಮನೋಹರಗೌಡ ಹೇರೂರು, ವೀರೇಶ್ ಬಲಕುಂದಿ, ರಮೇಶ್ ಹೊಸಮಲಿ, ನಾಗರಾಜ್ ಚಳಗೇರಿ, ಮೊಹಮ್ಮದ್ ಚಾವುಸ್, ದೀಪಕ್ ಬಾಂಟ್ಯ, ಬಸವಂತ ಪಾಟೀಲ್, ಸಂಗಯ್ಯಸ್ವಾಮಿ, ಶ್ರೀನಿವಾಸ ಧೂಳ, ಅರ್ಜುನ್ ನಾಯಕ್, ವೆಂಕಟೇಶ್ ಜಬ್ಬಲಗುಡ್ಡ, ಶಿವು ಅದೋನಿ, ಶಾಮಮೂರ್ತಿ ಸಿರವಾರ, ಪ್ರಭಾಕರ ಗೋಟೂರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!