
ಕಾನ್ವೆ ರೂಲ್ಸ್ ಉಲ್ಲಂಘಿನೆ : ಜನಾರ್ದನ ರೆಡ್ಡಿ ಕಾರು ವಶಕ್ಕೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ/ಕೊಪ್ಪಳ, 8- ಮುಖ್ಯಮಂತ್ರಿಗಳ ಕಾನ್ವೆ ರೂಲ್ಸ್ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಶಾಸಕ ಜನಾರ್ದನ ರೆಡ್ಡಿಯವರ ರೇಂಜ್ ರೋವರ್ ಕಾರನ್ನು ಗಂಗಾವತಿ ಸಂಚಾರಿ ಠಾಣೆ ಪೊಲೀಸರು ಸೀಜ್ ಮಾಡಿದ್ದಾರೆ.
ಅ. 5 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಗಾವಲು ವಾಹನಕ್ಕೆ ಎದುರಾಗಿ ಕಾರು ಚಾಲನೆ ಮಾಡಿದ್ದರು.ಈ ಹಿನ್ನಲೆ ಕರ್ತವ್ಯದಲ್ಲಿದ್ದ ಪೊಲೀಸರು ಮೂರು ಕಾರುಗಳ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಮೂರು ಕಾರುಗಳನ್ನು ಪೋಲಿಸರು ಸುರ್ಪದಿಗೆ ತೆಗೆದುಕೋಂಡಿದ್ದಾರೆ ಎನ್ನಲಾಗಿದೆ.ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೋಲಿಸ ಇಲಾಖೆ ತಿಳಿಸಿದೆ.
ಮುಖ್ಯಮಂತ್ರಿ ಗಳು ಗಂಗಾವತಿ ಮಾರ್ಗವಾಗಿ ಬಳ್ಳಾರಿಗೆ ತೆರಳುವಾಗ ಅವರ ಬೆಂಗಾವಲು ವಾಹನಗಳ ವಿರುದ್ಧ ದಿಕ್ಕಿಗೆ ಶಾಸಕ ಜನಾರ್ದನ ರೆಡ್ಡಿ ಕಾರುಗಳು ಸಾಗಿದ ಪ್ರಕರಣಕ್ಕೆ ಸಂಬ0ಧಿಸಿದ0ತೆ ಪೊಲೀಸರು ರೆಡ್ಡಿ ಅವರ ಒಂದು ಹಾಗೂ ಅವರ ಬೆಂಬಲಿಗರ ಎರಡು ಕಾರುಗಳನ್ನು ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದಾರೆ.
ಹೋಮ ಇತ್ತು: ಈ ಘಟನೆ ಕುರಿತು ವಿಡಿಯೊ ಹೇಳಿಕೆ ನೀಡಿರುವ ಜನಾರ್ದನ ರೆಡ್ಡಿ ‘ಬಳ್ಳಾರಿಯ ಮನೆಯಲ್ಲಿ ಅಂದು ಹೋಮ ಆಯೋಜಿಸಲಾಗಿತ್ತು. ತುರ್ತಾಗಿ ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋಗಬೇಕಿದ್ದರೂ ಸಂಚಾರ ದಟ್ಟಣೆಯಲ್ಲಿಯೇ ಸುಮಾರು ಅರ್ಧಗಂಟೆ ಕಾದಿದ್ದೇನೆ. ಯಾರೇ ಮುಖ್ಯಮಂತ್ರಿಯಾದರೂ ಜನರಿಗೆ ತೊಂದರೆ ಕೊಡಬಾರದುಎಂದಿದ್ದಾರೆ.
‘ತುರ್ತಾಗಿ ಕಾರ್ಯಕ್ರಮಕ್ಕೆ ಹೋಗಬೇಕಿದ್ದರಿಂದ ಮಾತ್ರ ರಸ್ತೆ ವಿಜಭಕ ದಾಟಿ ಹೋಗಿದ್ದೇನೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ. ಮಾಧ್ಯಮಗಳೂ ಇದನ್ನು ತಪ್ಪಾಗಿ ಗ್ರಹಿಸಿವೆ ಎಂದು ಹೇಳಿದ್ದಾರೆ.
ನಿಯಮ ಉಲ್ಲಂಘನೆ ಮಾಡಿದ್ದರಿಂದ ಪೊಲೀಸರು ರೆಡ್ಡಿಯ ಮೂವರು ಕಾರು ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ ಎಫ್‌ಐಆರ್‌ನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ನಿಯಮ ಉಲ್ಲಂಘಿಸಿದ ವಾಹನಗಳನ್ನು ಇಲ್ಲಿನ ಸಂಚಾರ ಪೊಲೀಸ್ ಠಾಣೆಗೆ ತರಲಾಗದ್ದು ಪೊಲೀಸರು ಪಂಚನಾಮೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.