
ನವಜಾತ ಶಿಶುಗಳಲ್ಲಿನ ಕಾಮಲೆ ರೋಗ :ಪೂಜಾ ಮಹೇಶ
ಕರುನಾಡ ಬೆಳಗು ಸುದ್ದಿ
‘ಜಾಂಡೀಸ್’ ಅಂತ ಹೆಸರು ಕೇಳಿದರೇನೆ ಭಯ ಆಗುತ್ತೆ, ಮಕ್ಕಳಿಗೆ ಬರುತ್ತೆ ಅಂದ್ರೆ ಇನ್ನೂ ಭಯ ಅನಿಸುತ್ತೆ ಮಗು ಹುಟ್ಟಿದೆ ಅಂತ ಸಂತೋಷ ಒಂದು ಕಡೆ, ಫೋಟೋ – ‘ಥೆರಪಿ’ ಅದೂ ಇದೂ ಡಾಕ್ಟರ್ ಬೇರೆ ಬ್ಲಡ್ ಟೆಸ್ಟ್ ಅಂತ ಹೇಳ್ತಾರೆ. ಏನಕ್ಕೆ ಇದು ಮಕ್ಕಳಲ್ಲಿ ಆಗುತ್ತೆ ಅಥವಾ ಕಾಣಿಸಿಕೊಳ್ಳುತ್ತೆ, ಹೇಗೆ ಪತ್ತೆ ಹಚ್ಚುವುದು, ಚಿಕಿತ್ಸೆ ಏನು? ಡಾಕ್ಟರ್ ಹತ್ತಿರ ಹೋಗಬೇಕು. ಮಕ್ಕಳಿಗೆ ಜಾಂಡೀಸ್ ಬಂದರೆ ಯಾವ ರೀತಿ ಹಾನಿಯಾಗುತ್ತೆ?
ನಾವೂ ಮೊದಲು ನವಜಾತ ಶಿಶುಗಳಲ್ಲಿನ ಕಾಮಲೆ ಅಂದ್ರೇನು? ಅಂತ ತಿಳಿಯೋಣ.
ನವಜಾತ ಶಿಶುಗಳಲ್ಲಿನ ಕಾಮಲೆ :
ರಕ್ತದಲ್ಲಿ ” ಬಿಲಿರುಬಿನ್” ಅಂಶ ಜಾಸ್ತಿಯಾಗುವುದು. ಬಿಲಿರುಬಿನ್ ಅದು ಹಳದಿ ಬಣ್ಣದ ಪಿಗ್ಮOಟ್ ದೇಹದಲ್ಲಿ ಹೆಚ್ಚಾದಾಗ ಹೊರಹಾ ಕದಿ ದ್ದಾಗ ಅದು ನಮ್ಮಲ್ಲಿ ಕಾಯಿಲೆಯುಂಟು ಮಾಡುತ್ತೆ.
” ಬಿಲಿರುಬಿನ್’ ಎಂಬುದು ಫ್ರೆಂಚ್ ಪದ ಜೂನ್ (JAUNE) ಎಂಬುದರಿಂದ ಜಾಂಡೀಸ್ ಎಂದು ಅಳವಡಿಸಲಾಗಿದೆ. ಜೂನ ಪದದ ಅರ್ಥ ಹಳದಿ ಬಣ್ಣ. ಇದು ಶಿಶುಗಳಲ್ಲಿಯೇ ಏಕೆ ಕಂಡುಬರುತ್ತೆ.? ಎಂದು ಯೋಚಿಸುವುದಾದರೆ ಅವ ರುಗಳಲ್ಲಿ ಯಕೃತ್ತು ಅಂಗವು ಇನ್ನೂ ಚೆನ್ನಾಗಿ ಬೆಳವಣಿಗೆ ಹೊಂದಿರುವುದಿಲ್ಲ .ಇನ್ನೂ ಬೆಳವಣಿಗೆಯಾಗುತ್ತಿರುತ್ತೆ.
*ಇದರಿಂದ ಬಿಲಿರುಬಿನ್ ಶಿ ಶುವಿನ ರಕ್ತದಲ್ಲಿ ಉಳಿದು ದೇಹಕ್ಕೆ ಹಳದಿ ಬಣ್ಣದ ರೂಪದಲ್ಲಿ ಹಾನಿ ಮಾಡುತ್ತೆ. ಇದರಿಂದಲೇ ಶಿಶೂ ಗ ಳ ಲ್ಲಿ ಹೆಚ್ಚು ಜಾಂಡೀಸ್ ಕಂಡುಬರುತ್ತದೆ.
ನವಜಾತ ಶಿಶುವಿನ ಕಾಮಲೆಗೆ ಗುಣಲಕ್ಷಣಗಳು ಏನು?
* ಮೊದಲನೆಯದಾಗಿ ನಾವು ಮಗುವಿನ ದೇಹದ ಬಣ್ಣ ಹಳದಿ ರೂಪದಲ್ಲಿ ಹಾಗೂ
* ಕಣ್ಣಿನ ಸುತ್ತಲು ಮತ್ತು ಕಣ್ಣಿನ ಒಳ ಭಾಗದಲ್ಲಿನ ಹ ಳದಿ ವರ್ಣ ಕಾಣಬಹುದು.
*ಹಳದಿ ಬಣ್ಣದ ಮಗುವಿನ ಮೂತ್ರವಿಸರ್ಜನೆ. ಹಾಗೂ ಮಲವಿಸರ್ಜನೆ
*ಘಾಡವಾದ ಮಗುವಿನ ನಿದ್ರೆ, ಎದ್ದೇಳಲು ತುಂಬಾನೆ ಸುಸ್ತಾಗಿ ಕಾಣುತ್ತೆ.
* ಎದೆಹಾಲು ಕುಡಿಯುವಿಕೆಯಲ್ಲಿ ಹಿಂಜರಿಕೆ. ತೂಕ ಕಡಿಮೆಯಾಗುವುದು.
ಯಾವ ಸಮಯ ದಲ್ಲಿ ನವಜಾತ ಶಿಶುವಿನ ಕಾಮಲೆ ಬರುತ್ತೆ?
* ಅವಧಿ ಪೂರ್ವ – ಅಂದರೆ 9 ಅಂಗಳು ಮುಂಚೆ ಡೆಲಿವರಿ
* ರಕ್ತದ ಗುಂಪಿನಲ್ಲಿ ಹೊಂದಾಣಿಕೆ ಇಲ್ಲದಿರುವುದು.
*ಹೆರಿಗೆ ಸಮಯದಲ್ಲಿ ಮಗುವಿಗೆ ಗಾಯವಾದಾಗ.
*ಎದೆಹಾಲಿನ ಕಾಮಲೆ.
* ಎದೆಹಾಲುಣಿಸುವ ಕಾಮಲೆ
*(ಆಂತರಿಕ ರಕ್ತಸ್ರಾವ)
* ಬ್ಯಾಕ್ಟೀರಿಯ ಹಾಗೂ ವೈರಲ್ ಸೋಂಕುನಿಂದಲು ಬರು ವುದು
*ಲಿವರ್ ತನ್ನ ಕಾರ್ಯವನ್ನು ಮಾಡದೆ ಇರೋದ್ರಿಂದ ಇರಬಹುದು * (ಕಿಣ್ವದ ಕೊರತೆ)
*ಜಾOಡೀ ಸ್ ನ ಪರಿಣಾಮಗಳೂ,
* ಬುದ್ಧಿಮಾಂದ್ಯತೆಯಾಗಲು ತುಂಬಾ ಸಾಧ್ಯತೆಯಿದೆ,
* ಸೆರೆಬ್ರಲ್ ಪಾಲ್ಸಿ
* ಕಿವುಡುತನ
* ಬೆಳೆಯುವ ಹಲ್ಲುಗಳಿಗೂ ತೊಂದರೆಯಾಗಬಹುದು.
*ದೇಹದ ಕೆಳಭಾಗ ತನ್ಯ ಅಸ್ತಿತ್ವವನ್ನು ಕಳೆದುಕೊಳ್ಳಬಹುದು.
* ಕಣ್ಣಿನ ತೊಂದರೆ.
* ರೋಗನಿರೋಧಕ ಶಕ್ತಿ ಕುಂದುವುದು.
ನವಜಾತ ಶಿಶುಗಳಲ್ಲಿ ಐದುವಿಧದ ಕಾಮಾ ಲೆ ಕಂಡುಬರುವುದು:
1 ಸೈಕೋಲಾಜಿಕಲ್
2.ಪ್ಯಥಾಲಜಿಕಲ್ ಕಾಮಾಲೆ
3. ಶಾ ರೀ ರಿಕ
4. ಸ್ಥ ನ್ಯಾಪಾನ ಕಾಮಾಲೆ
5. ಎದೆ ಹಾಲು ಕಾಮಾಲೆ
1. ಸೈಕೋಲಾ ಜಿಕಲ್
ಇಂತಹ ಕಾಮಲೆಯು ಸಾಮಾನ್ಯವಾಗಿ ಈ. 60-70 ರಷ್ಟು ನವಜಾತ ಶಿಶುಗಳಲ್ಲಿ ಈ. 10 ರಷ್ಟು ಮಕ್ಕಳಿಗೆ ಮಾತ್ರ ಹೆಚ್ಚಿನ ಚಿಕಿತ್ಸೆ ಬೇಕಾಗಿರುವುದು. ಹೆಚ್ಚಿನ ಪ್ರಕರಣದಲ್ಲಿ ಹಾನಿಯಾಗಬಹುದು.
2. ಪ್ಯಥಾಲಜಿಕಲ್ ಕಾಮಾಲೆ
ಆದರೆ ತುಂಬಾ ಅಪರೂಪದಲ್ಲಿ ಮಕ್ಕಳ ಮೆದುಳಿಗೆ ಹಾನಿ ಅರುವುದು.
ಮಕ್ಕಳಲ್ಲಿ ಯಕೃತ್ತಿನನಂತಹ ಕೆಲವೊಂದು ಅಂಗಾಂಗಗಳು ಸರಿಯಾಗಿ ಬೆಳವಣಿಗೆ ಆಗದೆ ಇರುವುದೇ ಇಂತಹ ಸಮಸ್ಯೆಗೆ ಕಾರಣವಾಗಿದೆ. ಆದರೆ ಮಕ್ಕಳು ಬೆಳೆಯುತ್ತಿದ್ದಂತೆ ಮತ್ತು ದೇಹದ ಬೆಳವಣಿಗೆ ಆದಂತೆ ಈ ಕಾಮಲೆಯು” ದೀ ರ್ಘವಾಗಿ ಇರುವುದು. ಇದು ಮೂರು ವಾರಗಳ ಬಳಿಕೆ ಕಡಿಮೆ ಆಗುವುದು. ಆದರೆ ನಿಗದಿತ ಸಮಯದಲ್ಲಿ ಕಡಿಮೆಯಾಗದಿದ್ದರೆ ಮಗೂವನ್ನು ಆಸ್ಪತ್ರೆಗೆ ದಾಖಲಿಸುವುದು ಸೂಕ್ತ. ಇದರಲ್ಲಿ ಚಿಕಿತ್ಸೆ 24-42 ಗಂಟೆಗಳಲ್ಲಿ ಕಾಮಲೆಯ ತೀವ್ರ ತೆ ಕಡಿಮೆಯಾಗುವುದು.
3. ಶಾರೀರಿಕ ಕಾಮಲೆ : ನವಜಾತ ಶಿಶು ಗಳಲ್ಲಿ ಇದು ಸಾಮನ್ಯ ರೀತಿಯ ಕಾಮಾಲೆ. ಇದು ಯಕೃತ್ತಿನ ಅಪಕ್ವತೆಯಿಂದ ಮೊದಲ ವಾರದಲ್ಲಿ ಸಂಭವಿಸುತ್ತದೆ.
4.ಸ್ತನ್ಯಪಾನ ಕಾಮಾಲೆ : ಆರಂಭಿಕ ದಿನಗಳಲ್ಲಿ ಅಸಮರ್ಪಕ ಆಹಾರವು ಉದರ ಕಾಮಲೆ ಗೆ ಕಾರಣವಾಗುತ್ತದೆ, ಏಕೆಂದರೆ ಮಹಿಳೆ ಕಡಿಮೆ ಹಾಲು ಪಡೆಯುತ್ತಾರೆ. ಮತ್ತು ಕಡಿಮೆ ಪರಿಣಾಮಕಾರಿಯಾಗಿ ಹೊರಹಾಕುತ್ತದೆ.
5.ಎದೆ ಹಾಲು ಕಾಮಲೆ: ಎದೆಹಾಲಿನಲ್ಲಿರುವ ಕೆಲವು ಘಟಕ ಗಳು ಬಿಲಿರುಬಿನ್ ಚಾಯಪಚಾಯ ಕ್ರಿಯೆಯಲ್ಲಿ ಹಸ್ತಕ್ಷೇಪ ಅಪರೂಪದ ಸ್ಥಿತಿ.
*ನವಜಾತ ಶಿಶುಗಳ ಆರೈಕೆಯಲ್ಲಿ ಅಮ್ಮಂದಿರ ಉಪಯುಕ್ತ ಟಿಪ್ಸ್?
* ಈ ರೋಗದಿಂದ ಬೇಗನೆ ಚೇತರಿಸಿಕೊಳ್ಳಲು ಜೀರಿಗೆ ನೀರು ಮತ್ತು ಬಾರ್ಲಿಗಂಜಿಯ ನೀರು ಕುಡಿಯಬೇಕು.
* ದೇಹದಲ್ಲಿ ನೀರಿನ ಅಂಶ ಸಾಕಷ್ಟು ಉಳಿಯಲು ನಿಂಬೆಹಣ್ಣು ಮತ್ತುಮೂಸಂಬಿ ರಸವನ್ನು ಸೇವಿಸಬೇಕು
* ನಿಧಾನವಾಗಿ,ಪೊಂಗಲ್, ಕಿಚಡಿ. ಅನ್ನದೊಂದಿಗೆ ಹೆಸರುಬೇಳೆ ಕಟ್ಟು ಹುರುಳಿ ಕಟ್ಟು, ಬೇಯಿಸಿದ ಜೋರೆಕಾಯಿ, ಪಡವಲಕಾಯಿ, ಸಾತೆಕಾಯಿ ಸೇವಿಸಬೇಕು.
* ಅಲ್ಲದೆ ಕೆಂಪು ಅಕ್ಕಿ, ಗೋಧಿ, ಹೆಸರುಕಾಳು, ಕಟ್ಟಿನಹಾಲು ಮತ್ತು ಮತ್ತು ದ್ರಾಕ್ಷಿರಸದ ಸೇವನೆ ಉತ್ತಮ ಪತ್ಯ.
*ಅತಿಯಾದ ಖಾರ, ಕರಿದ, ಮಸಾಲೆ ಪದಾರ್ಥ, ಮಾಂಸಹಾರ ಉದ್ದಿನಉಪಹಾರ, ಈಂಕಪುಡ್ .
* ಮಧ್ಯಪಾನ, ಧೂಮಪಾನ, ಮೊಸರು, ಚಹಾ, ಕಾಫಿಯ ಮತ್ತು ಸಾಸಿವೆ ಎಣ್ಣೆಯ ಸೇವನೆ ನಿಲ್ಲಿಸಬೇಕು.
* ಮನಸಿಕ ಒತ್ತಡದಿಂದ ದೂರವಿರಬೇಕು.
* ಅನವಶ್ಯಕವಾಗಿ ವ್ಯಾಯಾಮಗಳನ್ನು ಮಾಡಬಾರದು. ಮತ್ತು
*ಬಿಸಿಲಿನಲ್ಲಿ ಓಡಾಡುವುದನ್ನು ನಿಲ್ಲಿಸಬೇಕು.
ಜಾಂಡೀಸ್ ಕಂಡುಹಿಡಿಯುವುದು ಹೇಗೆ? ಅನ್ನೊ ದಾದರೆ?
*ಮೊದಲು ವೈದ್ಯರ ಭೇಟಿ ತುಂಬಾ ಅವಶ್ಯಕ. ಅವರು,
* ಮಗುವಿನ ದೇಹದ ಬಣ್ಣವನ್ನು ಹಾಗೂ ಕಣ್ಣಿನಲ್ಲಿ ಆಗಿರುವ ಬದಲಾವಣೆಯ ನ್ನೂ ವೀಕ್ಷಿಸಿ ಹಳದಿಬಣ್ಣ ಕಂಡುಬಂದರೆ,
* ತಾಯಿಯಲ್ಲಿ ಕೇಳಿದಾಗ ನಿಮ್ಮ ಮಗು ಮಲ-ಮೂತ್ರ ವಿಸರ್ಜನೆ ಯಾವ ಬಣ್ಣದಲ್ಲಿ ಮಾಡ್ತಿದೆ?
* ಮಗುವಿನ ಆ ಲಸ್ಯತನವನ್ನು ನೋಡುವುದರ ಮೂಲಕ,
* ಅನುಮಾನಸ್ವದವಾದರೆ ಪ್ರಯೋಗಾಲಯದಲ್ಲಿ ರಕ್ತ ಪರೀಕ್ಷಣೆ. (LFT) ಬಿಲಿರುಬಿನ್ ಲೆವಲ್ ಹೇಗಿದೆ ಅಂತ.
ಜಾಂಡೀಸ್ ಅನ್ನು ಕಡಿಮೆ ಮಾಡುವುದು ಹೇಗೆ ? ತಡೆಗಟ್ಟುವಿಕೆ.?
* ನಿರಂತರವಾಗಿ ಗಂಟೆಗನುಗುಣವಾಗಿ ಮಗುವನ್ನು ಎಬ್ಬಿಸಿ ಎದೆಹಾಲು ಉಣಿಸುವುದೂ ಮುಖ್ಯ
* ಸರಾಸರಿ 20 ಬಾರಿ ದಿನಕ್ಕೆ ಹಾಲು ಕೊಡುವುದು.
*ಫಾರ್ಮುಲಾ ೨ ಅರ್ಮ್ ಗಳ ಕೊಡುವುದು.
*ಶುರುವಿನ ದಿನಗಳಲ್ಲಿ ಗುಣಲಕ್ಷಣಗಳು ಕಾಣಿಸಿದ್ರೆ ವೈದ್ಯರ ಸಲಹೆಗೆ ಹೋಗುವುದು ತುಂಬಾ ಅವಶ್ಯಕ.
*ಬಿಲಿರುಬಿನ್ ಜಾಸ್ತಿ ಆಗಿದ್ರೆ ವೈದ್ಯರ ಆದೇಶದಲ್ಲಿ ಫೋಟೋ ಥೆರಪಿ” ಮಾಡಿಸುವುದು
* ಫೋಟೋಥೆರಪಿ: ಬಿಲಿರುಬಿನ್ ಅನ್ನು ಒಡೆಯಲು ಮಗುವಿನ ಚರ್ಮವನ್ನು ವಿಶೇಷ ದೀಪಗಳಿಗೆ ಒಡ್ಡುವುದು.
* ವಿನಿಮಯ ವರ್ಗಾವಣಿ : ತೀ ವ್ರವಾದ ಪ್ರಕರಣಗಳಲ್ಲಿ ಮಗುವಿನ ರಕ್ತದ ಒಂದು ಸಣ್ಣ ಪ್ರಮಾಣವನ್ನು ಹೊಂದಾಣಿಕೆಯ ದಾನಿ ರಕ್ತದಿಂದ ಬದಲಾಯಿಸಲಾಗುತ್ತದೆ.
ನವಜಾತ ಶಿಶುಗಳಲ್ಲಿ ಕಾಮಲೆ ಸಾಮಾನ್ಯವಾಗಿ ಪೋಷಕರು ಮತ್ತು ಆರೈಕೆ ಮಾಡುವವರನ್ನು ಚಿಂತೆ ಮಾಡುವ ಸಾಮಾನ್ಯ ಘಟನೆಯಾಗಿದೆ.
– ಈ ಲೇಖನವು ಸಮಗ್ರ ಅವಲೋಕನವನ್ನು ಒದಗಿಸುವ ಗುರಿಯನ್ನು ಹೊಂದಿದೆ. “ನವಜಾತ ಕಾಮಲೆ ” ಅದರ ಕಾರಣಗಳು, ಲಕ್ಷಣಗಳು, ಚಿಕಿತ್ಸೆಯ ಆಯ್ಕೆಗಳು ಮುತ್ತು ಯಾವಾಗ ವೈದ್ಯಕೀಯ ಗಮನವನ್ನು ಪಡೆಯಬೇಕು.
– ಈ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಪೋಷಕರು ಮತ್ತು ಆರೈಕೆದಾರರು ತಮ್ಮ ನವಜಾತ ಶಿಶುಗಳಲ್ಲಿ ಕಾಮಲೆಯನ್ನು ಮರೆಸುವಲ್ಲಿ ಮತ್ತು ಪರಿಹರಿಸುವಲ್ಲಿ ಹೆಚ್ಚು ವಿಶ್ವಾಸ ಹೊಂದಲು ಸಹಾಯ ಮಾಡುತ್ತದೆ.
ಪೂಜಾ ಮಹೇಶ
ಅಂತಿಮ ವರ್ಷದ ನರ್ಸಿಂಗ್ ವಿದ್ಯಾರ್ಥಿ
ಕಿಮ್ಸ್ ಕೊಪ್ಪಳ.