
ವಿದ್ಯಾರ್ಥಿಗಳು ಕ್ರಿಡಾಮನೋಭಾವನೆ ಬೆಳೆಸಿಕೊಳ್ಳಿ : ಜೋಗದ ನಾರಾಯಣಪ್ಪ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 12- ವಿದ್ಯಾರ್ಥಿಗಳು ಕ್ರಿಡಾಮನೋಭಾವನೆ ಬೆಳೆಸಿಕೊಳ್ಳಿ ಎಂದು ವಾಣಿಜೋದ್ಯಮಿ ಶ್ರೀದುರ್ಗಾದೇವಿ ದೇವಸ್ಥಾನದ ಟ್ರಸ್ಟ ಕಮಿಟಿ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ ಹೇಳಿದರು.
ನಗರದ ತಾಲೂಕ ಕ್ರಿಡಾಂಗಣದಲ್ಲಿ ತಾಲೂಕ ಮಟ್ಟದ ೨೦೨೪-೨೫ನೇ ಶಾಲಾ ಶಿಕ್ಷಣ (ಪದವಿಪೂರ್ವ) ಕಾಲೇಜುಗಳ ಕ್ರಿಡಾಕೂಟವು ಸೆಂಟ್ ಪಾಲ್ಸ ಮಹಿಳಾ ವಿದ್ಯಾ ಸಂಸ್ಥೇ ಹಾಗೂ ಕಾರುಣ್ಯ ಸ್ವತಂತ್ರö್ಯ ಪದವಿಪೂರ್ವ ಕಾಲೇಜು ಇವರ ಸಹಯೋಗದಲ್ಲಿ ನಡೆದ ಸಮಾರಂಭ ಉದ್ಘಾಟಸಿ ಮಾತನಾಡಿ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳ ಪಾಲಗೊಳ್ಳುವಿಕೆ ಅಗತ್ಯವಾಗಿದೆ.
ಗೆಲುವು ಸೋಲು ಮುಖ್ಯವಲ್ಲ.ವಿದ್ಯಾರ್ಥಿಗಳು ಸರಿಸಮಾನವಾಗಿ ಸ್ವಿಕರಿಸಬೇಕು. ನಾಡಗಿತೆ ಮೊಳಗುವಾಗ ಕೆಲವೊಂದು ಕಾಲೇಜುಗಳ ವಿದ್ಯಾರ್ಥಿಗಳು ಗೌರವಿಸದೇ ಆಟವಾಡಿದ್ದು ನೋಡಿದರೆ ಬೇಸರವೆನಿಸುನ್ನಿಸುತ್ತದೆ. ಮೋದಲು ನಾಡಗೀತೆ ಹಾಗೂ ರೈತಗೀತೆಗೆ ಗೌರವಿಸುವದನ್ನು ಕಲಿತುಕೊಳ್ಳಿ ಕಾಲೇಜು ವಿದ್ಯಾರ್ಥಿಗಳು ರಾಷ್ಠ,ರಾಜ್ಯದ ಬಗ್ಗೆ ಅಭಿಮಾನ ಮೂಡಿಸಿಕೊಳ್ಳಿ ಎಂದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಸೆಂಟ್ ಪಾಲ್ಸ ಮಹಿಳಾ ವಿದ್ಯಾ ಸಂಸ್ಥೇ ಕಾರ್ಯದರ್ಶಿ ಸರ್ವೇಶ ವಸ್ತçದ ಮಾತನಾಡಿ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಸಾಕಷ್ಠೂ ಕಾಲೇಜು ವಿದ್ಯಾರ್ಥಿಗಳು ಪಾಲಗೊಂಡಿದ್ದರಿ ಸ್ಪರ್ಧಾನಾತ್ಮಕ ಭಾವನೆಯಿಂದ ಸ್ವಿಕರಿಸಿ ಕ್ರೀಡೆ ಯಶ್ವಸಿಗೋಳಿಸಿ ಎಂದರು.
ಈ ಸಂದರ್ಭದಲ್ಲಿ ತಾಲೂಕ ನೋಡಲ್ ಅಧಿಕಾರಿ ಬಸಪ್ಪ ನಾಗೋಲಿ,ಲಿಟಲ್ ಹಾಟ್ಸ ಶಾಲೆಯ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲ,ಜಿಲ್ಲಾ ಪ್ರಾಚಾರ್ಯರ ಸಂಘದ ಉಪಾಧ್ಯಕ್ಷ ಸರೊಜಮ್ಮ ಕಾಲೇಜ ಪ್ರಾಚಾರ್ಯ ರವಿ ಚವ್ಹಾಣ,
ಕೊಟ್ಟೋರೇಶ್ವರ ಕಾಲೇಜ ಪ್ರಾಚಾರ್ಯ ವಿಜಿ.ಯಾವಗಲ್, ವಾಣಿಜೋದ್ಯಮಿ ಗೋಪಾಲಕೃಷ್ಣ ಶೆಟ್ಟಿ ರಾಯಚೂರ, ರುದ್ರಮುನಿ ವಕೀಲ, ಪ್ರೌಢಶಾಲೆ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಯಂಕಪ್ಪ ತಳವಾರ, ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಿವಕಾಂತ ತಳವಾರ, ತಾಲೂಕ ದೈಹಿಕ ಶಿಕ್ಷಣ ಪರಿವಿಕ್ಷಕ ರಾಚಯ್ಯ ಹಿರೇಮಠ, ಜಿಲ್ಲಾ ಉಪನ್ಯಾಸಕ ಸಂಘದ ಸೋಮಶೇಖರಗೌಡ, ಕಾರುಣ್ಯ ಕಾಲೇಜ ಪ್ರಾಚಾರ್ಯ ಶಿವಲಿಂಗಪ್ಪ ಹಲಕುರ್ಕಿ ನವಿನ ಮಿರಜಕರ ಕೃತಿಕವಸ್ತçದ ಮುಂತಾದವರು ಉಪಸ್ಥಿತರಿದ್ದರು.