
ನಾಗಪುರ ದೀಕ್ಷಾ ಭೂಮಿಗೆ ತೆರಳಲು ಜಂಟಿ ನಿರ್ದೇಶಕ ಮಂಜುನಾಥ ಚಾಲನೆ
ಕರುನಾಡ ಬೆಳಗು ಸುದ್ದಿ
ವಿಜಯನಗರ, 10- 68ನೇ ದಮ್ಮ ಚಕ್ರ ಪರಿವರ್ತನಾ ದಿನದ ಅಂಗವಾಗಿ ಮಹಾರಾಷ್ಟ್ರದ ನಾಗಪುರದಲ್ಲಿರುವ ದೀಕ್ಷಾ ಭೂಮಿಗೆ ಹೋಗಲು ನಗರದ ಡಾ.ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಹೆಚ್.ವಿ.ಮಂಜುನಾಥ ನೀಲಿ ನಿಶಾನೆ ತೋರಿಸುವ ಮೂಲಕ ಯಾತ್ರಿಕರಿಗೆ ಶುಭಕೋರಿ ಚಾಲನೆ ನೀಡಿದರು.
ವಿಜಯನಗರ ಜಿಲ್ಲೆಯಿಂದ ಪ್ರತಿವರ್ಷ ದೀಕ್ಷ ಭೂಮಿಗೆ ಹೋಗಲು ಸಮಾಜ ಕಲ್ಯಾಣ ಇಲಾಖೆ ಎಸ್‌ಸಿ, ಟಿಎಸ್‌ಪಿ ಅನುದಾನದಲ್ಲಿ ದೀಕ್ಷಾಭೂಮಿ ದರ್ಶನಕ್ಕೆ ಹೋಗುವ ಯಥಾರ್ತಿಗಳಿಗೆ ನೆರವು ನೀಡುತ್ತದೆ. ಈ ನಿಟ್ಟಿನಲ್ಲಿ ಈ ಯೋಜನೆ ೧೮, ೧೯ನೇ ಸಾಲಿನಲ್ಲಿ ಅನುಷ್ಠಾನಕ್ಕೆ ಬಂದಿದ್ದು ಪ್ರತಿ ವರ್ಷ ಆಯಾ ಸರ್ಕಾರಗಳು ದೀಕ್ಷಾಭೂಮಿಗೆ ನಾಲ್ಕು ದಿವಸ ಪ್ರವಾಸ ಇರುತ್ತದೆ, ೧೨, ೧೩, ೧೪, ೧೫, ಇರುವ ಈ ನಾಲ್ಕು ದಿನದ ಪ್ರವಾಸದಲ್ಲಿ ೧೨ಕ್ಕೆ ರಾಜ್ಯದ ಆಯಾ ಜಿಲ್ಲೆಗಳಿಂದ ಬಸ್ ಹೊರಡುತ್ತದೆ ೧೩ ಸಂಜೆಗೆ ದೀಕ್ಷ ಭೂಮಿ ನಾಗಪುರಕ್ಕೆ ಮುಟ್ಟುತ್ತದೆ. ದೀಕ್ಷಾಭೂಮಿಯಲ್ಲಿ ಇದುವರೆಗೂ ಲಕ್ಷಾಂತರ ಜನರು ದೀಕ್ಷೆ ತೆಗೆದುಕೊಂಡಿರುವುದಾಗಿ ಹೇಳಲಾಗುತ್ತದೆ. ಇಂದಿಗೂ ಇಲ್ಲಿ ಆಗಾಗ ಸಾವಿರಾರು ಜನರು ಬೌದ್ಧ ದೀಕ್ಷೆ ತೆಗೆದುಕೊಳ್ಳುತ್ತಲೇ ಇರುತ್ತಾರೆ.
೧೩ರ ಸಂಜೆ ಕಾರ್ಯಕ್ರಮ ಹಾಗೂ ೧೪ರ ನಮ್ಮ ದೀಕ್ಷ ಕಾರ್ಯಕ್ರಮ ಹಾಗೂ ಹಲವಾರು ದಮ್ಮ ಸಂಸ್ಕೃತಿ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ೧೪ಕ್ಕೆ ಆಯಾ ಯತಾರ್ಥಿಗಳ ಜಿಲ್ಲೆಗಳಿಗೆ ವಾಪಸ್ಸು ಬಸ್ ತಲುಪುತ್ತದೆ. ಹಾಗಾಗಿ ಯಾತ್ರಿಕರು ಸುರಕ್ಷಿತವಾಗಿ ಹೋಗಿ ಬರಬೇಕು ಎಂದು ಸಲಹೆ ನೀಡಿದರು.
೬ ತಾಲೂಕು ಹೊಂದಿರುವ ವಿಜಯನಗರ ಜಿಲ್ಲೆಯಿಂದ ಒಟ್ಟು ೪೪೪ ಅರ್ಜಿಗಳು ಬಂದಿದ್ದು ಇದರಲ್ಲಿ ೧೧೪ ಅರ್ಜಿಗಳ ಯಥಾರ್ಥಿಗಳನ್ನು ನಿಯಮಾನುಸಾರ ಆಯ್ಕೆ ಮಾಡಲಾಗಿದೆ ಎಂದರು.
ಮಹಾರಾಷ್ಟ್ರದ ನಾಗಪುರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ೧೪-೧೦-೧೯೫೬ ವಿಜಯದಶಮಿ ದಿನ ೫ ಲಕ್ಷ ಅನುಯಾಯಿಗಳೊಂದಿಗೆ ಬೌದ್ಧ ಧರ್ಮವನ್ನು ಸ್ವೀಕಾರ ಮಾಡಿದರು. ಇದನ್ನು ಅತ್ಯಂತ ಸಂಭ್ರಮ ಮತ್ತು ಶ್ರದ್ಧೆಯಿಂದ ಆಚರಿಸುವ ಜನರು ಈ ೪ ದಿವಸ ಅವಧಿಯಲ್ಲಿ ಕನಿಷ್ಠ ೫೦ ಲಕ್ಷ ಜನ ದೇಶದ ಮೂಲೆ ಮೂಲೆಗಳಿಂದ ವಿಜಯ ದಶಮಿಯ ಈ ಸಂದರ್ಭದಲ್ಲಿ ದೀಕ್ಷ ಭೂಮಿಗೆ ಹೋಗುತ್ತಾರೆ ಎಂದು ಹೆಚ್.ವಿ.ಮಂಜುನಾಥ್ ಇತಿಹಾಸವನ್ನು ದೀಕ್ಷಾಭೂಮಿಗೆ ಹೋಗುವ ಯಾತ್ರಿಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಶೈಖ್ ಅಹ್ಮದಿ, ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಎ.ಚಿದಾನಂದ ಮತ್ತು ಎನ್.ಶರಣಪ್ಪ, ಮುಖಂಡ ಯಲ್ಲಪ್ಪ, ಯಾತ್ರಾ ಉಸ್ತುವಾರಿ ಸಂತೋಷ, ರೂಟ್ ಇನ್ಚಾರ್ಜ್ ಮಲ್ಲಿಕಾರ್ಜುನ, ಹಾಸ್ಟೆಲ್ ಸೂಪರ್‌ಡೆಂಟ್ ಮಲ್ಲಿಕಾರ್ಜುನ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇತರರು ಇದ್ದರು.