
ಸಮಾಜದ ಸರ್ವತೋಮುಖ ಅಭಿವೃದ್ದಿಯಲ್ಲಿ ಪತ್ರಕರ್ತರ ಪಾತ್ರ ಪ್ರಮುಖ -ಪಿ.ನಾರಾಯಣ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 26- ನಾವು ಕಲಿತಿರುವ ಶಿಕ್ಷಣದಿಂದ ಸಮಾಜ ಕಟ್ಟುವ ಕೆಲಸ ಮಾಡಬೇಕು ಜ್ಞಾನದ ಸದುಪಯೋಗ ಬಹಳ ಮುಖ್ಯ. ಪತ್ರಕರ್ತರಾದವರು ಸಮಾಜದ ಅಂಕೊಡೊಂಕು ತಿದ್ದುವ ಕೆಲಸ ಮಾಡಬೇಕು. ಜಾಗೃತಿಯಿಂದ ಮಾದ್ಯಮಗಳು ಕೆಲಸ ಮಾಡಬೇಕು ಸಣ್ಣ ಪುಟ್ಟ ತಪ್ಪುಗಳಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಜ್ ನ ಕಾರ್ಯನಿರ್ವಾಹಕ ಉಪಾಧ್ಯಕ್ಷ, ಮಾನವ ಸಂಪನ್ಮೂಲ & ಸಾಮಾನ್ಯ ಆಡಳಿತ ವಿಭಾಗದ ಮುಖ್ಯಸ್ಥ ಪಿ.ನಾರಾಯಣ ಹೇಳಿದರು.
ಅವರು ನಗರದ ಬಾಲಾಜಿ ಫಂಕ್ಷನ್ ಹಾಲ್ ನಲ್ಲಿ ಬಹುತ್ವ ಮೀಡಿಯಾ ಹೌಸ್ ಹಾಗೂ ಬಹುತ್ವ ಬಳಗದವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೊಪಣ ಮೀಡಿಯಾ ಫೆಸ್ಟ್‌ನ ೨ನೇ ದಿನದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರತಿಯೊಬ್ಬರು ಉತ್ತಮ ಶಿಕ್ಷಣ ಪಡೆಯುವಂತಾಗಬೇಕು ಒಳ್ಳೆಯ ಉದ್ದೇಶ, ಒಳ್ಳೆಯ ನಡತೆ, ಒಳ್ಳೆಯ ಕಾರ್ಯಕ್ರಮ ಆದ್ಯ ಕರ್ತವ್ಯವಾಗಿದೆ. ಇದು ಇದ್ದಾಗ ಸಮಾಜದಲ್ಲಿ ಒಳ್ಳೆಯ ಸೇವೆ ಸಲ್ಲಿಸಲು ಸಾಧ್ಯ, ಸಮಾಜ ನಿಮ್ಮನ್ನು ಗುರುತಿಸುತ್ತದೆ.
ಸಾಮಾಜಿಕ ಕಳಕಳಿಗೆ ಕಿರ್ಲೋಸ್ಕರ್ ಕಂಪನಿ ಸದಾ ಮುಂದಿರುತ್ತದೆ. ೨೦೦೩ರಲ್ಲಿಯೇ ನಾವು ಸೇವಾ ಟ್ರಸ್ಟ್ ನ್ನು ಸ್ಥಾಪಿಸಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಕಾನೂನು ಬಂದಿದ್ದು 2013ರಲ್ಲಿ. ವಿದ್ಯಾರ್ಥಿಗಳಿಗೆ ಫಾರ್ಮಿಂಗ್, ನಾರ್ಮಿಂಗ್ ಮತ್ತು ಸ್ಟಾರ್ಮಿಂಗ್ ಮತ್ತು ಫರಫಾರ‍್ಮಿಂಗ್ ಬಹಳ ಮುಖ್ಯ ಎಂದು ಕಿವಿ ಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ವಾಣಿಜ್ಯೋದ್ಯಮಿ ಶ್ರೀನಿವಾಸ ಗುಪ್ತಾ ಮಾತನಾಡಿ ಕೈಗಾರಿಕೆ ಮತ್ತು ಪತ್ರಿಕೆ ಇವು ಎರಡನ್ನು ನಡೆಸುವುದು ತುಂಬಾ ಕಷ್ಟ.ಪತ್ರಿಕೆ ಜನರ ಹಿತಕಾಯುವ ಕೆಲಸ ಮಾಡುತ್ತಿದೆ. ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮಾಧ್ಯಮ ಕ್ಷೇತ್ರ ಬಹಳ ಎತ್ತರದಲ್ಲಿ ಬೆಳದಿದೆ.ಪತ್ರಿಕೆಗಳು ಅತ್ಯಂತ ಜಾಗೃತಿಯಿಂದ ವರದಿಗಳು ಬಿತ್ತರಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು. ಕೊಪಣ ಮೀಡಿಯಾ ಫೆಸ್ಟನ್ನು ಅದ್ಬುತವಾಗಿ ಆಯೋಜನೆ ಮಾಡಿದ್ದಾರೆ ಎಂದು ಹೇಳಿದರು. ಮಾದ್ಯಮ ಅಕಾಡೆಮಿ ಸದಸ್ಯ ಕೆ.ನಿಂಗಜ್ಜ ಮಾತನಾಡಿದರು. ವೇದಿಕೆಯ ಮೇಲೆ ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಹಿರಿಯ ಪತ್ರಕರ್ತ ಜಿ.ಎನ್.ಮೋಹನ್, ಕರ್ನಾಟಕ ಮಾದ್ಯಮ ಅಕಾಡೆಮಿ ಅಧ್ಯಕ್ಷರಾದ ಶ್ರೀಮತಿ ಆಯಿಷಾ ಖಾನುಂ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಫಸ್ಟ ನ್ಯೂಸ್ ವರದಿಗಾರ, ಬಹುತ್ವ ಬಳಗದ ರಾಜು ಬಿ.ಆರ್ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಪತ್ರಕರ್ತ ಸಿರಾಜ್ ಬಿಸರಳ್ಳಿ ಮಾತನಾಡಿ ಕೊಪಣ ಮೀಡಿಯಾ ಫೆಸ್ಟ್ ಆಯೋಜನೆಯಲ್ಲಿ ಸಹಕಾರ ನೀಡಿದ ವಿಜಯನಗರ, ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಬಿ.ಝಡ್ ಜಮೀರ್ ಅಹ್ಮದ್ ಖಾನ್ ಹಾಗೂ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಜ್ ಹಾಗೂ ಇತರರ ಸಹಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.
ಇದೇ ಸಂದರ್ಭದಲ್ಲಿ ಕುಲಪತಿಗಳಾದ ಡಾ.ಬಿ.ಕೆ.ರವಿ, ಆಯಿಷಾ ಖಾನುಂ, ಜಿ.ಎನ್.ಮೋಹನ್ , ಜಿಲ್ಲೆಯ ಹಿರಿಯ ಪತ್ರಕರ್ತರಾದ ಸೋಮರಡ್ಡಿ ಅಳವಂಡಿ, ಎಂಜೆ.ಶ್ರೀನಿವಾಸ್, ಉಮೇಶ್ ಮರ್ಲಾನಹಳ್ಳಿ, ಮಾದ್ಯಮ ಅಕಾಡೆಮಿಯ ಸದಸ್ಯರಾದ ಕೆ.ನಿಂಗಜ್ಜ, ಕ್ಯಾಮರಾಮನ್ ಸಮೀರ್ ಪಾಟೀಲ್, ಉದ್ಯಮಿ ಶ್ರೀನಿವಾಸ್ ಗುಪ್ತಾ, ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಜ್ ನ ಕಾರ್ಯನಿರ್ವಾಹಕ ಉಪಾಧ್ಯಕ್ಷ, ಮಾನವ ಸಂಪನ್ಮೂಲ & ಸಾಮಾನ್ಯ ಆಡಳಿತ ವಿಭಾಗದ ಮುಖ್ಯಸ್ಥ ಪಿ.ನಾರಾಯಣ, ಸಿಂಡಿಕೇಟ್ ಸದಸ್ಯರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಗಣ್ಯರು ಬಹುಮಾನ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಉದ್ಬವ್ ಕುಲಕರ್ಣಿ, ತೀರ್ಪುಗಾರರಾದ ಎನ್.ಎಂ.ದೊಡ್ಡಮನಿ, ಸಾಧಿಕ್ ಅಲಿ, ಶರಣಪ್ಪ ಬಾಚಲಾಪೂರ, ಅಲ್ಲಮಪ್ರಭು ಬೆಟ್ಟದೂರು, ಸಾವಿತ್ರಿ ಮುಜುಂದಾರ, ಬಸವರಾಜ್ ಪಲ್ಲೇದ, ಜಿ.ಎಸ್.ಗೋನಾಳ, ಡಿ.ವಿ.ಬಡಿಗೇರ, ಶಾಬುದ್ದೀನಸಾಬ ಸೇರಿದಂತೆ ಸಂಘಟಕರಾದ ಖಲೀಲ್ ಹುಡೇವು, ರಾಜಾಬಕ್ಷಿ ಎಚ್.ವಿ, ಡಾ.ಪಾಷಾ, ಮಾರುತಿ, ಆನಂದ, ದಾವಲಸಾಬ, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಉಪಸ್ಥಿತರಿದ್ದರು.