
ಪೀಡಿಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಕೆ.ಲಕ್ಷ್ಮೀದೇವಿ ಶಿವರಾಜ್ ಆಯ್ಕೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 2- ತಾಲೂಕ ವ್ಯಾಪ್ತಿಯಲ್ಲಿ ಬರುವ ಪರಮದೇವನಹಳ್ಳಿ (ಪಿಡಿಹಳ್ಳಿ) ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ, ಕೆ.ಲಕ್ಷ್ಮೀದೇವಿ ಶಿವರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪರಮದೇವನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮಕ್ಕೆ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಡಿಗಿನ ಬಸಪ್ಪ, ಮತ್ತು ಬಳ್ಳಾರಿ ತಾಲೂಕು ಪಂಚಾಯಿತಿ ವ್ಯವಸ್ಥಾಪಕರು ಬಚ್ಚಲಪ್ಪ, ಪಿಡಿಒ ಗೋವಿಂದಪ್ಪ, ನೇತೃತ್ವದಲ್ಲಿ ನಡೆದ ಸರ್ವ ಸದಸ್ಯರ ಸಮಾವೇಶದಲ್ಲಿ ಎಲ್ಲ ಸದಸ್ಯರು ಏಕಪಕ್ಷದಿಂದ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಕೆ.ಲಕ್ಷ್ಮೀದೇವಿ ಶಿವರಾಜ್ ಅವರನ್ನು ಪ್ರತಿಪಾದಿಸಿದ ಕಾರಣ ಚುನಾವಣೆ ಏಕಕ್ರಿಯವಾಗಿ ಆಯ್ಕೆಯಾಯಿತು.
ಈ ಸಂದರ್ಭವಾಗಿ ಅವರನ್ನು ಹೂಮಲೆಯನ್ನು ಹಾಕಿ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ತಿಪ್ಪೇರುದ್ರ ಪರಮದೇವನಹಳ್ಳಿ, ಪಿಡಿಹಳ್ಳಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಾಗಭೂಷಣ್, ಗ್ರಾಮ ಪಂಚಾಯತಿ ಸದಸ್ಯರು, ಬ್ರಹ್ಮ, ಲಿಂಗಣ್ಣ, ಹಗರಿ ಓಬಳೇಶ್ ಮತ್ತು ಇತರ ಸದಸ್ಯರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.