
ಮಕ್ಕಳ ದಿನಾಚರಣೆ ಅಂಗವಾಗಿ ಕಬಡ್ಡಿ ಮತ್ತು ಖೋ-ಖೋ ಪಂದ್ಯಾವಳಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 13- ತಾಲೂಕು ಮುದ್ದಟನೂರು ಗ್ರಾಮದ ನವ ಗ್ರಾಮದ ಡ್ಯಾನಿಯಲ್ ಉಚಿತ ಟ್ಯೂಷನ್ ಸೆಂಟರ್ ಇವರಿಂದ ಮಕ್ಕಳ ದಿನಾಚರಣೆ ಅಂಗವಾಗಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಕಬಡ್ಡಿ ಮತ್ತು ಖೋಖೋ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.
ಪಂದ್ಯಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳ ತಂಡಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಟ್ರೋಫಿಯನ್ನು ನೀಡಲಾಯಿತು.
ಗ್ರಾಮ ಪಂಚಾಯತ್ ಸದಸ್ಯ ಪ್ರಭು ಮತ್ತು ಅಂಬೇಡ್ಕರ್ ಸಂಘದ ಅಧ್ಯಕ್ಷ ಟಿ.ಮುನೀಶ್ವರ ಪಂದ್ಯಾವಳಿಗೆ ಚಾಲನೆ ನೀಡಿದರು.
ಸಿರಿಗೇರಿ ಹಾಸ್ಟೆಲ್ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಡ್ಯಾನಿಯಲ್ ಟ್ಯೂಷನ್ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಮುದ್ದಟನೂರು ಗ್ರಾಮದ ಹಿರಿಯ ತಂಡ ಖೋ-ಖೋ ಆಟದಲ್ಲಿ ಪ್ರಥಮ ಸ್ಥಾನ ಕಿರಿಯರ ತಂಡ ದ್ವಿತೀಯ ಸ್ಥಾನ ಪಡೆಯಿತು.
ಮುಖಂಡರಾದ ರಾಮ್ ಬಾಬು, ಟಿ.ನಾಗರಾಜ್ ಐಹೊಳೆ, ಮಂಜಪ್ಪ, ನನ್ನೇಶ್, ಮಾರೇಶ್, ವೀರೇಶ್ ಬಿಳೆಕಲ್ಲ, ದುರ್ಗಣ್ಣ, ಗಿರೀಶ್, ವಿನಯ್, ರಮೇಶ್, ಮಂಜುನಾಥ, ಹನುಮೇಶ್ ಶಾಲಾ ವಿದ್ಯಾರ್ಥಿಗಳು ಇದ್ದರು.