5

ಹಾಲುಮತ ಸಮಾಜ ರಾಜಕೀಯವಾಗಿ ಬೆಳೆಯಲಿ : ಕಳಕಪ್ಪ ಕಂಬಳಿ

ಕರುನಾಡ ಬೆಳಗು ಸುದ್ದಿ

ಕುಕನೂರ, 20- ಹಾಲುಮತ ಸಮಾಜ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ತಾಲೂಕ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.

ಶ್ರೇಷ್ಠ ವ್ಯಕ್ತಿಗಳ ಜಯಂತಿಗಳು ಕೇವಲ ಚುನಾವಣೆಗಳು ಇದ್ದಾಗ ಮಾತ್ರ ರಾಜಕೀಯ ವ್ಯಕ್ತಿಗಳಿಗೆ ನೆನಪಾಗುವುದು ಇದು ಇದು ಶ್ರೇಷ್ಠ ವ್ಯಕ್ತಿಗಳ ಜಯಂತಿಗಳಿಗೆ ಮಾಡುವ ಅಪಮಾನ ಎಂದು ಅಭಿಪ್ರಾಯಪಟ್ಟರು ಇಂತಹ ದಾಸ ಶ್ರೇಷ್ಠ ಕನಕದಾಸರ ಜಯಂತಿಯಲ್ಲಿ ರಾಜಕೀಯ ವ್ಯಕ್ತಿಗಳು ಗೈರು ಎದ್ದು ಕಾಣುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಆಯೋಜಿಸಿದ್ದ ಕನಕದಾಸ ಜಯಂತ್ಯೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಂಗೀತ ಲೋಕಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.

೧೫-೧೬ನೇ ಶತಮಾನದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದ್ದರು, ಕರ್ನಾಟಕದ ದಾಸ ಪರಂಪರೆಯಲ್ಲಿ ಅತ್ಯಂತ ಶ್ರೇಷ್ಠ ದಾಸರಾಗಿ ಕನಕದಾಸರು ಕಂಡು ಬರುತ್ತಾರೆ ಅಂತಹ ಹಾಲುಮತ ಸಮಾಜ ರಾಜಕೀಯವಾಗಿ ರಾಜಕಾರಣಿಗಳಿಗೆ ದುರ್ಬಳಕೆ ಆಗದೆ ಸಮಾಜದಲ್ಲಿ ಆರ್ಥಿಕವಾಗಿ ಮುಂದೆ ಬರುವಂತಹ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ದಾಸ ಶ್ರೇಷ್ಠ ಕನಕದಾಸರ ಜಯಂತಿ ತಾಲೂಕ ಕೇಂದ್ರಗಳಲ್ಲಿ ನಡೆದರೂ ಕೂಡ ವೇದಿಕೆಗಳಲ್ಲಿ ಖಾಲಿ ಖಾಲಿ ಆಸನಗಳು ಇವೆ, ಇದು ರಾಜಕೀಯ ವ್ಯಕ್ತಿಗಳ ಗೈರು ಕಾಣುತ್ತಿತ್ತು, ಏಕೆಂದರೆ ಇವಾಗ ಯಾವ ಚುನಾವಣೆಗಳು ಇಲ್ಲ ಆದ್ದರಿಂದ ಅವರು ಇಂತಹ ಜಯಂತಿಗಳಿಗೆ ಬರುವುದಿಲ್ಲ. ಚುನಾವಣೆ ಎದ್ದಾಗ ಮಾತ್ರ ಎಲ್ಲಾ ಜಾತಿಯ ಜಯಂತಿ ಗಳಿಗೆ ಹಾಜರಾಗಿ ತಮ್ಮ ಸ್ವಾರ್ಥ ಸಾಧನೆಗಾಗಿ ಶ್ರೇಷ್ಠ ವ್ಯಕ್ತಿಗಳ ಜಯಂತಿಗಳನ್ನು, ಜಾತಿಗಳನ್ನು ತಮಗೆ ಬೇಕಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಾರೆ.

ಈ ಸಂದರ್ಭದಲ್ಲಿ ಹಾಲುಮತ ಸಮಾಜದ ತಾಲೂಕ ಅಧ್ಯಕ್ಷ ಮಂಜುನಾಥ ಕಡೆಮನಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲಲಿತಮ್ಮ ಯಡಿಯಾಪುರ, ಉಪಾಧ್ಯಕ್ಷ ಪ್ರಶಾಂತ ಆರುಬೆರಳಿನ್, ತಹಶೀಲ್ದಾರ್ ಪ್ರಾಣೇಶ್, ಸಿದ್ದಯ್ಯ ಕಳ್ಳಿಮಠ, ಕಾಸಿಂಸಾಬ್ ತಳಕಲ್, ಪಟ್ಟಣ ಪಂಚಾಯತಿ ಸದಸ್ಯ ಗಗನ್ ನೋಟ್ಗಾರ್, ರಾಮಣ್ಣ ಬಂಕದಮನಿ, ಸಿರಾಜ್ ಕರಮುಡಿ, ಮುಖಂಡ ಶೇಖಪ್ಪ ಕಂಬಳಿ ಮಹೇಶ್ ಗಾವರಾಳ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!