
ಬೈರಗಾಮದಿನ್ನಿ ಗಾಂಜಾ ಗಿಡ ಬೆಳೆಸಿದ್ದ ಕಾಳಪ್ಪ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ 1.50 ಲಕ್ಷ ರೂ ದಂಡ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 23- ತಾಲೂಕು ಬೈರಗಾಮದಿನ್ನಿ ಗ್ರಾಮದ ನಿವಾಸಿ ಕಾಳಪ್ಪ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆಯೊಂದಿಗೆ 1.50 ಲಕ್ಷ ರೂ ದಂಡ ವಿಧಿಸಿ ಬಳ್ಳಾರಿ ಜಿಲ್ಲಾ ನ್ಯಾಯಾಧೀಶ ಕೆ ಜಿ ಶಾಂತಿ ಮಂಗಳವಾರ ತೀರ್ಪು ನೀಡಿದ್ದಾರೆ.
ಹಾಳ್ ಮುರಣಿ ಗ್ರಾಮದ ಸರ್ವೆ ನಂಬರ್ 37 ಬಿ/2 1.64 ಎಕರೆ ಜಮೀನಿನಲ್ಲಿ ಸರ್ಕಾರದಿಂದ ಯಾವುದೇ ಅನುಮತಿ ಪಡೆಯದೆ 54 ಗಾಂಜಾ ಗಿಡಗಳನ್ನು ಬೆಳೆಸಿದ್ದಾನೆ 31.700 ಕಿಲೋ ಗ್ರಾಮ್ ಈ ಕುರಿತು ಮಾಹಿತಿ ತಿಳಿದ ಅಬಕಾರಿ ಉಪ ನಿರೀಕ್ಷಕ ಶಂಕರ್ ಗುಡದರ್ ಗಾಂಜಾ ಗಿಡಗಳನ್ನು ಜಪ್ತು ಪಡಿಸಿಕೊಂಡು ಆರೋಪಿ ಕಾಳಪ್ಪನ ವಿರುದ್ಧ ನಿಯಮ ಉಲ್ಲಂಘನೆ ಸೇರಿ ವಿವಿಧ ಕಲಂಗಳ ಅಡಿ ಪ್ರಕರಣ ದಾಖಲಿಸಿದ್ದರು ಬಳಿಕ ಅಬಕಾರಿ ಉಪನಿರೀಕ್ಷಕ ಆರ್ ಗಂಗಾಧರ ಮೌನೇಶ್ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶರು 6 ಜನ ಸಾಕ್ಷಿದಾರರನ್ನು ವಿಚಾರಿಸಿ 24 ದಾಖಲೆಗಳನ್ನು ಗುರುತಿಸಿ ವಾದ ವಿವಾದ ಆಲಿಸಿ ಆರೋಪಿಯನ್ನು ತಪ್ಪಿತಸ್ಥ ಎಂದು ಪರಿಗಣಿಸಿದ್ದಾರೆ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಂ ಬಿ ಸುಂಕಣ್ಣ ವಾದ ಮಂಡಿಸಿದ್ದರು.