
ಸಂಗೀತ ಗುರು ಮನೆಗೆ ತಂದ ಕೀರ್ತಿ ತ್ರಿಮೂರ್ತಿಗಳದ್ದು : ಕಲ್ಲಯ್ಯ ಅಜ್ಜ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 19- ಸಂಗೀತ ಕಲೆಯನ್ನು ಗುರುಮನೆಗೆ ತಂದ ಕೀರ್ತಿ ಹಾಡುಗಳು ಶ್ರೀ ಕುಮಾರಸ್ವಾಮಿಗಳಿಗೆ ಹಾಗೂ ಗಾನಯೋಗಿ ಶಿವಯೋಗಿ ಪಂಚಾಕ್ಷರಿ ಗವಾಯಿಗಳಿಗೆ, ಪರಮಶಿಷ್ಯ ತ್ರಿಭಾಷಾ ಕವಿ ಡಾ.ಪುಟ್ಟರಾಜ ಕವಿ ಗವಾಯಿಗಳವರಿಗೆ ಸಲ್ಲುತ್ತದೆ ಎಂದು ಗದಗ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಕಾರಿ ಶ್ರೀ ಕಲ್ಲಯ್ಯ ಅಜ್ಜ ಹೇಳಿದರು.
ವಿಪ್ರ ನಗರದಲ್ಲಿರುವ ಗಾನಯೋಗಿ ಶ್ರೀ ಪುಟ್ಟರಾಜ ಗವಾಯಿಗಳವರ ಪುಣ್ಯಶ್ರಮ ಹಾಗೂ ಭಾರತೀಯ ಸಂಗೀತ ಕಲಾ ವೇದಿಕೆ ಹಿರೇಜಂತಕಲ್ ವಿರುಪಾಪುರ ಶ್ರೀ ಕನ್ನಿಕಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪುಟ್ಟರಾಜ ಗವಾಯಿಗಳವರ ೧೫ನೇ ಪುಣ್ಯ ಸ್ಮರಣೆ ಹಾಗೂ ಗಂಗಾವತಿಯ ಹಿರಿಯ ತಬಲವಾದಕ ವೀರೇಶ್ ಕಲ್ಮಠ ಅವರ ಪ್ರಥಮ ಪುಣ್ಯ ಸ್ಮರಣೆಯ ಪ್ರಯುಕ್ತ ಆಯೋಜಿಸಿದ್ದ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನದಲ್ಲಿ ಮಾತನಾಡಿ, ಗುರು ಪುಟ್ಟರಾಜರು ನುಡಿದಂತೆ ಗದಗ ಬಳಿಕ ಗಂಗಾವತಿ ಎರಡನೆಯ ಕೈಲಾಸ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಅಂತಹ ಶಿಷ್ಯ ಪರಂಪರೆ ಭಕ್ತರು ಈ ಪುಣ್ಯ ಭೂಮಿಯಲ್ಲಿ ವಾಸಿಸಿದ್ದಾರೆ. ಹೀಗಾಗಿ ವಿಪ್ರ ನಗರದಲ್ಲಿರುವ ಎರಡು ಎಕರೆ ೪೦ ಗುಂಟೆ ಜಾಗವನ್ನು ಆಶ್ರಮಕ್ಕಾಗಿ ದಾನ ನೀಡಿದ ಪಾಮಪ್ಪ ಕುಟುಂಬದ ಕಾರ್ಯ ಮೆಚ್ಚುವಂತದ್ದು ಈ ಆಶ್ರಮ ಸಮಾಜದಲ್ಲಿನ ಬಡಬಗ್ಗರಿಗೆ ದೀನ ದಲಿತರಿಗೆ ವಿಕಾಲಂಗರಿಗೆ ಉಚಿತವಾಗಿ ಸಂಗೀತ ಶಿಕ್ಷಣವನ್ನು ಕಲ್ಪಿಸುವ ಕಾರ್ಯ ಹಾಗೂ ಆಶ್ರಮಕ್ಕೆ ಅಗತ್ಯ ಇರುವ ಸೌಲಭ್ಯಕ್ಕೆ ದಾನಿಗಳು ಮುಂದಾಗಬೇಕು ಎಂದರು.
ಪುಟ್ಟರಾಜರ ಶಿಷ್ಯ ಕಾಶಿಮ್ ಅಲಿ ಮುದ್ದಬಳ್ಳಿ ಮಾತನಾಡಿ, ತಕ್ಷಣವೇ ೧ ಲಕ್ಷ ಒಂದು ರೂಪಾಯಿ ಆಶ್ರಮಕ್ಕೆ ಕಲ್ಪಿಸುವುದಾಗಿ ಭರವಸೆ ನೀಡಿದರು.
ವೀರೇಶ್ ಧರ್ಮಪತ್ನಿಗೆ ಹಾಗೂ ಸಾಧಕರಿಗೆ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷ ದರೋಜಿ ನಾಗರಾಜ ಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಸಂಗೀತ ಕಲಾವಿದ ಹೆಚ್.ಮಹಾಬಲೇಶ್ವರ, ವಕೀಲ ವೆಂಕಟೇಶ್ ದಾಸನಾಳ, ಶ್ರೀಮತಿ ಹೂಗಾರ್ ಶಾಂತಮ್ಮ, ನರಸಿಂಹ ದರೋಜಿ, ಮಹಾಲಕ್ಷಿö್ಮ ಕೆಸರಹಟ್ಟಿ ಉಪಸ್ಥಿತರಿದ್ದರು.
ವಿವಿಧ ಕಲಾವಿದರಿಂದ ಸ್ವರಶ್ರದ್ಧಾಂಜಲಿ ಸಂಗೀತ ಕಾರ್ಯಕ್ರಮ ನಡೆಯಿತು.