
ಕನ್ನಡದ ಜ್ಯೋತಿ ರಥ ಯಾತ್ರೆಗೆ ಕುಕನೂರ ಪಟ್ಟಣದಲ್ಲಿ ಅದ್ಧೂರಿ ಸ್ವಾಗತ
ಕರುನಾಡ ಬೆಳಗು ಸುದ್ದಿ
ಕುಕನೂರು, 18- 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆಯು ರಾಜ್ಯಾಂಧ್ಯಾ0ತ ಸಂಚರಿಸುತ್ತಿದ್ದು, ಕನ್ನಡ ಜ್ಯೋತಿ ರಥ ಯಾತ್ರೆಯು ಕುಕನೂರ ತಾಲೂಕಿನ ರಾಜೂರು ಗ್ರಾಮ ಕುಕನೂರು ಪಟ್ಟಣ ಪಂಚಾಯತಿ ಹಾಗೂ ಭಾಣಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದು ಕುಕನೂರ ಪಟ್ಟಣದಲ್ಲಿ ಮಾನ್ಯ ತಹಶೀಲ್ದಾರರು ಪ್ರಾಣೇಶ್.ಎಚ್ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸಂತೋಷ ಬಿರಾದರ್ ಪಾಟೀಲ್, ಪ.ಪಂ ಮುಖ್ಯಾಧಿಕಾರಿಗಳು ರವೀಂದ್ರ ಡಿ ಬಾಗಲಕೋಟಿ, ಪಂಟ್ಟಣ ಪಂಚಾಯತಿ ಅಧ್ಯಕ್ಷರಾದ ಲಲಿತಮ್ಮ ಆರ್ ಯಡಿಯಾಪೂರ, ಉಪಾಧ್ಯಕ್ಷ ಪ್ರಶಾಂತ ಆರ್ ಬೆರಳಿನ್, ರಥಕ್ಕೆ ಪುಷ್ಪಾರ್ಚನೆ ಹಾಗೂ ರಥಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಸ್ವಾಗತ ಮಾಡಿದರು.
ನಂತರ ಕನ್ನಡ ಜ್ಯೋತಿ ರಥಯಾತ್ರೆಯು ವೀರಭದ್ರಪ್ಪ ಸರ್ಕಲ್, ಬಸ್ ಸ್ಟಾಂಡ್, ಅಂಬೇಡ್ಕರ್ ವೃತ್ತದಲ್ಲಿ ಸಾಂಪ್ರದಾಯಕ ಡೊಳ್ಳಿನ ವ್ಯಾದ್ಯದೊಂದಿಗೆ ರಥವು ಸಂಚರಿಸಿತು.
ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತಿ ಯೋಜನಾಧಿಕಾರಿಗಳಾದ ಆನಂದ ಗರೂರ, ಸಿಬ್ಬಂದಿಗಳಾದ ಗಿರಿಧರ್ ಜ್ಯೋಷಿ, ಚೆನ್ನಬಸಪ್ಪ ಸಣ್ಣಕರಡದ್, ಯಲ್ಲಪ್ಪ ನಿಡಶೇಸಿ, ನರೇಗಾ ಸಿನ್ನಂದಿಗಳಾದ ಸುರೇಶ್ ದೇಸಾಯಿ ಗಿರೀಶ್ ಗೂಡೂರ, ಲಕ್ಷ್ಮಣ ಕೆರಳ್ಳಿ, ಶಿವರಾಜ ಬಿ, ಪಟ್ಟಣ ಪಂಚಾಯತಿ ಸಿಬ್ಬಂದಿಗಳಾದ ಮನೋಹರ್, ಮಂಜುನಾಥ, ಶರಣಪ್ಪ ಯತ್ನಳ್ಳಿ, ರಾಜೇಶ್ವರಿ ಎಮ್ ಡಿ ಸೇರಿದಂತೆ ಕನ್ನಡ ಪರ ಸಂಘಟನೆಗಳು, ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.