3

ಜನಜಾಗ್ರತೆಗಾಗಿ ಬಳ್ಳಾರಿ ಕಡೆ ಗಾಂಧೀಜಿ ನಡೆ : ಕರಣಂ ಹನುಮೇಶ್ ರಾವ್

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 01- ದೇಶ ಸ್ವತಂತ್ರ ಸಂಗ್ರಾಮದಲ್ಲಿ, ಪೂಜ್ಯ ಬಾಪೂಜಿ ನಾನಾ ಭಾಗಗಳಲ್ಲಿ ಸಂಚರಿಸಿ ಜನರಲ್ಲಿ ಚೈತನ್ಯವನ್ನು ಮೂಡಿಸಿ, ತೊಂಕ ಕಟ್ಟಿ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ.

ಬ್ರಿಟಿಷರನ್ನು ಭಾರತ ದೇಶದಿಂದ ಓಡಿಸಲು, ಗಾಂಧೀಜಿ ಹಲವಾರು ಹೋರಾಟಗಳನ್ನು ನಡೆಸಿದ್ದಾರೆ. ಜನರನ್ನು ಒಕ್ಕೂಡಿಸಿ ಬ್ರಿಟಿಷರ ವಿರುದ್ಧ ಮತ್ತು ಅವರ ಆಡಳಿತ ಮಂಗಳ ಹಾಡಲು ಜನನಾಯಕರಾಗಿ ಹೋರಾಟಗಳು ನಡೆಸಿರುವ ವಿಷಯ ಬಹಳ ದೊಡ್ಡದು. ಅಂದಿನ ದಿನಗಳಲ್ಲಿ ಅತಿ ಕಡಿಮೆ ಸೌಕರ್ಯಗಳು ಇದ್ದರೂ ಸಹಿತ ಗಾಂಧೀಜಿಯವರು ತಮ್ಮ ಸ್ಪೂರ್ತಿಯನ್ನು ಜಯವಾಗಿಟ್ಟುಕೊಂಡು ದೇಶ ವ್ಯಾಪ್ತ ಹೋರಾಟ ನಡೆಸಲು ಮುಂದಾಗಿದ್ದಾರೆ.

ಇದಕ್ಕೆ ಬಳ್ಳಾರಿ ರೈಲ್ವೆ ಸ್ಟೇಷನ್ ಕೂಡ ಒಂದು ವಿಶೇಷ ಸಾಕ್ಷಿಯಾಗಿ ಹಿಂದುಗು ನಿಂತಿರುವುದು ದೊಡ್ಡ ವಿಷಯ. ೨೦೨೧ ನೇ ಇಸವಿ ಅಕ್ಟೋಬರ್ ೧ ನೇ ತಾರೀಕು, ಭಾರತ ದೇಶದ ಸ್ವತಂತ್ರ ಸಂಗ್ರಾಮಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಲು, ಮಹಾತ್ಮ ಗಾಂಧೀಜಿಯವರು ರೈಲಿನಲ್ಲಿ ಬಳ್ಳಾರಿಗೆ ಆಗಮಿಸಿದ್ದು, ದೇಶಭಕ್ತರ ಸಭಾವೇಶದ ನಂತರ ನಗರದ ಅತಿಥಿಗೃಹವಿದ್ದರೂ, ಬ್ರಿಟಿಷರ ಆಡಳಿತ ಆದ ಕಾರಣ ಅಲ್ಲಿ ತಂಗದೆ, ಬಳ್ಳಾರಿಯ ರೈಲ್ವೇ ನಿಲ್ದಾಣದ ನೆಲದ ಮೇಲೆ ರಾತ್ರಿ ೮:೦೦ ಗಳ ಕಾಲ ವಿಶ್ರಾಂತಿ ಪಡೆದಿದ್ದರು. ಹಾಗಾಗಿ ಇಲ್ಲಿನ ದೇಶಭಕ್ತರು ಗಾಂಧೀಜಿಯವರ ಜ್ಞಾಪಕಾಗಿ ಕೂಡ್ಲಿಗಿಯ ಪಟ್ಟಣದಲ್ಲಿ, ಪೂಜ್ಯ ಗಾಂಧೀಜಿ ಸ್ಮಾರಕ ವ್ಯವಸ್ಥೆ ಮಾಡಿರುವುದು ದೊಡ್ಡ ವಿಷಯ. ದೇಶ ಸ್ವತಂತ್ರ ಸಂಗ್ರಾಮದಲ್ಲಿ ಬುಲುಸು, ಸಾಂಬ ಮೂರ್ತಿ ಸಹಿತ, ಹೋರಾಟದಲ್ಲಿ ಪಾಲ್ಗೊಂಡು ಸಂಗ್ರಾಮವನ್ನು ಮುಂದಕ್ಕೆ ನಡೆಸಿದ್ದರು. ಇಲ್ಲಿನ ಗಾಂಧಿ ಭವನ್ ಇಂದಿಗೂ ಸಾಕ್ಷಿಯಾಗಿದೆ.

ಅಂದಿನ ಅಲ್ಲಿಪುರ ಜೈಲಿನಲ್ಲಿ ಹಲವಾರು ಸ್ವತಂತ್ರ ಸಮರ ಯೋಧರನ್ನು ಶಿಕ್ಷೆ ಕೊಟ್ಟಿರುವ ಸಾಕ್ಷಿಗಳು ಇವೆ. ಪ್ರತಿ ವರ್ಷ ಗಾಂಧಿ ಜಯಂತಿ ಅಂಗವಾಗಿ ಬಳ್ಳಾರಿ ರೈಲ್ವೆ ಸ್ಟೇಷನ್ ನಲ್ಲಿ ಅಂದು ಗಾಂಧೀಜಿ ತಂಗಿ ವಿಶ್ರಾಂತಿ ಪಡೆದಿರುವ ಸ್ಥಳದಲ್ಲಿ ಸರ್ಕಾರ ಮತ್ತು ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ.

Leave a Reply

Your email address will not be published. Required fields are marked *

error: Content is protected !!