
ಕೊಟ್ಟೂರು ಸ್ವಾಮಿ ಮಠದಲ್ಲಿ ಕಾರ್ತಿಕೋತ್ಸವ 1000 ದೀಪ ಅಕ್ಕನ ಬಳಗಕ್ಕೆ ಚಾಲನೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 13- ಪರಮ ಪೂಜ್ಯ ಶ್ರೀಮನ್ ನಿರಂಜನ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಕೃಪ ಆಶೀರ್ವಾದದಿಂದ ಕೊಟ್ಟೂರು ಸ್ವಾಮಿ ಮಠದಲ್ಲಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವನ್ನು ನಡೆಸಿ ಮತ್ತು ಅಕ್ಕನ ಬಳಗವನ್ನೂ ಆರಂಭಿಸಲಾಯಿತು.
ಮಾತೆಯರು ಸೇರಿ ನಿಸ್ವಾರ್ಥ ಮನೋಭಾವ ದಿಂದ ಕಾರ್ಯವನ್ನು ಮಾಡಿ, ಅದರಿಂದ ಸಾವಿರಾರು ಜನರಿಗೆ ಉಪಯೋಗ ಆಗುವಂತ ಕೆಲಸವನ್ನು ಮಾಡಬೇಕಿದೆ ಎಂದು ಅಕ್ಕನ ಬಳಗದ ಸದಸ್ಯರಿಗೆ ತಿಳಿಸಿದ ಶ್ರೀಗಳು, ಅಕ್ಕನ ಬಳಗ ಕೇವಲ ಒಂದು ಕಾರ್ಯಕ್ರಮವಾಗದೆ ನಮ್ಮ ಸಂಸ್ಕಾರ ಸಂಸ್ಕೃತಿ ಸದಾ ಉಳಿಸಿ ಬೆಳೆಯುವಂತೆ ಪ್ರೋತ್ಸಾಹಿಸಿ ಎಂದು ತಮ್ಮ ಆಶಿರ್ವಚನದಲ್ಲಿ ಕರೆ ನೀಡಿದರು.
ಕಾರ್ಯಕ್ರಮವನ್ನು ಕೆ.ಎಂ.ಪಾರ್ವತಮ್ಮ ಮತ್ತು ಅಲ್ಲಂ ಸುನಂದಮ್ಮ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಾವಿತ್ರಿ ಮುಜುಮದಾರ ಅಕ್ಕನ ಬಳಗದ ಕುರಿತು ಮಾತನಾಡಿ, ಇಂದು ಹಚ್ಚಿರುವ ೧೦೦೧ ದೀಪಗಳಂತೆ ಅಕ್ಕನ ಬಳಗ ಸದಾ ಬೆಳಗುತ್ತಿರಲಿ ನುಡಿದರು. ಸುಶಿಲಾ ಶಿರೂರು ಅಕ್ಕನ ಬಳಗದ ಬಗ್ಗೆ ಹಾಗೂ ಅಕ್ಕ ಮಹಾದೇವಿಯ ವಚನಗಳ ಮಹತ್ವದ ಬಗ್ಗೆ ಕಾರ್ಯಕ್ರಮದಲ್ಲಿ ವಿವರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಾವಿತ್ರಿ ಮುಜುಮದಾರ (ಚೇರಮನ್ ಮುಜುಮದಾರ್ ಪೌಂಡೇಶನ್), ಸುರೇಖಾ ಮಲ್ಲನಗೌಡ, ಮಹಾನಗರ ಪಾಲಿಕೆ ಸದಸ್ಯರು ಡಾ.ರಚನಾ, ಡಾ.ರೇಣುಕಾ, ಡಾ.ಭಾಗ್ಯಲಕ್ಷೀ, ಕಾತ್ಯಾಯಿನಿ ಇವರುಗಳು ಕೂಡಾ ಉಪಸ್ಥಿತರಿದ್ದರು.
ಮಧುಮತಿ ಪಾಟೀಲ್ ಶಿಕ್ಷಕಿ ಹಾಗೂ ಲೇಖಕಿ, ಇವರು ಕಾರ್ಯಕ್ರಮದ ನಿರೂಪಣೆ ಮಾಡಿದರು. Sಉಖಿ ಕಾಲೇಜ್ ಉಪನ್ಯಾಸಕಿ ಪದ್ಮಾವತಿ ಕಾರ್ಯಕ್ರಮದ ಪ್ರಾಸ್ಥಾವಿಕ ನುಡಿಗಳನ್ನು ಆಡಿದರು. ವಿನುತಾ ಅವರು ಪ್ರಾರ್ಥನೆ ಹಾಗೂ ನಾಗರತ್ನ ಮಳ್ಳಿಮಠ ಅವರು ಸ್ವಾಗತವನ್ನು ಮಾಡಿದರು, ಶಕುಂತಲಾ ವಂದನಾರ್ಪಣೆಯನ್ನು ಮಾಡಿದರು.
ಅಕ್ಕನ ಬಳಗದ ಉಸ್ತುವಾರಿಯನ್ನು, ಸುನಿತಾ ಗುರಲಿಂಗನಗೌಡ, ವನಜಾಕ್ಷಿ ಹಾಗೂ ನಂದಾ ಎಸ್ ಪಾಟೀಲ್ ಮತ್ತು ಉಳಿದ ಎಲ್ಲ ಅಕ್ಕನ ಬಳಗದ ಸದಸ್ಯರು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿದರು.