7

ಕ್ಷಯಮುಕ್ತ ಭಾರತ ನಿರ್ಮಿಸಲು ಸಾರ್ವಜನಿಕವಾಗಿ ಕೈ ಜೋಡಿಸಿ : ಕಾಸಿಮಸಾಬ್

ಕರುನಾಡ ಬೆಳಗು ಸುದ್ದಿ

ವಿಜಯನಗರ, 15- ಕ್ಷಯರೋಗವು (ಟಿಬಿ) ಮುಖ್ಯವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಗಂಭೀರ ಕಾಯಿಲೆಯಾಗಿದ್ದು ಕ್ಷಯಮುಕ್ತ ಭಾರತ ನಿರ್ಮಾಣಕ್ಕಾಗಿ ಸಾರ್ವಜನಿಕರು ಕೈಜೋಡಿಸಬೇಕೆಂದು ಕ್ಷಯರೋಗ ಸಂದರ್ಶಕ ಕಾಸಿಮ ಸಾಬ್ ಹೇಳಿದರು.

ನಗರದಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರದಿAದ ಏರ್ಪಡಿಸಿದ್ದ ಕ್ಷಯರೋಗದ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಶುಕ್ರವಾರ ಮಾತನಾಡಿದರು.

ಕ್ಷಯರೋಗವನ್ನು ಉಂಟುಮಾಡುವ ಸೂಕ್ಷö್ಮಜೀವಿಗಳು ಒಂದು ರೀತಿಯ ಬ್ಯಾಕ್ಟೀರಿಯಾವಾಗಿದ್ದು, ಕಾಯಿಲೆ ಇರುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಅಥವಾ ಹಾಡಿದಾಗ ಕ್ಷಯರೋಗ ಹರಡಬಹುದು. ಸೂಕ್ಷö್ಮಜೀವಿಗಳು ಶ್ವಾಸಕೋಶವನ್ನು ಪ್ರವೇಶಿಸುತ್ತವೆ. ಜನಸಂದಣಿಯಲ್ಲಿ ಜನರು ಸೇರುವ ಸ್ಥಳದಲ್ಲಿ ಅಥವಾ ಜನರು ಕಿಕ್ಕಿರಿದ ಸ್ಥಿತಿಯಲ್ಲಿ ವಾಸಿಸುವ ಸ್ಥಳದಲ್ಲಿ ಕ್ಷಯರೋಗವು ಸುಲಭವಾಗಿ ಹರಡುತ್ತದೆ. ಹಾಗಾಗೀ ಸಾರ್ವಜನಿಕರಿಗೆ ಕ್ಷಯರೋಗದ ಬಗ್ಗೆ ಅರಿವು ಮೂಡಿಸಿದಲ್ಲಿ ಕ್ಷಯಮುಕ್ತ ಸಮಾಜ ನಿರ್ಮಿಸಲು ಸಾಧ್ಯವಾಗಲಿದೆ ಎಂದರು.

ಬಳಿಕ ನಗರ ಅರೋಗ್ಯ ಕೇಂದ್ರದ ಅರೋಗ್ಯ ನಿರೀಕ್ಷಣ ಅಧಿಕಾರಿ ಯಶೋಧ ಮಾತನಾಡಿ, ಕ್ಷಯರೋಗದ ಲಕ್ಷಣಗಳಲ್ಲಿ ಪ್ರಮುಖವಾಗಿ ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಕಫದಲ್ಲಿ ರಕ್ತ ಬೀಳುವುದು, ಕ್ರಮೇಣ ದೇಹದಲ್ಲಿ ತೂಕ ಕಡಿಮೆ ಆಗುವುದು, ಹಸಿವು ಆಗದೇ ಇರುವುದು, ರಾತ್ರಿ ವೇಳೆ ಬೆವರುವುದು, ಎದೆಯಲ್ಲಿ ನೋವು ಬರುವುದು, ಸಂಜೆ ವೇಳೆ ಜ್ವರ ಬರುವುದು. ಹೀಗೆ ಮುಂತಾದ ಲಕ್ಷಣಗಳು ಕಂಡು ಬಂದರೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಉಚಿತವಾಗಿ ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕ್ಷಯ ಎಂದು ಧೃಡಪಟ್ಟಲ್ಲಿ ಆಪ್ತ ಸಮಾಲೋಚಕರಿಂದ ಉಚಿತವಾಗಿ ಮಾತ್ರೆಗಳನ್ನು ಪಡೆಯಬಹುದಾಗಿದೆ. ಜೊತೆಗೆ ‘ನಿಕ್ಷಯ ಪೋಷಣ್’ ಯೋಜನೆಯಡಿಯಲ್ಲಿ ಪೌಷ್ಟಿಕ ಆಹಾರ ಸೇವನೆಗಾಗಿ ಪ್ರತಿ ತಿಂಗಳ ೫೦೦ ರೂಗಳಂತೆ ೬ ತಿಂಗಳವರೆಗೆ ರೋಗಿಯ ಖಾತೆಗೆ ಸರ್ಕಾರದಿಂದಲೇ ಭರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!