4

ಅನಸೂಯ ಜಹಗೀರದಾರ್‌ಗೆ ಕಥಾ ಮಾಣಿಕ್ಯ ಪ್ರಶಸ್ತಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 10- ಹಾಸನದ ಮಾಣಿಕ್ಯ ಪ್ರಕಾಶನ (ರಿ.), ಸಂಸ್ಥೆಯು ೨೦೧೫ ರಿಂದಲೂ ವೈವಿಧ್ಯಮಯ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಸಾಹಿತಿಗಳಿಗೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ ವಿವಿಧ ಲೇಖಕರ 80 ಕ್ಕೂ ಹೆಚ್ಚು ಕೃತಿಗಳನ್ನು ಮುದ್ರಣ ಮಾಡಿ ಕನ್ನಡ ಸಾರಸ್ವತ ಲೋಕಕ್ಕೆ ನೀಡುವುದರ ಜೊತೆಗೆ ದಾನಿಗಳ ಸಹಕಾರದಲ್ಲಿ ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ದತ್ತಿ ಪುರಸ್ಕಾರ ನೀಡಿ ಗೌರವಿಸುತ್ತಿದೆ.

ಈ ನಿಟ್ಟಿನಲ್ಲಿ 2024 ರ ದತ್ತಿ ಪುರಸ್ಕಾರಗಳಿಗೆ 2023 ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ವಿವಿಧ ಪ್ರಕಾರದ ಕೃತಿಗಳನ್ನು ಆಹ್ವಾನಿಸಲಾಗಿತ್ತು. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ನಿರೀಕ್ಷೆಗೂ ಮೀರಿ ಕೃತಿಗಳನ್ನು ಲೇಖಕರು ಕಳುಹಿಸಿದ್ದರು. ಹಿರಿಯ ಸಾಹಿತಿಗಳಾದ ತುರುವೇಕೆರೆ ಪ್ರಸಾದ್, ಕೊಟ್ರೇಶ್ ಎಸ್. ಉಪ್ಪಾರ್, ಎನ್. ಶೈಲಜಾ ಹಾಸನ, ಪದ್ಮಾವತಿ ವೆಂಕಟೇಶ್, ನೀಲಾವತಿ ಸಿ.ಎನ್, ನಾಗರಾಜ್ ದೊಡ್ಡಮನಿ, ಎಚ್.ಎಸ್.ಬಸವರಾಜ್, ವಾಸು ಸಮುದ್ರವಳ್ಳಿ, ಡಾ. ಹಸೀನಾ ಎಚ್.ಕೆ, ಲತಾಮಣಿ ಎಂ.ಕೆ. ತುರುವೇಕೆರೆ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಈ ಕೆಳಕಂಡ0ತೆ ದತ್ತಿ ಪ್ರಶಸ್ತಿಗಳಿಗೆ ಅರ್ಹ ಕೃತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಾಶಕಿ ದೀಪಾ ಉಪ್ಪಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿ. ಸಿ.ಪಿ ನಾರಾಯಣಚಾರ್ಯ ಸ್ಮಾರಕ ದತ್ತಿ – ಕಾವ್ಯ ಮಾಣಿಕ್ಯ ಪ್ರಶಸ್ತಿ 2024 (ಕಾವ್ಯ), ಕವಯಿತ್ರಿ ಸಿ. ಎನ್. ನೀಲಾವತಿ ಕೊಡಮಾಡುವ ದಿ. ಸಿ.ಪಿ ನಾರಾಯಣಚಾರ್ಯ ಸ್ಮಾರಕ ದತ್ತಿ – ಕಾವ್ಯ ಮಾಣಿಕ್ಯ ಪ್ರಶಸ್ತಿ 2024 ಕ್ಕೆ ವಿಜಯಪುರ ಜಿಲ್ಲೆಯ ಸುಮಿತ್ ಮೇತ್ರಿ ಅವರ “ಈ ಕಣ್ಣುಗಳಿಗೆ ಸದಾ ನೀರಡಿಕೆ” ಪ್ರಥಮ 3000 ರೂ ನಗದು ಮತ್ತು ಪ್ರಶಸ್ತಿ ಫಲಕ, ಹಾಸನ ಜಿಲ್ಲೆಯ ನಂದಿನಿ ಹೆದ್ದುರ್ಗ ಅವರ “ಒಂದು ಆದಿಮ ಪ್ರೇಮ” ದ್ವಿತೀಯ 2000 ರೂ ನಗದು ಮತ್ತು ಪ್ರಶಸ್ತಿ ಪುರಸ್ಕಾರ, ಬೆಳಗಾವಿ ಜಿಲ್ಲೆಯ ಸಂತೋಷ ನಾಯಿಕ ಅವರ “ಹೊಸ ವಿಳಾಸದ ಹೆಜ್ಜೆಗಳು” ತೃತೀಯ 1000 ರೂ ನಗದು ಮತ್ತು ಪ್ರಶಸ್ತಿ ಪುರಸ್ಕಾರಕ್ಕೆ ಭಾಜನವಾಗಿವೆ.

ಎನ್. ಶೈಲಜಾ ಹಾಸನ ದತ್ತಿ – ಪ್ರಬಂಧ ಮಾಣಿಕ್ಯ ಪ್ರಶಸ್ತಿ 2024 (ಲಲಿತ ಪ್ರಬಂಧ ವಿಭಾಗ): ಹಿರಿಯ ಸಾಹಿತಿ ಎನ್. ಶೈಲಜಾ ಹಾಸನ ಹೆಸರಲ್ಲಿ ಕೊಡಮಾಡುವ ಎನ್. ಶೈಲಜಾ ಹಾಸನ ದತ್ತಿ – ಪ್ರಬಂಧ ಮಾಣಿಕ್ಯ ಪ್ರಶಸ್ತಿ 2024 ಹಾಸನ ಜಿಲ್ಲೆಯ ಸುಮಾವೀಣಾ ಅವರ “ಮಧುರಾನುಭೂತಿಯ ಬುತ್ತಿ” ಕೃತಿಯು 3000 ರೂ ನಗದು, ಪ್ರಶಸ್ತಿ ಪುರಸ್ಕಾರಕ್ಕೆ ಭಾಜನವಾಗಿದೆ.

ಪದ್ಮಾವತಿ ವೆಂಕಟೇಶ್ ದತ್ತಿ – ಕಥಾ ಮಾಣಿಕ್ಯ ಪ್ರಶಸ್ತಿ 2024 (ಕಥಾ ವಿಭಾಗ): ಕವಯಿತ್ರಿ ಪದ್ಮಾವತಿ ವೆಂಕಟೇಶ್ ಹೆಸರಲ್ಲಿ ಕೊಡಮಾಡುವ ಪದ್ಮಾವತಿ ವೆಂಕಟೇಶ್ ದತ್ತಿ – ಕಥಾ ಮಾಣಿಕ್ಯ ಪ್ರಶಸ್ತಿ 2024 ಕ್ಕೆ ಕೊಪ್ಪಳ ಜಿಲ್ಲೆಯ ಅನಸೂಯ ಜಹಗೀರದಾರ್ ಅವರ “ಪರಿವರ್ತನೆ” ಕಥಾ ಸಂಕಲನವು 2000 ರೂ ನಗದು, ಪ್ರಶಸ್ತಿ ಪುರಸ್ಕಾರಕ್ಕೆ ಭಾಜನವಾಗಿದೆ.

ದಿ. ಶಾಂತಮ್ಮ ನಾಗರಾಜ್ ಸ್ಮಾರಕ ದತ್ತಿ – ಹಾಸ್ಯ ಮಾಣಿಕ್ಯ ಪ್ರಶಸ್ತಿ 2024 (ಹಾಸ್ಯ ಪ್ರಬಂಧ ವಿಭಾಗ) : ಹಿರಿಯ ಸಾಹಿತಿ ತುರುವೇಕೆರೆ ಪ್ರಸಾದ್ ಪ್ರಾಯೋಜಿತ ದಿ. ಶಾಂತಮ್ಮ ನಾಗರಾಜ್ ಸ್ಮಾರಕ ದತ್ತಿ – ಹಾಸ್ಯ ಮಾಣಿಕ್ಯ ಪ್ರಶಸ್ತಿ 2024 ಕ್ಕೆ ಹಾಸನ ಜಿಲ್ಲೆಯ ಸುಮಾ ರಮೇಶ್ ಅವರ “ಹಚ್ಛೆ ದಿನ್” ಕೃತಿಯು 2000 ರೂ ನಗದು, ಪ್ರಶಸ್ತಿ ಪುರಸ್ಕಾರಕ್ಕೆ ಭಾಜನವಾಗಿದೆ.

ದಿ. ನಿಂಗಪ್ಪ ಮಲ್ಲಪ್ಪ ಮೇಟಿ ಸ್ಮಾರಕ ದತ್ತಿ – ಗದ್ಯ ಮಾಣಿಕ್ಯ ಪ್ರಶಸ್ತಿ 2024 (ಸಂಕೀರ್ಣ ವಿಭಾಗ) : ಮುಂಬಯಿ ಸಾಹಿತಿ ವಿಶ್ವೇಶ್ವರ ಎನ್. ಮೇಟಿ ಅವರು ಕೊಡಮಾಡುವ ದಿ. ನಿಂಗಪ್ಪ ಮಲ್ಲಪ್ಪ ಮೇಟಿ ಸ್ಮಾರಕ ದತ್ತಿ – ಗದ್ಯ ಮಾಣಿಕ್ಯ ಪ್ರಶಸ್ತಿ 2024 ಕ್ಕೆ ಉತ್ತರ ಕನ್ನಡ ಜಿಲ್ಲೆಯ ಜಿಲ್ಲೆಯ ಶಿವಲೀಲಾ ಹುಣಸಗಿಯವರ “ಗೋರಿಯ ಸುತ್ತ ಸಪ್ತಪದಿ ತುಳಿದಾಗ” ಕೃತಿಯು 3000 ರೂ ನಗದು, ಪ್ರಶಸ್ತಿ ಪುರಸ್ಕಾರಕ್ಕೆ ಭಾಜನವಾಗಿದೆ.

ಎಲ್ಲಾ ಪ್ರಶಸ್ತಿ ಪುಸ್ಕೃತರಿಗೆ ಮಾಣಿಕ್ಯ ಪ್ರಕಾಶನ 2024 ನವೆಂಬರ್ 10 ಭಾನುವಾರ ಹಾಸನದ ಸಂಸ್ಕೃತ ಭವನದಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಒಂಭತ್ತನೇ ಕವಿ-ಕಾವ್ಯ ಸಂಭ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರಕಾಶಕಿ ದೀಪಾ ಉಪ್ಪಾರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!