
ಕೊಪ್ಪಳ : ಉಚಿತ ಕರಾಟೆ ತರಬೇತಿ ಶಿಬಿರ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 4- ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಗುರುದೇವ ಕರಾಟೆ ಕ್ಲಾಸ್ ಹಾಗೂ ಭೂಮಿ ಕರಾಟೆ ಪೌಂಡೇಶನ್ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಕರಾಟೆ ತರಬೇತಿ ಶಿಬಿರವನ್ನು ನವೆಂಬರ ೧೧ರಿಂದ ೧೬ರವರಗೆ ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ತರಬೇತಿ ಶಿಬಿರದಲ್ಲಿ ಭಾಗವಹಿಸಲಿಚ್ಛಿಸುವ ಶಿಬಿರಾರ್ಥಿಗಳಿಗೆ ಯಾವುದೇ ವಯೋಮಿತಿ ಇರುವುದಿಲ್ಲ. ಮುಕ್ತ ಅವಕಾಶವಿದ್ದು, ಬಾಲಕೀಯರಿಗೆ ಪ್ರಾಧಾನ್ಯತೆ ನೀಡಲಾಗುವುದು. ಆಸಕ್ತರು ಆಧಾರ ಕಾರ್ಡ, ಭಾವಚಿತ್ರ ಸಹಿತ ನೊಂದಾಯಿಸಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ತರಬೇತುದಾರದ ರುಕ್ಕಿಣಿ ದೇವಪ್ಪ ಬಂಗಾಳಿಗಿಡದ ಮೊ.ಸಂ ೭೬೭೬೭೩೬೧೭೨, ೭೪೧೧೮೦೨೪೨೭ ಹಾಗೂ ಮೌನೇಶ ವಡ್ಡಟ್ಟಿ ಮೊ.ಸಂ ೯೯೦೦೩೨೧೨೩೯ ಗೆ ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆ ತಿಳಿಸಿದ್ದಾರೆ.