
ಕೊಪ್ಪಳ : ಮ್ಯಾನ್ಯೂವೆಲ್ ಸ್ಕಾö್ಯವೇಂಜರ್ ಮರು ಸಮೀಕ್ಷೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 28- ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಅನೈರ್ಮಲ್ಯ ಶೌಚಾಲಯಗಳು ಹಾಗೂ ಮ್ಯಾನ್ಯೂಯಲ್ ಸ್ಕಾö್ಯವೇಂಜರ್‌ಗಳ ಮರು ಸಮೀಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೊಪ್ಪಳ ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.
ಮ್ಯಾನುಯಲ್ ಸ್ಕಾö್ಯವೇಂಜರ್‌ಗಳ ಉದ್ಯೋಗದ ನಿಷೇಧ ಮತ್ತು ಅವರ ಪುನರ್ವಸತಿ ಕಾಯಿದೆ ೨೦೧೩ ೨(೧) ಉ ರಂತೆ ಮ್ಯಾನುವಲ್ ಸ್ಕಾö್ಯವೇಂಜರ್‌ಗಳ ಕಾರ್ಯದಲ್ಲಿ ದೈಹಿಕವಾಗಿ ತೊಡಗಿರುವವರು, ಅಂದರೆ ಒಣ ಶೌಚಾಲಯಗಳನ್ನು ಸ್ವಚ್ಛಗೊಳಿಸುವವರು, ಯಾವುದೇ ವ್ಯಕ್ತಿ ನೈರ್ಮಲ್ಯ ರಹಿತ ಶೌಚಾಲಯ ಅಥವಾ ತೆರೆದ ಚರಂಡಿಗಳಲ್ಲಿ ಮಾನವನ ಮಲ ಮೂತ್ರವನ್ನು ದೈಹಿಕವಾಗಿ ಸ್ವಚ್ಛಗೊಳಿಸುವವರು ವ್ಯಕ್ತಿಗಳಿದ್ದಲ್ಲಿ ಕೊಪ್ಪಳ ನಗರಸಭೆ ಕಾರ್ಯಾಲಯದಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಅಕ್ಟೋಬರ್೩೧ ರೊಳಗಾಗಿ ನೊಂದಾಯಿಸಿಕೊಳ್ಳಲು ಪ್ರಕಟಣೆ ತಿಳಿಸಿದೆ.