KB

ಕೊಪ್ಪಳ : ಆಯುರ್ವೇದ ಆಹಾರ ಮೇಳ ಆಯೋಜನೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 22- ನಗರದ ಶ್ರೀ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಕೊಪ್ಪಳದ ಸ್ವಸ್ಥವೃತ್ತ ವಿಭಾಗದ ವತಿಯಿಂದ ೯ನೇ ಆಯುರ್ವೇದ ದಿನಾಚರಣೆ ಹಾಗೂ ವಿಶ್ವ ಆಹಾರ ದಿನದ ಅಂಗವಾಗಿ ಅ.೨೪ ರಂದು ಬೆಳಿಗ್ಗೆ ೯:೩೦ ರಿಂದ ಮಧ್ಯಾಹ್ನ ೩ರವರೆಗೆ “ಆಯುರ್ ಆಹಾರ ವೈಭವ” ಎಂಬ ಶೀರ್ಷಿಕೆ ಅಡಿ ಆಯುರ್ವೇದ ಆಹಾರ ಮೇಳವನ್ನು ವಿಜೃಂಭಣೆಯಿAದ ಆಯೋಜಿಸಲಾಗಿದೆ.

ಈ ಮೇಳದಲ್ಲಿ ಆಯುರ್ವೇದ ಆಧಾರಿತ ಆರೋಗ್ಯಕರ ಆಹಾರಗಳ ವಿವಿಧ ವೈವಿಧ್ಯಗಳನ್ನು ಜನರಿಗೆ ಪರಿಚಯಿಸಲು ಉದ್ದೇಶಿಸಲಾಗಿದೆ. ಆಯುರ್ವೇದದ ಪ್ರಾಚೀನ ತತ್ವಗಳನ್ನು ಒಳಗೊಂಡAತೆ, ದೇಹ ಹಾಗೂ ಮನಸ್ಸಿಗೆ ಪೋಷಣೆಯನ್ನು ನೀಡುವ ಆಹಾರ ಪದಾರ್ಥಗಳನ್ನು ಸ್ವಸ್ಥವೃತ್ತ ವಿಭಾಗದ ಆಹಾರ ತಜ್ಞರು ಹಾಗೂ ವಿದ್ಯಾರ್ಥಿಗಳು ಪ್ರದರ್ಶನ ಮಾಡಲಿದ್ದಾರೆ.

ಇಂದಿನ ಪಾರಂಪರಿಕ ಆಹಾರ ಪದ್ಧತಿಯಿಂದ ಆಧುನಿಕ ಆಹಾರ ಪದ್ಧತಿ ಬದಲಾವಣೆಯ ಸಮಯದಲ್ಲಿ ಈ ಆಯುರ್ವೇದ ಆಹಾರ ಮೇಳವು ಆರೋಗ್ಯ ಕಾಪಾಡಲು ಇಚ್ಛಿಸುವ ಜನತೆಗೆ ಮತ್ತು ಆಯುರ್ವೇದದ ಮಹತ್ವ ತಿಳಿಯಲು ಇಚ್ಛಿಸುವವರಿಗೆ ಉತ್ತಮ ವೇದಿಕೆಯಾಗಿದೆ.

ವಿಶೇಷವಾಗಿ ಮಧುಮೇಹ ರೋಗಿಗಳಿಗೆ ವಿವಿಧ ಖಾದ್ಯಗಳ ಪ್ರದರ್ಶನದ ಜೊತೆಗೆ ಸವಿಯಲು ಅವಕಾಶವಿರುತ್ತದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು ಎಂದು ಸ್ವಸ್ಥವೃತ್ತ ವಿಭಾಗದ ಮುಖ್ಯಸ್ಥ ಡಾ.ಪ್ರಭು.ಸಿ.ನಾಗಲಾಪೂರ ಹಾಗೂ ಪ್ರಾಚಾರ್ಯ ಡಾ.ಮಹಾಂತೇಶ ಸಾಲಿಮಠ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!