IMG-20241003-WA0016(1)

ಕೊಪ್ಪಳ ವಿ.ವಿ ದಸರಾ ಕಾವ್ಯ ಸಂಭ್ರಮದ 2ನೇ ಆವೃತ್ತಿ ಯಶಸ್ವಿ : ಪ್ರೊ.ಬಿ.ಕೆ.ರವಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 3- ಕೊಪ್ಪಳ ವಿಶ್ವವಿದ್ಯಾಲಯವು ಕಳೆದ ವರ್ಷ 2023ರಲ್ಲಿ ಹಮ್ಮಿಕೊಂಡಿದ್ದ ದಸರಾ ಕಾವ್ಯ ಸಂಭ್ರಮ-2023ಕ್ಕೆ ವರ್ಷದ ಸಂಭ್ರಮದ ಬೆನ್ನಲ್ಲೇ ದಸರಾ ಕಾವ್ಯ ಸಂಭ್ರಮದ ಎರಡನೇ ಕಾರ್ಯಕ್ರಮವು ಅಕ್ಟೋಬರ್ 3ರಂದು ಯಶಸ್ವಿಯಾಗಿ ನಡೆಯಿತು.

ನೂತನ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳು ಮತ್ತು ಚಿಂತಕರಾದ ಪ್ರೊ.ಬಿ.ಕೆ.ರವಿ ಅವರು ವಿಶೇಷ ಆಸಕ್ತಿ ವಹಿಸಿ ಬಯಲುಸೀಮೆ ಕೊಪ್ಪಳ ಜಿಲ್ಲೆಯಲ್ಲಿ ಆರಂಭಿಸಿರುವ ಈ ದಸರಾ ಕಾವ್ಯ ಸಂಭ್ರಮಕ್ಕೆ ಜಿಲ್ಲೆಯ ಸಾಂಸ್ಕೃತಿಕ ವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕವಿತಾ ವಾಚನ ಹಿನ್ನೆಲೆಯಲ್ಲಿ ಸಾಹಿತ್ಯ ಭವನದಲ್ಲಿ ಹಬ್ಬದ ಸಂಭ್ರಮ ಕಂಡುಬ0ದಿತು.

ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದಿಂದ ಆಯೋಜಿಸಲಾಗಿದ್ದ ಈ ದಸರಾ ಕಾವ್ಯ ಸಂಭ್ರಮಕ್ಕೆ ನಾಡಿನ ಹೆಸರಾಂತ ಸಾಹಿತಿಗಳು ಮತ್ತು ವಿದ್ವಾಂಸರಾದ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅವರು ಚಾಲನೆ ನೀಡಿದ್ದು ವಿಶೇಷವಾಗಿತ್ತು.

ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ರಾಯಚೂರು ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ಬಳ್ಳಾರಿಯ ವಿ.ಎಸ್.ಕೆ ವಿಶ್ವವಿದ್ಯಾಲಯದ ಕುಲಸಚಿವರು ಮತ್ತು ಕಲಬುರಗಿ ರಂಗಾಯಣದ ನಿರ್ದೇಶಕರು ಸೇರಿದಂತೆ ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಕಾರ್ಯಕ್ರಮದ ವಿಶೇಷತೆಯಾಗಿತ್ತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅವರು ಮಾತನಾಡಿ, ಕವಿಗಳು ಸಮಕಾಲಿನ ವಿಷಯಗಳ ಮೇಲೆ ಕಾವ್ಯ ರಚನೆ ಮಾಡುವ ಮೂಲಕ ಸಾಮಾಜಿಕ ಹೊಣೆಗಾರಿಕೆಯನ್ನು ಹೊಂದಬೇಕು ಎಂದು ಸಲಹೆ ಮಾಡಿದರು.

ಯುದ್ಧವು ಮಾನವ ಕುಲಕ್ಕೆ ಕಂಟಕವಾಗಿದೆ. ಮಣಿಪುರ ಹಾಗೂ ದೇಶದ ಹಲವು ಭಾಗಗಳಲ್ಲಿ ನಡೆದ ಕೊಲೆ, ಅತ್ಯಾಚಾರ, ಜನಾಂಗೀಯ ನಿಂದನೆಯAತಹ ಪ್ರಕರಣಗಳು ಮಾನವನ ಹಿಂಸಾ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತವೆ ಎಂದು ಅವರು ವಿಷಾಧ ವ್ಯಕ್ತಪಡಿಸಿದರು.

ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹರೀಶ್ ರಾಮಸ್ವಾಮಿ ಅವರು ಮಾತನಾಡಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳು ಸಾಂಸ್ಕೃತಿಕ ಗಟ್ಟಿತನವನ್ನು ಜತನದಿಂದ ಕಾಪಾಡಿಕೊಂಡು ಬಂದ ತಿರುಳ್ಗನ್ನಡ ಸೀಮೆಗಳಾಗಿವೆ. ಸಿದ್ಧಯ್ಯ ಪುರಾಣಿಕರಂತವರು ನಾಡಿನ ಕವಿಯಾಗಿ ಗುರುತಿಸಿಕೊಂಡಿದ್ದು ಈ ಭಾಗದ ಹೆಮ್ಮೆಯ ವಿಷಯವಾಗಿದೆ ಎಂದರು.

ಅನುಭವಗಳನ್ನು ಉತ್ತಮ ಪದಗಳಿಂದ ಅಭಿವ್ಯಕ್ತಿಸಿದ ಕಾವ್ಯವು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಕನ್ನಡ ಸಿನಿಮಾಗಳಲ್ಲಿ ಸಾಹಿತ್ಯ ರಚನೆ ಪ್ರಮುಖ ಪಾತ್ರವಹಿಸುತ್ತದೆ. 1970ರ ದಶಕದಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರಯತ್ನ ನಡೆಯಿತು. ಈ ನಿಟ್ಟಿನಲ್ಲಿ ಚಿ.ಉದಯಶಂಕರ ಅವರು ಪ್ರಮುಖರಾಗಿದ್ದಾರೆ ಎಂದು ತಿಳಿಸಿದರು.

ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಎಂ. ಮುನಿರಾಜು ಅವರು ಮಾತನಾಡಿ, ಸಮಾಜದಲ್ಲಿನ ಅನಿಷ್ಟ ಪದ್ಧತಿಗಳು, ಸ್ವಾರ್ಥತೆಯಿಂದ ಮಾನವೀಯ ಮೌಲ್ಯಗಳು ಕುಸಿಯಲು ಕಾರಣವಾಗಿದ್ದು ಕವಿಗಳು ವೈಚಾರಿಕ ಚಿಂತನೆಯ ಬೀಜ ಬಿತ್ತುವ ಕೆಲಸ ಮಾಡಬೇಕು ಎಂದರು.

ಕಲಬುರಗಿ ರಂಗಾಯಣದ ನಿರ್ದೇಶಕಿ ಸುಜಾತ ಜಂಗಮಶೆಟ್ಟಿ ಅವರು ಮಾತನಾಡಿ, ಕಲ್ಯಾಣ ಕರ್ನಾಟಕದ ಸಾಂಸ್ಕೃತಿಕ ವಲಯವನ್ನು ಕಟ್ಟುವ ಹಿನ್ನೆಲೆಯಲ್ಲಿ ಕಲಾವಿದರನ್ನು ಗುರುತಿಸುವ ಕಾರ್ಯವನ್ನು ರಂಗಾಯಣದಿAದ ಕೈಗೊಂಡಿದ್ದೇವೆ ಎಂದು ತಿಳಿಸಿದರು.

ಬಳ್ಳಾರಿಯ ವಿ.ಎಸ್.ಕೆ ವಿಶ್ವವಿದ್ಯಾಲಯದ ಕುಲಸಚಿವರಾದ ಎಸ್.ರುದ್ರೇಶ್ ಅವರು ಮಾತನಾಡಿ, ಜಾನಪದ ಸಾಹಿತ್ಯ ಹುಟ್ಟಿದ್ದು ಶ್ರಮಿಕರಿಂದ. ಈ ಸಾಹಿತ್ಯವು ಶ್ರಮ ನೀಗಿಸುವ ಸಂದರ್ಭದಲ್ಲಿ ತನ್ನದೇ ಆದ ಲಯಬದ್ಧತೆಯನ್ನು ಹೊಂದಿದೆ. ಕವಿಗೆ ಕವಿತೆ ರಚನೆ ಕಾರ್ಯ ಎಷ್ಟು ಮುಖ್ಯವೊ ವಾಚನವೂ ಅಷ್ಟೇ ಮುಖ್ಯವಾಗಿದೆ ಎಂದು ಹಲವು ಜನಪದ ಗೀತೆಗಳನ್ನು ಹಾಡಿದರು.

ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಭಾಗದಲ್ಲಿ ಕವಿಗಳಿಗೆ ಕೊರತೆಯಿಲ್ಲ; ಅದು ಒರತೆಯಾಗಿ ಸದಾ ಹರಿಯುವ ರೀತಿಯಲ್ಲಿ ನೂರಾರು ಉತ್ತಮ ಕವಿಗಳನ್ನು ಕೊಪ್ಪಳ ಜಿಲ್ಲೆಯು ಹೊಂದಿದೆ. ಸಮಾಜ ಪರಿವರ್ತನೆ ಮಾಡುವ ಶಕ್ತಿ ಕವಿಗಳಲ್ಲಿದೆ. ಹಾಗಾಗಿ ಬಡವರ ಕಣ್ಣೀರೊರೆಸುವ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಸಮಾಜದ ಆಶಯಗಳನ್ನೊಳಗೊಂಡ ಕವಿತೆಗಳು ರಚನೆಯಾಗಲಿ ಎಂದರು.

ಕವಿಗಳ ಪ್ರತಿಭೆ ಅನಾವರಣಕ್ಕಾಗಿ ಪ್ರತಿ ವರ್ಷವೂ ಕಾವ್ಯ ಸಂಭ್ರಮ ಮಾಡಲು ವಿಶ್ವವಿದ್ಯಾಲಯವು ಸಿದ್ಧವಿದೆ. ಪ್ರಸಕ್ತ ವರ್ಷದಿಂದ ಪ್ರದರ್ಶನ ಕಲೆ ಮತ್ತು ದೃಶ್ಯಕಲೆ ಕೋರ್ಸ್ಗಳನ್ನು ಆರಂಭಿಸಲು ನಿರ್ಧರಿಸಿದ್ದು, ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳುವುದರ ಮೂಲಕ ತಿರುಳ್ಗನ್ನಡದ ಸಾಂಸ್ಕೃತಿಕ ಭವ್ಯತೆಯನ್ನು ಹೆಚ್ಚಿಸಬೇಕು. ಎಲ್ಲರ ಸಹಕಾರದಿಂದ ವಿಶ್ವವಿದ್ಯಾಲಯ ಕಟ್ಟಬೇಕಿದೆ. ಹಾಗಾಗಿ ಕೊಪ್ಪಳ ಜನತೆಯ ಪ್ರೀತಿ, ವಿಶ್ವಾಸ ಸದಾ ನಮ್ಮೊಂದಿಗಿರಲಿ ಎಂದರು.

ಕಾರ್ಯಕ್ರಮದಲ್ಲಿ ಹಣಕಾಸು ಅಧಿಕಾರಿ ಅಮೀನಸಾಬ್, ಕುಲ ಸಚಿವರಾದ ಕೆ.ವಿ.ಪ್ರಸಾದ್, ಪ್ರಾಧ್ಯಾಪಕರಾದ ಡಾ. ಸಿ.ಐ.ಚಲವಾದಿ, ಡಾ. ಪ್ರಕಾಶ್ ಯಳವಟ್ಟಿ, ಜಡೆಪ್ಪ, ಡಾ. ಸಾದು ಸೂರ್ಯಕಾಂತ, ಡಾ.ಅಶ್ವಿನ್‌ಕುಮಾರ, ಡಾ. ಸರಸ್ವತಿ, ಬಸವರಾಜ ಈಳಿಗಾನೂರ, ಡಾ.ಪ್ರವೀಣ ಪೊಲೀಸ್ ಪಾಟೀಲ, ಡಾ.ವೀರೇಶ ಉತ್ತಂಗಿ, ಡಾ.ಪಾರ್ವತಿ ಕನಕಗಿರಿ, ಡಾ.ಭೋಜರಾಜ, ಡಾ.ರವೀಂದ್ರ ಬಟಗೇರಿ, ಡಾ.ಮಹಾಂತೇಶ ದುರಗಣ್ಣವರ, ಡಾ.ಕಾಳಮ್ಮ, ಡಾ. ಪ್ರಹ್ಲಾದ ಡಿ.ಎಮ್, ಡಾ.ತಿಮ್ಮಾರಡ್ಡಿ ಟಿ, ಡಾ.ನಾಗಪ್ಪ ಹೂವಿನಬಾವಿ ಹಾಗೂ ಸಿಂಡಿಕೇಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ಮತ್ತು ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಇದ್ದರು.

ಕವಿಗೋಷ್ಠಿ : ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅವರ ಅಧ್ಯಕ್ಷತೆಯಲ್ಲಿ ಕವಿಗಳಿಂದ ಕವನ ವಾಚನ ಕಾರ್ಯಕ್ರಮ ನಡೆಯಿತು.

ಕವಿಗಳಾದ ಶ್ರೀಮತಿ ಸಾವಿತ್ರಿ ಮುಜುಮದಾರ್, ಅಮೀನಸಾಬ, ಶ್ರೀಮತಿ ಮಾಲಾ ಬಡಿಗೇರ್, ನಟರಾಜ ಸೋನಾರ, ಜಿ.ಎಸ್.ಗೋನಾಳ, ವೀರಣ್ಣ ನಿಂಗೋಜಿ, ವೀರಣ್ಣ ವಾಲಿ, ಡಾ.ಮುಮ್ತಾಜ್‌ಬೇಗಂ, ಶರಣಪ್ಪ ಬಾಚಲಾಪುರ, ರಮೇಶ ಗಬ್ಬೂರ, ಶ್ರೀಮತಿ ವಿಜಯಲಕ್ಷಿ ಕೊಟಗಿ, ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್, ಶ್ರೀಮತಿ ಶೈಲಜಾ ಹಿರೇಮಠ, ಪವನಕುಮಾರ ಗುಂಡೂರು, ಶ್ರೀನಿವಾಸ ಚಿತ್ರಗಾರ, ಶ್ರೀಮತಿ ಅನುಸೂಯ ಜಹಗೀರದಾರ, ಡಾ.ಶರಣಪ್ಪ ಕೆ. ನಿಡಶೇಸಿ, ಅರಳಿ ನಾಗಭೂಷಣ, ಅಮರದೀಪ, ಸಿರಾಜ ಬಿಸರಳ್ಳಿ, ಶ್ರೀಮತಿ ಪುಷ್ಪಲತಾ ಏಳಬಾವಿ, ಶಿವಪ್ರಸಾದ ಹಾದಿಮನಿ, ರಾಮಚಂದ್ರ ಗೊಂಡಬಾಳ, ಶ್ರೀಮತಿ ಬಸಮ್ಮ ಅಂಕಲಿ, ಈಶ್ವರ ಹತ್ತಿ, ಶ್ರೀಮತಿ ನಿಂಗಮ್ಮ ಪಟ್ಟಣಶೆಟ್ಟಿ, ಮಹೆಬೂಬ್ ಮಕಾನದಾರ್, ಮಂಜುಳಾ ಶ್ಯಾದಿ, ವೀರೇಶ ಮೇಟಿ, ಡಾ. ಸೋಮಕ್ಕ, ರಮೇಶ ಬನ್ನಿಕೊಪ್ಪ, ಯಲ್ಲಪ್ಪ ಹರ್ನಾಳಗಿ, ಶ್ರೀಮತಿ ಸುಮಂಗಲಾ ಹಂಚಿನಾಳ, ಶರಣಬಸಪ್ಪ ಬಿಳಿಎಲೆ, ಶಿ.ಕಾ.ಬಡಿಗೇರ, ಫಕೀರಪ್ಪ ವಜ್ರಬಂಡಿ, ಶ್ರೀಮತಿ ಅನ್ನಪೂರ್ಣ ಮನ್ನಾಪುರ, ಡಾ. ಶಿವಕುಮಾರ ಮಾಲಿಪಾಟೀಲ, ಡಾ.ಜೀವನ್‌ಸಾಬ್ ಬಿನ್ನಾಳ, ರವೀಂದ್ರ ಬಾಕಳೆ, ಡಾ. ಕವಿತಾ ಶ್ರೀನಿವಾಸ ಹ್ಯಾಟಿ, ಅಲ್ಲಾವುದ್ದೀನ್ ಎಮ್ಮಿ, ಮಹೇಶ ಬಳ್ಳಾರಿ, ಸುರೇಶ ಕಂಬಳಿ, ಶ್ರೀಮತಿ ಅನ್ನಪೂರ್ಣ ಪದ್ಮಸಾಲಿ, ನಾಗರಾಜ ನಾಯಕ ಡೊಳ್ಳಿನ, ಶ್ರೀಮತಿ ಸವಿತಾ ಮುದಗಲ್, ಶಿವನಗೌಡ ಪೊಲೀಸ್ ಪಾಟೀಲ್, ಮಂಜುನಾಥ ಚಿತ್ರಗಾರ, ಉಮಾದೇವಿ ಪಾಟೀಲ್, ಪ್ರಭಾಕರ ಕುಂಬಾರ, ಶಂಕ್ರಯ್ಯ ಅಬ್ಬಿಗೇರಿಮಠ, ಬಸವರಾಜ ಸಂಕನಗೌಡರ್, ಮಲ್ಲಪ್ಪ ಕುರಿ, ಕು.ಹುಲ್ಲೇಶ, ಮೌನೇಶ ನವಲಹಳ್ಳಿ, ಮುಮ್ತಾಜ್‌ಬೇಗಂ ಕನಕಗಿರಿ, ಅಬ್ದುಲ್ ರಹೀಮ ಅವರು ಕವಿತಾ ವಾಚನ ಮಾಡಿದರು.

Leave a Reply

Your email address will not be published. Required fields are marked *

error: Content is protected !!