
ಕುಕನೂರು : ಶ್ರೀ ದುರ್ಗಾದೇವಿ ಜಾತ್ರೆ ಮೂರ್ತಿ ಮೆರವಣಿಗೆ
ಕರುನಾಡ ಬೆಳಗು ಸುದ್ದಿ
ಕುಕನೂರು, 19- ಪಟ್ಟಣದ ಕೋಳಿಪೇಟೆಯ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಪ್ರತಿ ಮೂರು ವರ್ಷಕ್ಕೆ ಒಮ್ಮೆ ಜರಗುವ ಜಾತ್ರೋತ್ಸವ ಮೂರ್ತಿ ಮೆರವಣಿಗೆ ಕಾರ್ಯಕ್ರಮ ಆಗಸ್ಟ್ 20ರಂದು ಮಂಗಳವಾರ ಜರುಗಲಿದೆ.
ದೇವಿಯ ಜಾತ್ರೋತ್ಸವ ನಿಮಿತ್ಯವಾಗಿ ಸೋಮವಾರ ಬೆಳಗ್ಗೆ 6 ಗಂಟೆಗೆ ದೇವಿಯ ವರ್ಣರಂಜಿತ ವಿಗ್ರಹಕ್ಕೆ ಯಜ್ಞ ಹೋಮ ಅವನ ಮಂತ್ರೋಪಗಳು ಹಾಗೂ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಹೂಗಳಿಂದ ಶೃಂಗಾರ ಗೊಳಿಸಿದ ಶ್ರೀ ದುರ್ಗಾದೇವಿಯ ಮೂರ್ತಿಯನ್ನು ಪಟ್ಟಣದ ಮುಖ್ಯಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು ನಂತರ ಕೊಂಡದಲ್ಲಿ ಪೂಜೆ ನೆರವೇರಿಸಿ ಗದ್ದಿಗೆಯ ಕೂರಿಸಲಾಗುವುದು ಸಂಜೆ 6 ಗಂಟೆಗೆ ನಂದಾದೀಪ ಹಾಕಲಾಗುವುದು ಕಾರ್ಯಕ್ರಮದಲ್ಲಿ ಭಜನೆ ಡೊಳ್ಳು ಕಳಸದಾರತಿ ಮೇಳದವರು ಭಾಗವಹಿಸುವರು ಪಟ್ಟಣದ ಸದ್ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಸಾದ ಸೇವಿಸಿ ಪುನೀತರಾಗುವಂತೆ ದೇವಸ್ಥಾನ ಸಮಿತಿಯವರು ಪ್ರಕಟಣೆಗೆ ತಿಳಿಸಿದ್ದಾರೆ.