
ಇಂದು ಕುಕನೂರ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ
ಕರುನಾಡ ಬೆಳಗು ಸುದ್ದಿ
ಕುಕನೂರು, 7- ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಇಂದು ಶುಕ್ರವಾರ ಅದ್ದೂರಿಯಾಗಿ ಜರುಗಲಿದೆ ಎಂದು ಸಮಸ್ತ ಭೋವಿ (ವಡ್ಡರ್) ಸಮಾಜದವರು ಹೇಳಿದರು.
ಇಂದು ನ. 8 ರಂದು ಶುಕ್ರವಾರ ಮುಂಜಾನೆ 10:30 ರಿಂದ ಸಕಲ ವಾದ್ಯಗಳೊಂದಿಗೆ ಶ್ರೀ ದುರ್ಗಾದೇವಿಯ ಪಲ್ಲಕ್ಕಿ ಉತ್ಸವವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ಮಾಡಲಾಗುವುದು ಸಕಲ ಸದ್ಭಕ್ತರ ಅಪ್ಪಣೆಯ ಮೇರೆಗೆ ಶ್ರೀ ದುರ್ಗಾದೇವಿಯ ಸಕಲ ಭಕ್ತರು ಆಗಮಿಸಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಈ ಮೆರವಣಿಗೆಯಲ್ಲಿ ಶ್ರೀ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಮಹಾ ಸ್ವಾಮಿಜಿಗಳು ಭೋವಿ ಗುರುಪೀಠ ಬಾಗಲಕೋಟಿ, ಚಿತ್ರದುರ್ಗ, ಹಾಗೂ ಶ್ರೀ ಪರಮ ಪೂಜ್ಯ ಡಾ.ಮಹಾದೇವ ಸ್ವಾಮೀಜಿಗಳು ಶ್ರೀ ಅನ್ನದಾನಿಶ್ವರ ಶಾಖಾ ಮಠ ಕುಕನೂರ ಅವರು ದಿವ್ಯ ಸಾನಿಧ್ಯ ನೀಡಲಿದ್ದಾರೆ. ಶ್ರೀ ದುರ್ಗಾದೇವಿಯ ಅನ್ನ ಸಂತರ್ಪಣೆ ೧.೩೦ಕ್ಕೆ ನೆರವೇರಲಿದೆ.
ಸಕಲ ಸದ್ಭಕ್ತರು ಅನ್ನ ಸಂತರ್ಪಣೆ ಸ್ವೀಕರಿಸಿ ಆಶೀರ್ವಾದ ಪಡಿಯಬೇಕು. ಶ್ರೀ ದುರ್ಗಾದೇವಿ ಅನುಗ್ರಹ ಎಲ್ಲಾ ಭಕ್ತಾದಿಗಳ ಮೇಲಿರಲೆಂದು ಎಲ್ಲರೂ ತನು,ಮನ, ಧನ ಗಳಿಂದ ಸೇವೆ ಸಲ್ಲಿಸಿ ಶ್ರೀ ದುರ್ಗಾದೇವಿಯ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿ ಎಂದು ಕುಕನೂರ ಸಮಸ್ತ ಭೋವಿ (ವಡ್ಡರ್) ಸಮಾಜದ ಅಂಬೇಡ್ಕರ್ ನಗರದ ಭಾಂಧವರು ಮತ್ತು ಸದ್ಭಕ್ತ ಮಂಡಳಿ ಹಾಗೂ ಗುರು ಹಿರಿಯರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.