
ಸಂಗನಕಲ್ಲು : ಗ್ರಾಮ ದೇವತೆ ಎಲ್ಲಮ್ಮ ದೇವಿಗೆ ಕುಂಭೋತ್ಸವ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 23- ಸಮೀಪದ ಸಂಗನಕಲ್ಲು ಗ್ರಾಮದಲ್ಲಿ ನೆಲೆಸಿರುವ ಗ್ರಾಮ ದೇವತೆ ಎಲ್ಲಮ್ಮ ದೇವಿಯವರಿಗೆ ಇಂದು 101, ಕುಂಬೋತ್ಸವ, ಮತ್ತು 101, ಕಳಸಗಳ ಮೆರವಣಿಗೆಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.
ಇಂದು ಮುಂಜಾನೆ ದೇವಸ್ಥಾನದ ಅರ್ಚಕ ಶಿವಸ್ವಾಮಿ, ಮತ್ತು ಕಾರ್ಯಕ್ರಮದ ನಿರ್ವಾಹಕ ಹೊನ್ನೂರು ಸ್ವಾಮಿ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷರು, ಮತ್ತು ಗ್ರಾಮದ ಮುಖಂಡರಾದ, ಅಕ್ಕಿ, ಕೃಷ್ಣಪ್ಪ, ಅವರ ಜೊತೆಗೆ ಹಲವಾರು ಮಂದಿ ಮುಖಂಡರ ಸಮಕ್ಷದಲ್ಲಿ ಮುತ್ತೈದೆ ಮಹಿಳೆಯರು,101 ಪೂರ್ಣ ಜಲಕುಂಬಗಳು, ಮತ್ತು ಕಳಸಗಳನ್ನು ಹೊತ್ತುಕೊಂಡು ದೇವಸ್ಥಾನದವರೆಗೆ ಸಾಗಿದರು. ನಂತರ ದೇವಸ್ಥಾನದಲ್ಲಿ ಅಮ್ಮನವರಿಗೆ ವಿಶೇಷ ಅಲಂಕಾರಗಳು ಮಾಡಿ, ಭಕ್ತಿಯಿಂದ ಅರ್ಚನೆ ಮಾಡಲಾಯಿತು.
ನಾನಾ ಭಾಗಗಳಿಂದ ಬಂದ ಭಕ್ತಾದಿಗಳಿಗೆ ಮುಖಂಡರು ಮತ್ತು ಗ್ರಾಮಸ್ಥರು ತೀರ್ಥ ಪ್ರಸಾದವನ್ನು ನೀಡಿದರು.
ಈ ಕಾರ್ಯಕ್ರಮಗಳಲ್ಲಿ ಗ್ರಾಮದ ಮುಖಂಡರು ಸುಂಕಯ್ಯ, ಪಂಪಣ್ಣ, ಶಂಕ್ರಪ್ಪ, ತಳವಾರ್ ತಿಮ್ಮಪ್ಪ, ಈ ರನ ಗೌಡ, ಅಂದ್ರಳು ಗಾದಿಲಿಂಗ, ಪಾರ್ವತಮ್ಮ, ಕಲ್ಲಳ್ಳಿ ಸೋಮಪ್ಪ, ಕಟ್ಟೆಗೌಡ, ರಂಜಾನ್ ಸಾಬ್ ಗಳ ಜೊತೆಗೆ ಗ್ರಾಮಸ್ಥರು ಮತ್ತು ಮುಖಂಡರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.