
ಕುಷ್ಟಗಿ ಗಣೇಶ ವಿಸರ್ಜನೆಯಲ್ಲಿ ಪಟಾಕಿ ಅವಘಡ: ಎಡಗಣ್ಣಿಗೆ ಗಂಭೀರ ಗಾಯ
ಐದು ದಿನಗಳ ಗಣೇಶ ವಿಸರ್ಜನೆ ಕಾರ್ಯಕ್ರಮವು ಕುಷ್ಟಗಿ ನಗರದಲ್ಲಿ ವಿವಿಧ ಡಿಜೆ ಸೌಂಡ್ ಗಳ ಮದ್ಯೆ ಸಹಸ್ರಾರು ಯುವಕರ ನೃತ್ಯದೊಂದಿಗೆ ಗಣೇಶ ಮೂರ್ತಿ ಮೆರವಣಿಗೆ ನಡೆಯುತ್ತಿದ್ದ ವೇಳೆ ಪಟಾಕಿ ಅವಘಡ ಸಂಭವಿಸಿ ಪಟ್ಟಣದ ಮಾರುತಿ ನಗರದ ಓರ್ವ ನಿವಾಸಿ ಕಲ್ಲೇಶ ಎಂಬುವ ವ್ಯಕ್ತಿಗೆ ಎಡಗಣ್ಣು ತೀರ್ವತರ ಗಂಭೀರ ಗಾಯವಾಗಿದ್ದು ಕುಷ್ಟಗಿ ತಾಲೂಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ ಜಿಲ್ಲಾಸ್ಪತ್ರೆಗೆ ಕಳುಹಿಸಿದ ಘಟನೆ ಇದೀಗ ತಾನೆ ನಡೆದಿದೆ.
ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಅಮಲಿನಲ್ಲಿ ಕಲ್ಲೇಶ್ ಮಾರುತಿ ನಗರ ಯುವಕನಿಗೆ ವನ್ ಶಾರ್ಟ್ ರಾಕೆಟ್ ಪಟಾಕಿಯಿಂದ ಎಡಕಣ್ಣಿಗೆ ತೀವ್ರತರವಾದ ಭಾರಿ ಪ್ರಮಾಣದಲ್ಲಿ ಗಾಯವಾಗಿದ್ದು ಆತನ ಆರೋಗ್ಯವು ಬಹಳ ಚಿಂತಾ ಜನಕವಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಇದೇ ರೀತಿ ಪಟಾಕಿ ಹಚ್ಚುವ ಭರದಲ್ಲಿ ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳುವ ಘಟನೆಗಳು ಆಗಾಗ ನಡೆಯುತ್ತಿದ್ದು ಸಾರ್ವಜನಿಕರು ಹಾಗೂ ಯುವಕರು ಈ ಬಗ್ಗೆ ಎಚ್ಚರ ವಹಿಸಿ ತಮ್ಮ ಜೀವ ರಕ್ಷಿಸಿಕೊಳ್ಳಲು ಜಾಗರೂಕರಾಗಿರಬೇಕೆಂದು ಸಿಪಿಐ ಯಶವಂತ ಬಿಸನಳ್ಳಿ ಹಾಗೂ ಪಿಎಸ್ಸೈ ಹನಂತಪ್ಪ ತಳವಾರ ತಿಳಿಸಿದ್ದಾರೆ.