
ವಿಶ್ವ ಸ್ತನಪಾನ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ: ತಾಲೂಕಿನ ಯಡ್ಡೋಣಿ ಗ್ರಾಮದ ಆರ್ಯುವೇದಿಕ ಆಸ್ಪತ್ರೆಯಲ್ಲಿ ಪೌಷ್ಠಿಕ ಶಿಬಿರ ಹಾಗೂ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕ್ಕೆ ಇತ್ತೀಚೆಗೆ ಚಾಲನೆ ನೀಡಲಾಯಿತು.
ವೈದ್ಯಾಧಿಕಾರಿ ಡಾ. ವಿರುಪಾಕ್ಷ ತಾಳಿಕೋಟಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ತಾಯಂದಿಯರು ತಮ್ಮ ಮಕ್ಕಳನ್ನು ಸರಿಯಾಗಿ ಆರೈಕೆ ಮಾಡಿಕೊಳ್ಳಲು ಮುಂದಾಗಬೇಕು. ಕನಿಷ್ಠ 6 ತಿಂಗಳವರಿಗೆ ಮಗುವಿಗೆ ಹಾಲು ಉಣಿಸುವ ಮೂಲಕ ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ಸೇವಿಸಬೇಕಿದೆ. ಗರ್ಭಿಣಿ ಬಾಣಂತಿಯರು ತಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಯುವ ಧರೀಣ ಆದೇಶ ಬಿ.ರೊಟ್ಟಿ, ಗ್ರಾಮ ಪಂಚಾಯಿತಿ ಸದಸ್ಯೆ ಶಂಕ್ರಮ್ಮ ಬಿಜಕಲ್, ಅಂಗನವಾಡಿ ಕಾರ್ಯಕರ್ತೆಯರಾದ ಹನುಮಕ್ಕಾ ಎಸ್. ಗುನ್ನಾಳ, ಪದ್ಮಾ ವಂಕಲಕುAಟಿ, ಆಶಾ ಕಾರ್ಯಕರ್ತೆಯರಾದ ಕಮಲಾಕ್ಷಿ ಹಿರೇಮಠ, ರೇಣುಕಾ ಬಡಿಗೇರ್, ಗರ್ಭಿಣಿಯರು, ಬಾಣಂತಿಯರು, ಶಾಲಾ ವಿದ್ಯಾರ್ಥಿಗಳು ಹಾಗೂ ಇನ್ನಿತರರು ಇದ್ದರು.